ಕ್ಯಾಡ್ಬೆರಿಸ್ ಎಂದು ಫೇಮಸ್ ಆಗಿದ್ದವರು ನಟ ಧರ್ಮ ಕೀರ್ತಿರಾಜ್. ಇದು ಧರ್ಮ ಅವರ ಮೊದಲ ಸಿನಿಮಾ ನವಗ್ರಹ ಇಂದ ಸಿಕ್ಕ ಹೆಸರು. ನವಗ್ರಹ ಸಿನಿಮಾದಲ್ಲಿ ಧರ್ಮ ಅವರು ಬಹಳ ಸುಂದರವಾಗಿ ಕಾಣುತ್ತಿದ್ದರು. ನೋಡುವುದಕ್ಕೆ ಬಹಳ ಹ್ಯಾಂಡ್ಸಮ್ ಆಗಿದ್ದರು ಈ ಕಾರಣಕ್ಕೆ ಅವರು ಚಾಕೊಲೇಟ್ ಥರ ಇದ್ದಾರೆ ಎಂದು ಸಿನಿಮಾದಲ್ಲಿ ಸಹ ಅವರನ್ನು ದರ್ಶನ್ ಅವರು ಕ್ಯಾಡ್ಬೆರಿಸ್ ಎಂದು ಕರೆಯುತ್ತಾರೆ. ಇನ್ನು ಅವರ ಅಭಿಮಾನಿಗಳು ಕೂಡ ಕ್ಯಾಡ್ಬೆರಿಸ್ ಎಂದು ಕರೆದು, ಧರ್ಮ ಅವರನ್ನು ಚಾಕೊಲೇಟ್ ಹುಡುಗ ಎಂದು ಕರೆಯುತ್ತಿದ್ದರು. ಇದೀಗ ಈ ಕ್ಯೂಟ್ ಹುಡುಗ ಮದುವೆ ಆಗುವುದಕ್ಕೆ ಸಿದ್ಧವಾಗಿದ್ದಾರೆ.

ಧರ್ಮ ಕೀರ್ತಿರಾಜ್ ಅವರು ಕನ್ನಡದ ಹಿರಿಯನಟ ಕೀರ್ತಿ ರಾಜ್ ಅವರ ಮಗ. ಇವರು ಸಹ ತಂದೆಯ ಹಾಗೆ ಚಿತ್ರರಂಗಕ್ಕೆ ಬಂದು ಕೆಲವು ಸಿನಿಮಾಗಳಲ್ಲಿ ನಟಿಸಿದರು, ಆದರೆ ಅವುಗಳು ಅಂದುಕೊಂಡ ಹಾಗೆ ಯಶಸ್ಸು ತಂದುಕೊಡಲಿಲ್ಲ. ಆದರೆ ಬಿಗ್ ಬಾಸ್ ಶೋ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಬಿಗ್ ಬಾಸ್ ಮನೆಯೊಳಗೆ ಇದ್ದವರಲ್ಲಿ ಧರ್ಮ ಅವರ ಮನಸ್ಸು ಗುಣ ತುಂಬಾ ಒಳ್ಳೆಯದು ಎನ್ನುವ ಅಭಿಪ್ರಾಯ ಬಂತು. ಅವರ ವ್ಯಕ್ತಿತ್ವ ಯಾರಿಗೂ ನೋಯಿಸಿದ ವ್ಯಕ್ತಿತ್ವ ಎಂದು ಎಲ್ಲರಿಗೂ ಅರ್ಥವಾಯಿತು. ಬಿಗ್ ಬಾಸ್ ಮನೆಗೆ ಧರ್ಮರಾಯನ ಹಾಗಿದ್ದಾರೆ ಎನ್ನುವ ಅಭಿಪ್ರಾಯ ಮೂಡಿತು.
ಇವರ ಒಳ್ಳೇತನದಿಂದ ಧರ್ಮ ಅವರು ಒಂದು ದಿನವೂ ಸಹ ಯಾರನ್ನು ನೋಯಿಸಿಲ್ಲ, ಯಾರ ಬಗ್ಗೆಯೂ ಮಾತನಾಡಲಿಲ್ಲ, ಗಾಸಿಪ್ ಮಾಡಲಿಲ್ಲ, ಒಬ್ಬರ ಹಿಂದೆ ಕೆಟ್ಟದಾಗಿ ಮಾತನಾಡಲಿಲ್ಲ. ಎಲ್ಲರಿಗೂ ಇಷ್ಟವಾಗಿದ್ದು ಈ ಗುಣ, ಇವರು ಜಗಳ ಕೂಡ ಆಡಲಿಲ್ಲ, ಧ್ವನಿ ಏರಿಸಿ ಮಾತನಾಡಲು ಇಲ್ಲ. ಇಂಥ ಒಳ್ಳೇ ಗುಣ ಇವರದ್ದು, ಆದರೆ ಇಷ್ಟು ಒಳ್ಳೆಯ ಗುಣ ಬಿಗ್ ಬಾಸ್ ಮನೆಯೊಳಗೆ ಇರುವುದಕ್ಕೆ ಸರಿ ಹೋಗಲಿಲ್ಲ. ಈ ಕಾರಣಕ್ಕೆ ಧರ್ಮ ಅವರು ಬಹಳ ಬೇಗ ಎಲಿಮಿನೇಟ್ ಆಗಿ ಹೊರಬಂದರು. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದುಕೊಟ್ಟಿತು. ಇವರು ಇನ್ನಷ್ಟು ಫೈನ ಇರಬೇಕಿತ್ತು ಎನ್ನುವುದು ಎಲ್ಲರ ಅಭಿಪ್ರಾಯ.

ಆದರೆ ಈಗ ಧರ್ಮ ಅವರು ಎಲಿಮಿನೇಟ್ ಆಗಿದ್ದು ಆಗಿ ಹೋಗಿದೆ. ಆದರೆ ಇವರಿಗೆ ಜನರ ಸಪೋರ್ಟ್ ಮಾತ್ರ ಕಡಿಮೆ ಆಗುತ್ತಿಲ್ಲ. ಧರ್ಮ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಸಿಗುತ್ತಿದೆ. ಇನ್ನು ಹೊಸ ಸಿನಿಮಾಗಳ ಪ್ರೊಮೋಷನ್ ಗಳಲ್ಲಿ ಸಹ ಧರ್ಮ ಅವರು ಬ್ಯುಸಿ ಆಗಿದ್ದಾರೆ. ಇದರ ನಡುವೆ ಈಗ ಧರ್ಮ ಅವರ ಮದುವೆ ವಿಷಯದ ಬಗ್ಗೆ ಚರ್ಚೆ ಶುರುವಾಗುತ್ತಿದೆ. ಧರ್ಮ ಅವರು ಮದುವೆಗೆ ತಯಾರಾಗಿದ್ದು, ಅವರ ತಂದೆ ತಾಯಿ ಕೂಡ ಇವರಿಗೆ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಆದರೆ ಹುಡುಗಿ ಯಾರು ಗೊತ್ತಾ?
ಮದುವೆ ಆಗುವ ಹುಡುಗಿ ಯಾರು ಎಂದು ಇನ್ನು ಫಿಕ್ಸ್ ಆಗಿಲ್ಲ, ಧರ್ಮ ಅವರೇ ತಮಗೆ ಇಷ್ಟ ಆಗುವ ಹುಡುಗಿಯನ್ನು ಹುಡುಕಿಕೊಳ್ಳಬೇಕಿದೆ. ಮಗ ಯಾರನ್ನಾದರೂ ಇಷ್ಟಪಟ್ಟರೆ, ತಾವು ಸಂತೋಷದಿಂದ ಮದುವೆ ಮಾಡಿಕೊಡುತ್ತೇವೆ ಎಂದು ಕೀರ್ತಿ ರಾಜ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಧರ್ಮ ಅವರ ಮದುವೆಗೆ ಈಗ ಎಲ್ಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಧರ್ಮ ಅವರು ಮದುವೆಗೆ ಒಪ್ಪಿಕೊಂಡು, ಒಬ್ಬ ಸುಸಂಸ್ಕೃತ ಸುಂದರವಾದ ಹುಡುಗಿಯನ್ನು ಹುಡುಕಿಕೊಳ್ಳಬೇಕಿದೆ. ಧರ್ಮ ಅವರಿಗೆ ಎಂಥಾ ಹುಡುಗಿ ಸಿಗುತ್ತಾಳೆ ಎಂದು ಕಾದು ನೋಡಬೇಕಿದೆ.