ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಂದೆಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಜೀವಂತ. ಅವರನ್ನು ತೆರೆಮೇಲೆ ಹೊಸದಾಗಿ ನೋಡುವ ಅವಕಾಶ ಸಿಗುತ್ತಿಲ್ಲ, ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ ಎನ್ನುವ ನೋವು ಅವರ ಫ್ಯಾನ್ಸ್ ಗಳಲ್ಲಿ ಇದೆ. ಅಪ್ಪು ಅವರ ಹಳೆಯ ವಿಡಿಯೋಗಳು, ಅವರ ಮಾತುಗಳು ಎಲ್ಲವೂ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಅಭಿಮಾನಿಗಳು ಅದೆಲ್ಲವನ್ನು ಶೇರ್ ಮಾಡಿಕೊಳ್ಳುತ್ತಾರೆ.. ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ ಎಂದು ಅನ್ನಿಸುವ ಹಾಗೆ ಮಾಡುತ್ತಾರೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಲ್ಲಾ ಕಡೆ ನಾವು ಅಪ್ಪು ಅವರನ್ನು ನೋಡಬಹುದು. ಒಂದೊಂದು ರಸ್ತೆಯಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ ಅಪ್ಪು ಅವರ ಫೋಟೋ ಇರುತ್ತದೆ, ಅಪ್ಪು ಅಬರ ಹೆಸರು ಕಂಡುಬರುತ್ತದೆ. ಜನರಿಗೆ ಅವರನ್ನು ಕಂಡರೆ ಅಷ್ಟರ ಮಟ್ಟಿಗೆ ಪ್ರೀತಿ ಮತ್ತು ಅಭಿಮಾನ.

ಅಭಿಮಾನಿಗಳು ಅಪ್ಪು ಅವರ ಸಿನಿಮಾ ರೀರಿಲೀಸ್ ಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವರ್ಷ ಅಭಿಮಾನಿಗಳಿಗೆ ಜಾಕಿ ಸಿನಿಮಾ ರೀರಿಲೀಸ್ ಮಾಡಲಾಗಿತ್ತು, ಈ ವರ್ಷ ಅಪ್ಪು ಸಿನಿಮಾ ರೀರಿಲೀಸ್ ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪ್ಪು. ಈ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದು ನಮಗೆಲ್ಲ ಗೊತ್ತೇ ಇದೆ. ಒಂದೊಂದು ಡೈಲಾಗ್ ಗಳು ಅಭಿಮಾನಿಗಳಿಗೆ ಸಂತೋಷ ತರುವಂಥ ಡೈಲಾಗ್ ಗಳೇ ಆಗಿದೆ. ಅಪ್ಪು ಅವರ ಡೈಲಾಗ್ ಗಳು, ಆ ಡ್ಯಾನ್ಸ್ ಎಲ್ಲವನ್ನು ಸಹ ನಾವು ಮರೆಯಲು ಸಾಧ್ಯವಿಲ್ಲ. ಆ ಹಾಡುಗಳನ್ನ ಇವತ್ತಿಗು ಎಲ್ಲರೂ ಎಂಜಾಯ್ ಮಾಡುತ್ತಾರೆ. ಅಪ್ಪು ಅವರ ಡ್ಯಾನ್ಸ್ ಬಗ್ಗೆ ಹೇಳೋದೇ ಬೇಡ..

ಈ ವರ್ಷ ರೀರಿಲೀಸ್ ನಲ್ಲಿ ಅಪ್ಪು ಅತಿಹೆಚ್ಚು ಹೌಸ್ ಫುಲ್ ಶೋಗಳನ್ನು ಕಂಡಿದೆ, ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಒಂದೊಂದು ಶೋನಲ್ಲೂ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕಿರುಚಾಟ ಸೆಲೆಬ್ರೇಷನ್ ಗಳು ಮುಗಿಲು ಮುಟ್ಟಿದೆ. ಥಿಯೇಟರ್ ಗಳ ರೂಫ್ ಕಿತ್ತು ಹೋಗೋ ಮಟ್ಟಕ್ಕೆ ಅಭಿಮಾನಿಗಳು ಅಪ್ಪು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಶುರುವಿನಲ್ಲಿ ಎಲ್ಲರೂ ಎಂಜಾಯ್ ಮಾಡಿದರು ಸಹ, ಸಿನಿಮಾ ಮುಗಿಯುವ ವೇಳೆಗೆ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ ಎನ್ನುವುದು ಅರಿವಾಗಿ, ಬೇಸರ ಆಗುವುದು ಖಂಡಿತ. ಅಭಿಮಾನಿಗಳು ಅಪ್ಪು ಅವರನ್ನು ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಅಭಿಮಾನಿಗಳ ಸಾಲಿಗೆ ನಿರೂಪಕಿ ಅನುಶ್ರೀ ಕೂಡ ಸೇರುತ್ತಾರೆ.

