ಕಿರುತೆರೆಯಲ್ಲಿ ಧಾರಾವಾಹಿಗಳ ಪೈಕಿ ಅಂದಿನಿಂದ ಇಂದಿನ ವೆರೆಗೂ ಕನ್ನಡಿಗರ ಮನಸ್ಸನ್ನು ಗೆದ್ದ ಧಾರಾವಾಹಿ ಎಂದ್ರೆ ಅದು “ಕಲರ್ಸ್ ಕನ್ನಡಡಲ್ಲಿ” ಪ್ರಸಾರವಾಗುವ “ಕನ್ನಡತಿ”.ಈ ಧಾರಾವಾಹಿ ಜನರ ಮನಸ್ಸಿನಲ್ಲಿ ಅಲ್ಲದೆ ಟಿ ಆರ್ ಪಿ ವಿಷಯದಲ್ಲೂ ನಂಬರ್ ಒನ್ ಸ್ಥಾನದಲ್ಲಿ ನೆಲೆಯೂರಿದ್ದಾರೆ ಎಂದರೆ ತಪ್ಪಾಗಲಾರದು.ದಿನ ಕಳೆಯುತ್ತಿದ್ದಂತೆ ಈ ಧಾರವಾಹಿಯಲ್ಲಿ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ.ಈ ಕಾರಣದಿಂದಲೇ ಪ್ರೇಕ್ಷಕರಿಗೆ ಎಲ್ಲೂ ಕೊಡ ಮನೋರಂಜನೆಗೆ ಯಾವ ಕುಂದುಕೊರತೆಗಳನ್ನು ಬಾರದಂತೆ ತಮ್ಮ ಕತೆಯಲ್ಲಿ ಬಹಳ ತಿರುವುಗಳನ್ನು ನೀಡುತ್ತಾ ಬಂದಿದ್ದಾರೆ.

ಈ ಹಿಂದೆ “ಹರ್ಷ ಭುವಿಯ” ಮದುವೆ ಸಂಧರ್ಭದ ಎಪಿಸೊಡ್ ಕೊಡ ಬಹಳ ಹೈಪ್ ಪಡೆದುಕೊಂಡಿತ್ತು.ಹಲವಾರು ಅಡೆತಡೆಗಳನ್ನು ಎದುರಿಸುತ್ತಾ ಹರ್ಷ ಭುವಿ ಮದುವೆ ಹೇಗೆ ಆಗಬಹುದು ಎಂಬ ಪ್ರಶ್ನೆ ಹಾಗೂ ಗೊಂದಲಗಳನ್ನು ಹುಟ್ಟುಹಾಕುತ್ತಾ ಪ್ರೇಕ್ಷಕರಿಗೆ ಕುತೂಹಲ ಮುಡಿಸುತ್ತಾ ದಿನದಿಂದ ದಿನಕ್ಕೆ ತನ್ನ ವೀಕ್ಷಕರ ಸಂಖ್ಯೆ ಕೊಡ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇವರ ಮದುವೆಯ ನಂತರವೂ ಕೊಡ ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಕೊಡ ಸಾಕಷ್ಟು ಟ್ವಿಸ್ಟ್ಗಳನ್ನು ನೀಡಿದ್ದಾರೆ.ಈ ರೀತಿ ಒಂದು ಸಣ್ಣ ಪುಟ್ಟಾ ಪಾತ್ರಗಳಿಗೂ ಕೊಡ ಪ್ರಾಮುಕ್ಯತೆಯನ್ನು ನೀಡುತ್ತಾ ಚಿಕ್ಕ ದೃಶ್ಯಗಳನ್ನು ಕೊಡ ಮಿಸ್ ಮಾಡದೆ ನೋಡಬೇಕು ಎಂಬ ಆಸೆ ಹುಟ್ಟಿಸುವಂತೆ ಮಾಡುತ್ತಿದೆ.
ಈಗ ಅಮ್ಮಮ್ಮನ ಆರೋಗ್ಯದ ವಿಚಾರದಲ್ಲಿ ಈ ಧಾರಾವಾಹಿ ತನ್ನ ಮುಂದಿನ ಸಂಚಿಕೆಗಳನ್ನು ಸಾಗಿಸುತ್ತಿದೆ.ಈ ಹಿಂದೆ ಅಮ್ಮಮ್ಮನನ ಪಾತ್ರದರಿ ಕೆಲ ಕಾರಣಗಳಿಂದ ಹೊರ ದೇಶ ಪ್ರವಾಸ ಕೈಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರು ಕಾಣಿಸಿಕೊಳ್ಳದಂಥಹ ಸನ್ನಿವೇಶಗಳನ್ನು ಸೃಷ್ಟಿಸಿದ್ದರು.ಆಗ ಈ ಧಾರಾವಾಹಿಯ ಅಭಿಮಾನಿಗಳು ಬಹಳ ಕೋರಿಕೆಗಳನ್ನು ಸಲ್ಲಿಸಿ ಈ ಧಾರಾವಾಹಿಗೆ “ರತ್ನಮ್ಮ” ಬೇಕೇ ಬೇಕು ಅವರು ಇದ್ದರೆ ಮಾತ್ರ ಪ್ರಸಾರ ಪಡೆಯುವ ಎಪಿಸೋಡ್ ಗಳಿಗೆ ಒಂದು ಬೆಲೆ ಎಂದೆಲ್ಲಾ ಸಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದನ್ನು ನೋಡಿ.ರತ್ನಮ್ಮ ನ ಪಾತ್ರ ಮತ್ತೆ ಮರಳಿ ಬರುವಂತೆ ಮಾಡಿದರು.
