ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿರುವವರು ಅನುಪಮಾ ಗೌಡ. ಪ್ರಸ್ತುತ ಇವರು ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಅಕ್ಕ ಧಾರಾವಾಹಿ ಇಂದ ಅನುಪಮಾ ಎಷ್ಟರ ಮಟ್ಟಿಗೆ ಹೆಸರು ಮಾಡಿದ್ದರು ಎಂದು ನಮಗೆಲ್ಲ ಗೊತ್ತೇ ಇದೆ. ಇದಾದ ಬಳಿಕ ಅನುಪಮಾ ಅವರು ಬೇರೆ ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ. ನಿರೂಪಣೆ ಹಾಗೂ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದಾರೆ. ಅನುಪಮಾ ಅವರು ನಿಜ ಜೀವನದಲ್ಲಿ ಬಹಳ ಕಷ್ಟಪಟ್ಟಿರುವ ವ್ಯಕ್ತಿ. ಮನೆಯಲ್ಲಿ ಬಡತನ, ಹಣಕಾಸಿನ ಸಮಸ್ಯೆ, ಮನೆಯ ಜವಾಬ್ದಾರಿ ಎಲ್ಲವೂ ಇವರ ಮೇಲೆ ಇತ್ತು. ಅದೆಲ್ಲವನ್ನು ಮೆಟ್ಟಿ ನಿಂತು ಇಂದು ತಮ್ಮದೇ ಆದ ಸ್ವಂತ ಮನೆ ಕಟ್ಟಿಸಿದ್ದಾರೆ. ಯಶಸ್ವಿ ಹುಡುಗಿ ಆಗಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಬ್ರೇಕಪ್ ಬಗ್ಗೆ ಮಾತನಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಅನುಪಮಾ.

ನಟಿ ಅನುಪಮಾ ಗೌಡ ಕಿರುತೆರೆಯಲ್ಲಿ ಕೆಲವು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ಸಹ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯ ಅಕ್ಕ ಧಾರಾವಾಹಿ. ಈ ಧಾರಾವಾಹಿಯ ಮೂಲಕ ಅನುಪಮಾ ಗೌಡ ಅವರು ಮನೆಮಾತಾಗಿದ್ದರು. ಇದು ಅವಳಿ ಸಹೋದರಿಯರ ಕಥೆ ಆಗಿತ್ತು. ಒಂದು ಕ್ಯಾರೆಕ್ಟರ್ ಪಾಸಿಟಿವ್, ಇನ್ನೊಂದು ಕ್ಯಾರೆಕ್ಟರ್ ನೆಗಟಿವ್. ಎರಡು ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆ ಎರಡು ಪಾತ್ರಗಳಲ್ಲಿ ಎಷ್ಟು ಸಾಮ್ಯತೆ ಇತ್ತು ಎಂದರೆ, ಆ ಪಾತ್ರದಲ್ಲಿ ನಟಿಸುತ್ತಿರುವುದು ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಅಲ್ಲವೇ ಎಂದು ಅನ್ನಿಸಿದ್ದಿದೆ. ಅಷ್ಟು ನೈಜವಾಗಿ ಎರಡು ಪಾತ್ರಗಳಲ್ಲಿ ಅನುಪಮಾ ನಟಿಸುತ್ತಿದ್ದರು. ಇವರಿಗೆ ಅಕ್ಕ ಧಾರಾವಾಹಿ ಅಷ್ಟೇ ಜನಪ್ರಿಯತೆ, ಹೆಸರು ಎಲ್ಲವನ್ನು ತಂದುಕೊಟ್ಟಿತ್ತು.

ಅಕ್ಕ ಧಾರಾವಾಹಿ ಮುಗಿದ ಬಳಿಕ ಅನುಪಮಾ ಅವರು ಬಿಗ್ ಬಾಸ್ ಮನೆಯ ಜರ್ನಿ ಶುರು ಮಾಡಿದ್ದರು, ಒಬ್ಬ ವ್ಯಕ್ತಿಯಾಗಿ ಅನುಪಮಾ ಹೇಗೆ ಅನ್ನೋದನ್ನ ಬಿಗ್ ಬಾಸ್ ಶೋ ತೋರಿಸಿತ್ತು. ಅನುಪಮಾ ತುಂಬಾ ಒಳ್ಳೆಯ ಸ್ವಭಾವ ಇರುವ ಹುಡುಗಿ, ತಂದೆ ಇವರಿಂದ ಬೇರೆ ಇದ್ದಾರೆ. ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ಇವರೇ, ತಂಗಿಯ ಸೆಟ್ಲ್ ಮಾಡಬೇಕು ಅನ್ನೋ ಕನಸು ಅನುಪಮಾ ಅವರದ್ದು ಎಂದು ಬಿಗ್ ಬಾಸ್ ಶೋ ಮೂಲಕ ಗೊತ್ತಾಯಿತು. ಬಹಳ ಸ್ಟ್ರಾಂಗ್ ಹುಡುಗಿ ಅನುಪಮಾ ಕೆಲವು ವಿಚಾರದಲ್ಲಿ ತುಂಬಾ ಸೆನ್ಸಿಟಿವ್, ಎಷ್ಟು ನೋವು ಪಡುತ್ತಾರೆ ಎಂದು ಅನುಪಮಾ ಅವರ ಬಗ್ಗೆ ಗೊತ್ತಾಗಿದ್ದೆ ಬಿಗ್ ಬಾಸ್ ಶೋ ಇಂದ. ಫಿನಾಲೆ ವರೆಗು ತಲುಪಿದ್ದ ಅನುಪಮಾ ಗೌಡ ವಿನ್ನರ್ ಆಗುವುದಕ್ಕೆ ಸಾಧ್ಯ ಆಗಲಿಲ್ಲ.

ಇನ್ನು ಬಿಗ್ ಬಾಸ್ ಶೋ ಮುಗಿದ ನಂತರ ಅನುಪಮಾ ಗೌಡ ಮತ್ತೆ ಧಾರಾವಾಹಿಯಲ್ಲಿ ನಟಿಸಲಿಲ್ಲ. ರಿಯಾಲಿಟಿ ಶೋಗಳ ನಿರೂಪಣೆ ಹಾಗೂ ಸಿನಿಮಾಗಳು ಮತ್ತು ವೆಬ್ ಸೀರೀಸ್ ಗಳು ಇದರಲ್ಲೆಲ್ಲ ನಟಿಸುವುದಕ್ಕೆ ಶುರು ಮಾಡಿದರು. ಸಿನಿಮಾ ಅಭಿನಯಕ್ಕೆ ಸ್ಟೇಟ್ ಅವಾರ್ಡ್ ಕೂಡ ಸಿಕ್ಕಿದೆ. ಇನ್ನು ಬ್ಯಾಕ್ ಟು ಬ್ಯಾಕ್ ಹಲವು ಶೋಗಳನ್ನು ಕೂಡ ನಿರೂಪಣೆ ಮಾಡುತ್ತಿದ್ದಾರೆ ಅನುಪಮಾ. ನನ್ನಮ್ಮ ಸೂಪರ್ ಸ್ಟಾರ್ ನಂತರ ಈಗ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಶೋ ಸಹ ಇವರಿಗೆ ಒಳ್ಳೆಯ ಹೆಸರನ್ನೇ ತಂದುಕೊಟ್ಟಿದೆ. ಅನುಪಮಾ ಅವರ ಕಾಮಿಡಿ ಟೈಮಿಂಗ್, ಅವರು ಮಾತಾಡೋ ಶೈಲಿ ಇದೆಲ್ಲವೂ ಸಹ ಜನರಿಗೆ ಬಹಳ ಇಷ್ಟ. ಒಟ್ಟಿನಲ್ಲಿ ಶೋ ಸಕ್ಸಸ್ ಗೆ ಇವರು ಪ್ರಮುಖ ಕಾರಣ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಇಂಥ ಅನುಪಮಾ ಗೌಡ ಅವರು ಇದೀಗ ರಾಜೇಶ್ ರಿವೀಲ್ಸ್ ಪಾಡ್ ಕಾಸ್ಟ್ ಶೋ ನಲ್ಲಿ ಭಾಗಿಯಾಗಿದ್ದು, ತಮ್ಮ ಪರ್ಸನಲ್ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲವ್ ಮಾಡಿ, ಬ್ರೇಕಪ್ ಆದ ನಂತರ ಅದರಿಂದ ಹೊರಬರಲು ಎಷ್ಟೆಲ್ಲಾ ಕಷ್ಟ ಪಡಬೇಕಾಯಿತು ಎಂದು ತಿಳಿಸಿದ್ದಾರೆ.. ಅನುಪಮಾ ಅವರು ