ಬಿಗ್ ಬಾಸ್ ಸೀಸನ್ 9 ತನ್ನ ಶುರುವಿನಲ್ಲಿ ಬಹಳ ಹೈಪ್ ಪಡೆದುಕೊಂಡಿತ್ತು.ಆದರೆ ದಿನ ಕಳೆಯುತ್ತಿದ್ದಂತೆ ಅದರ ಛಾಪು ಕಳೆದುಕೊಳ್ಳುತ್ತಿದೆ.ಈ ಸೀಸನ್ ನ ನವೀನರ ಹಾಗೂ ಪ್ರವೀಣರ ಆಟ ಬಹಳ ಕುತೂಹಲ ಹಾಗೂ ರೋಚಕ ವಾಗಿರಬಹುದು ಎಂದು ಪ್ರೇಕ್ಷಕರು ಬಯಸಿದ್ದರು.ಆದರೆ ದಿನೇ ದಿನೇ ಪ್ರೇಕ್ಷಕರ ಎಸ್ಪಿಏಕಟೇಶನ್ ತುಂಬಲಾರದೆ ಬಿಗ್ ಬಾಸ್ ಸೀಸನ್ 9 ವೀಕ್ಷಕರ ಸಂಖ್ಯೆ ಕಡಿಮೆ ಮಾಡಿಕೊಂಡಿತ್ತು.ಆದರೆ ಇದೀಗ ಅಲ್ಲಿನ ಸ್ಫರ್ದಿಗಳು ಮನೋರಂಜನೆ ನೀಡುವಲ್ಲಿ ವಿಫಲರಾದ ಕಾರಣ ಬಿಗ್ ಬಾಸ್ ತಮ್ಮ ಚಾತುರ್ಯತೆ ಯಿಂದ ಅಲ್ಲಿನ ಬಿಗ್ ಬಾಸ್ ಸ್ಪರ್ದಿಗಳಿಂದ ಮನೋರಂಜನೆ ದುಪ್ಪಟ್ಟು ಮಾಡುವಂತಹ ಟಾಸ್ಕ್ ನೀಡುತ್ತಿದ್ದಾರೆ.

ಇನ್ನು ಮಿಕ್ಕಿರುವ ಮೂರು ವಾರಗಳಲ್ಲಿ ಮನೆಯ ಮಂದಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು ದಿನದಿಂದ ದಿನಕ್ಕೆ ಮನೆ ಮಂದಿ ಮನೋರಂಜನೆಯ ವಿಚಾರವಾಗಿ ಉನ್ನತವಾಗಿದೆ ಎಂದರೆ ತಪ್ಪಾಗಲಾರದು. ಈ ಬಾರಿ ಬಿಗ್ ಬಾಸ್ ಮನೆ ಅಶಾಂತಿ ಯಿಂದ ಕೊಡಿತ್ತು.ಕೇವಲ ಜಗಳ ಗಳೇ ಆಡುತ್ತಾ ತಮ್ಮ ಪ್ರೇಕ್ಷಕರ ಸಂಖ್ಯೆ ಕುಗ್ಗಿಸುವಂತೆ ಮಾಡಿದ್ದ ಸ್ಪರ್ದಿಗಳು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಜಗಳಗಳಿಗಿಂತ ಸಂತಸ ಖುಷಿ ಹಾಗೂ ಸಂಭ್ರಮವಾಗಿ ಎಲ್ಲರೂ ಕಾಲ ಕಳೆಯುತ್ತಿದ್ದಾರೆ.