ಮತ್ತೆ ಕನ್ನಡತಿ ಧಾರಾವಾಹಿಯಲ್ಲಿ ಮತ್ತೆ ಅಮಮ್ಮನನ್ನು ನೋಡಿ ವೀಕ್ಷಕರು ಬಹಳ ಸಂತಸ ಪಟ್ಟಿದ್ದರು.ಕನ್ನಡತಿ ಧಾರಾವಾಹಿಯ “ಮಾಲಾ ಕೆಫೆ” ಮುಖ್ಯಸ್ಥೆ ಆಗಿರುವ ರತ್ನಮಾಲ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿರುವುದಾಗಿ ನಿಮಗೆಲ್ಲರಿಗೂ ತಿಳಿದೇ ಇದೆ.ಅಮಮ್ಮನಿಗೆ ಮರವಿನ ಕಾಯಿಲೆ ಕೊಡ ಹೆಚ್ಚಾಗುತ್ತಿದೆ.ಇದರಿಂದ ಮನೆಯವರಿಗೆ ಆತಂಕ ಹೆಚ್ಚಾಗಿದ್ದರೆ “ಸಾನಿಯಾಗೆ” ಮಾತ್ರಾ ಬಂಪರ್ ಅಪರ್ ಸಿಕ್ಕಂತಾಗಿದೆ.ತನ್ನ ವಿಡಿಯೋ ರತ್ನಮಾಲ ಫೋನ್ ಇಂದ ಡಿಲೀಟ್ ಮಾಡಿ ತನ್ನ ತಪ್ಪು ಗಳೆಲ್ಲವೂ ಮರೆತಿರುವುದರಿಂದ ತನಗೆ ಇನ್ನು ಮುಂದೆ ಯಾವ ತೊಂದರೆಗಳು ಇರುವುದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾಳೆ.
ಈಗ ರತ್ನಮ್ಮನ ಆರೋಗ್ಯದ ವಿಚಾರದಲ್ಲಿ ಬಹಳ ಹದಗೆಟ್ಟಿದ್ದು ದಿನದಿಂದ ಮರೆವಿನ ಕಾಯಿಲೆ ಹೆಚ್ಚಾಗುತ್ತಿರುವುದು ಎಲ್ಲರಲ್ಲೂ ಭಯ ಮೂಡಿಸುತ್ತಿದೆ. ಆದರೆ ಈ ವಿಚಾರದ ಬಗ್ಗೆ ಯಾವ ಅರಿವು ಕೊಡ ಇಲ್ಲದೆ ಇದ್ದ ರತ್ನಮ್ಮನಿಗೆ ಹರ್ಷ ಎಲ್ಲಾ ಸಮಸ್ಯೆಗಳನ್ನು ಹೇಳಿ ಇನ್ನು ಮುಂದೆ ಕಂಪನಿಯ ಜವಾಬ್ದಾರಿ ನಾನು ತೆಗೆದುಕೊಂಡು ನಿಭಾಯಿಸುತ್ತೇನೆ ನೀನು ಮನೆಯಲ್ಲಿ ಇದ್ದು ರೆಸ್ಟ್ ಮಾಡು ಎಂದು ಹೇಳುತ್ತಾನೆ.ಆಗ ತನ್ನ ಮರೆವಿನ ಕಾಯಿಲೆ ಬಗ್ಗೆ ತಿಳಿದ ಕೊಡಲೇ ರತ್ನಮಾಲ ಶಾಕ್ ಗೆ ಒಳಗಾಗಿ ಕೂತ ಜಾಗದಲ್ಲಿಯೇ ಕುಸಿದು ಬಿಳುತ್ತಾಳೆ.
ತಕ್ಷಣವೇ ಹರ್ಷ “ದೇವ್” ನನ್ನು ಕರೆದು ಏನಾಯಿತು ಎಂದು ಕೇಳಿದಾಗ ದೇವ್ ರತ್ನಮಾಲ ನಾಡಿ ಮಿಡಿತ ನೋಡಿ ಅಮಮ್ಮ ಕೋಮ ಹೋಗಿದ್ದಾರೆ.ತಕ್ಷಣ ಹಾಸ್ಪಿಟಲ್ ಸೇರಿಸಬೇಕು ಎಂದು ಎಲ್ಲರಿಗೂ ತಿಳಿಸುತ್ತಾನೆ.ಈಗ ರತ್ನಮ್ಮ ಇರುವ ದೃಶ್ಯಗಳಿಗೆ ಕತ್ತರಿ ಹಾಕಲು ಈ ರೀತಿ ಮಾಡಿದ್ದಾರಾ? ಆ ರೀತಿ ಮಾಡಿದರೆ ಅವ್ರಿಗೆ ಕೊಡ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗತ್ತದಾ ಅಥವಾ ಈ ಉದ್ದೇಶದ ಹಿಂದೆ ಇನ್ನು ದೊಡ್ಡ ಟ್ವಿಸ್ಟ್ ಅವಿತಿದೆಯಾ ಎಂದು ನಾವೆಲ್ಲರೂ ಮುಂಬರುವ ಎಪಿಸೋಡ್ ಗಳನ್ನು ವೀಕ್ಷಿಸಬೇಕಿದೆ.