ಅನುಶ್ರೀ ಅವರು ಯಾವಾಗಲೂ ತಾನು ಅಪ್ಪು ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಪ್ಪು ಅವರು ಇದ್ದಾಗಿನಿಂದಲೂ ಅಪ್ಪು ಅವರ ಜೊತೆಗೆ ಹಾಗೂ ಅವರ ಕುಟುಂಬದ ಜೊತೆಗೆ ಅನುಶ್ರೀ ಅವರಿಗೆ ಒಳ್ಳೆಯ ಒಡನಾಟ ಇದೆ. ಅಪ್ಪು ಅವರ ಹಲವು ಸಂದರ್ಶನಗಳನ್ನು ಅನುಶ್ರೀ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನ ಲೋಗೋ ಕೂಡ ಅಪ್ಪು ಅವರ ಫೋಟೋವನ್ನು ಹಾಕಿದ್ದಾರೆ ಅನುಶ್ರೀ. ಶಿವಣ್ಣ ಹಾಗೂ ಅಪ್ಪು ಸರ್ ಇಬ್ಬರಿಗೂ ಕೂಡ ಅನುಶ್ರೀ ತುಂಬಾ ಕ್ಲೋಸ್. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೆಟ್ ನಲ್ಲಿ ಅನುಶ್ರೀ ಶಿವಣ್ಣ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಗೀತಕ್ಕ ಸಹ ಹೇಳಿದ್ದರು. ಇನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಅನುಶ್ರೀ ಜೊತೆಗೆ ಆತ್ಮೀಯರು. ಅನುಶ್ರೀ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಅಶ್ವಿನಿ ಮೇಡಂ ಸಹ ಪಾಲ್ಗೊಂಡಿದ್ದಾರೆ.

ಇನ್ನು ಅನುಶ್ರೀ ಅವರಿಗೆ ಅಪ್ಪು ಅವರನ್ನು ಕಂಡರೆ ಎಷ್ಟು ಪ್ರೀತಿ ಎಂದರೆ, ಅವರ ಯೂಟ್ಯೂಬ್ ಚಾನೆಲ್ ಸಂದರ್ಶನಗಳಲ್ಲಿ ಬರುವ ಪ್ರತಿಯೊಬ್ಬ ಗೆಸ್ಟ್ ಗೆ ಕೂಡ ಅಪ್ಪು ಅವರ ಮುಖ ಇರುವ ಬೆಳ್ಳಿ ನಾಣ್ಯವನ್ನು ಕೊಡುತ್ತಾರೆ. ಎಲ್ಲಾ ವೇದಿಕೆಯಲ್ಲಿ ಅಪ್ಪು ಅವರ ಹೆಸರಿನಿಂದಲೇ ಕಾರ್ಯಕ್ರಮ ಶುರು ಮಾಡುತ್ತಾರೆ. ಅಪ್ಪು ಅವರನ್ನು ನೆನೆಯದೆ ಅವರ ಯಾವ ಕಾರ್ಯಕ್ರಮ ಕೂಡ ಮುಗಿಯುವುದಿಲ್ಲ, ಆ ಮಹಾನುಭಾವನನ್ನು ಕಂಡರೆ ಅನುಶ್ರೀ ಅವರಿಗೆ ಅಷ್ಟು ಪ್ರೀತಿ. ಅಪ್ಪು ಅವರಿಗೂ ಸಹ ಅನುಶ್ರೀ ಅವರನ್ನು ಕಂಡರೆ ಅಷ್ಟೇ ಗೌರವ, ಆತ್ಮೀಯತೆ, ಅಭಿಮಾನ ಇತ್ತು. ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಗೆ ಸಪೋರ್ಟ್ ಮಾಡಿದ್ದರು ಪವರ್ ಸ್ಟಾರ್. ಅವರ ಸಿನಿಮಾ ಪ್ರೊಮೋಷನ್ ಸಹ ಮಾಡಿದ್ದರು.

ಇಷ್ಟು ಆತ್ಮೀಯವಾದ ಅನುಶ್ರೀ ಅವರಿಗೆ ಅಶ್ವಿನಿ ಮೇಡಂ ಒಂದು ಬಿಗ್ ಗಿಫ್ಟ್ ಕೊಟ್ಟಿದ್ದಾರೆ. ಕೋವಿಡ್ ಸಮಯದಲ್ಲಿ ಅಪ್ಪು ಅವರು ಹೆಚ್ಚಾಗಿ ಬಳಸುತ್ತಿದ್ದ ಸೈಕಲ್ ಅನ್ನು ಅನುಶ್ರೀ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ವಿಚಾರದ ಬಗ್ಗೆ ಅನುಶ್ರೀ ಅವರು ಎಲ್ಲಿಯು ಹೇಳಿಕೊಂಡಿಲ್ಲ, ಆದರೆ ಮಾಧ್ಯಮದವರಿಗೆ ಈ ಬಗ್ಗೆ ಗೊತ್ತಾಗಿ, ಅನುಶ್ರೀ ಅವರನ್ನು ಕೇಳಿದಾಗ, “ಈ ವಿಷಯ ನಿಮಗೆ ಹೇಗೆ ಗೊತ್ತಾಯಿತು? ಇವತ್ತಿಗೂ ಆ ಸೈಕಲ್ ನನ್ನ ಹತ್ತಿರ ಇದೆ. ಅದು ಅಪ್ಪು ಸರ್ ಬಳಸುತ್ತಿದ್ದ ಸೈಕಲ್, ಹಾಗೆಯೇ ಇಡಬಾರದು, ಬಳಸಬೇಕು ಎಂದಿದ್ದರು. ಅದು ಅಪ್ಪು ಸರ್ ಓಡಾಡಿದ, ಅವರು ಕುಳಿತುಕೊಂಡಿದ್ದ ಸೈಕಲ್. ನನ್ನ ಮನೆಯಲ್ಲಿ ಸಿಂಹಾಸನದ ಹಾಗಿದೆ.. ಅಪ್ಪು ಸರ್ ಜೊತೆಗೆ ಬಹಳಷ್ಟು ನೆನಪುಗಳಿಗೆ. ಅವರ ಜೊತೆ ಊಟ ಮಾಡಿದ್ದೀನಿ, ಯೋಗ ಮಾಡಿದ್ದೀನಿ.

ಸಾಕಷ್ಟು ಮಾತಾಡಿದ್ದೀನಿ. ಡ್ಯಾನ್ಸ್ ಮಾಡಿದ್ದೀನಿ. ಅದ್ಯಾವುದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ..” ಎಂದಿದ್ದಾರೆ ಅನುಶ್ರೀ. ಇನ್ನು ಅನುಶ್ರೀ ಅವರು ಈ ವರ್ಷ ಅಪ್ಪು ಅವರ ಹುಟ್ಟುಹಬ್ಬದ ದಿವಸ ಅಪ್ಪು ಸಿನಿಮಾ ನೋಡಿ ಎಂಜಾಯ್ ಮಾಡಿದರು, ಅಪ್ಪು ಅವರಿರುವ ಕಂಠೀರವ ಸ್ಟುಡಿಯೋ ಗೆ ಹೋಗಿ ಪೂಜೆ ಮಾಡಿ, ಅಭಿಮಾನಿಗಳ ಜೊತೆಗೆ ಹಬ್ಬದ ಹಾಗೆ ಆಚರಣೆ ಮಾಡಿ ಬಂದರು. ನಿಜಕ್ಕೂ ಅನುಶ್ರೀ ಅಪ್ಪಟ ಅಭಿಮಾನಿ ಎಂದು ಹೇಳುವುದಕ್ಕೆ ತುಂಬಾ ಹೆಮ್ಮೆ ಆಗುತ್ತದೆ. ತಮ್ಮ ತಾಯಿಯನ್ನು ಹೊರತು ಪಡಿಸಿ ಅತಿಯಾಗಿ ಪ್ರೀತಿಸುವ ವ್ಯಕ್ತಿ ಅಪ್ಪು ಸರ್ ಎಂದು ಅನುಶ್ರೀ ಯಾವಾಗಲೂ ಹೇಳುತ್ತಾರೆ. ಅಪ್ಪು ಅವರನ್ನು ಕಂಡರೆ ಅಷ್ಟು ಪ್ರೀತಿ ಮತ್ತು ಗೌರವ ಅವರಲ್ಲಿದೆ. ಈ ಗೌರವ, ಪ್ರೀತಿ ಅಭಿಮಾನ ಸದಾ ಹೀಗೆ ಮುಂದುವರೆಯಲಿ.