ಇನ್ನು ಕಳೆದವಾರ “ಕಿಚ್ಚ ಸುದೀಪ್” ಹೇಳಿದ ಹಾಗೆ ಕಳೆದ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಆಗುತ್ತದೆ ಎಂದು ಹೇಳಿದ್ದರು.ಆದರೆ ಕಳೆದ ವಾರ ಬಹಳ ನಿರೀಕ್ಷೆ ಮೂಡಿಸಿದ್ದ ಕ್ಯಾಂಡಿಡೇಟ್ ಆಗಿದ್ದ “ಅನುಪಮ ಗೌಡ” ಅವರು ಮನೆಯಿಂದ ಗೇಟ್ ಪಾಸ್ ಪಡೆದುಕೊಂಡರು.ಅನುಪಮ ಅವರು ಎದುರಾಳಿ ಆಟಗಾರರಾಗಿ ಬಹಳ ಟಫ್ ಕಂಪಿಟೇಶನ್ ನೀಡಿದ್ದರು.ಮನೆಯಲ್ಲೂ ಕೂಡ ಕಿಚ್ಚನ ಚಪ್ಪಾಳೆ,ಉತ್ತಮ,ಕ್ಯಾಪ್ಟನ್ಸಿ ಎಲ್ಲಾ ಸ್ಥಾನದಲ್ಲಿ ಬಹಳ ಬೆಸ್ಟ್ ಎಂದೆನಿಸಿಕೊಂಡಿದ್ದ ಸ್ಪರ್ದಿಯಾಗಿ ಅನುಪಮ ಗುರುತಿಸಿಕೊಂಡಿದ್ದಾರೆ.
ಆದರೂ ಜನ ಬೆಂಬಲ ಕಡಿಮೆಯಾಗಿ ಈ ವಾರ ಮನೆ ಯಿಂದ ಹೊರಬಿದ್ದರು. ಆದರೆ ಕಳೆದ ವಾರ ಎರಡು ಎಲಿಮಿನೇಷನ್ ಆಗಬೇಕಿತ್ತು ಆದರೆ ಅನುಪಮ ಅವರು ಮಾತ್ರ ಹೊರ ಬಂದರು.ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಬಹುದು ಎಂದು ಭಾವಿಸಿದ್ದರು.ಆದರೆ ವಾರದ ಶುರುವಿನಲ್ಲಿ “ಅರುಣ್ ಸಾಗರ್” ಮಗಳ ಆರೋಗ್ಯ ಚೆನ್ನಾಗಿಲ್ಲ ಎಂದು ಅರುಣ್ ಅವರು ಮನೆಗೆ ತೆರಳುವುದಾಗಿ ತಿಳಿಸಿದ್ದರು.
ಅಕಸ್ಮಾತ್ ಅರುಣ್ ತಮ್ಮ ಮಗಳ ಆರೋಗ್ಯ ವಿಚಾರಿಸಿಕೊಂಡು ಬರಬಹುದಾ ಅಥವಾ ಬರುವುದಿಲ್ಲವ ಎಂದು ತಿಳಿದುಬಂದಿಲ್ಲ. ನೆನ್ನೆ ನಡೆದ ಎಲ್ಲಾ ಟಾಸ್ಕ್ ನಲ್ಲೂ ಕೂಡ ಅರುಣ್ ನಾಪತ್ತೆಯಾಗಿದ್ದಾರೆ.ಇನ್ನು ಇಂದಿನ ಪ್ರೊಮೋ ದಲ್ಲು ಕೂಡ ಅರುಣ್ ಸಾಗರ್ ಕಾಣಿಸುತ್ತಿಲ್ಲ.ಮನೆಯನ್ನು ಮನೋರಂಜನೆ ಇಂದ ತುಂಬಿಸುತ್ತಿದ್ದ ವ್ಯಕ್ತಿ ಗೈರು ಮನೆಯ ಮಂದಿ ಯಾರಿಗೂ ಬೇಸರ ತಂದಿಲ್ಲ.
ಇದೆಲ್ಲ ನೋಡಿದರೆ ಅರುಣ್ ಸಾಗರ್ ಮತ್ತೆ ಮರಳುತ್ತಾರೆ ಎಂದು ಹಲವರು ಭಾವಿಸಿದ್ದಾರೆ.ಅಕಸ್ಮಾತ್ ಅವರು ಮರಳಿ ಬಂದರೆ ಈ ವಾರ ಡಬಲ್ ಎಲಿಮಿನೇಷನ್ ಇಲ್ಲವಾದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.ಈಗ ಮನೆಯಲ್ಲಿ 8 ಸ್ಪರ್ದಿಗಳು ಇದ್ದಾರೆ ಇವರಲ್ಲಿ ಐವರು ಮಾತ್ರ ಫಿನಾಲೆ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆ.ಯಾರು ಆ ಐದು ಮಂದಿ ಎಂದು ಈ ವಾರದ ಅಂತ್ಯದಲ್ಲಿ ನಮ್ಮೆಲ್ಲರಿಗೂ ಉತ್ತರ ಸಿಗಲಿದೆ.



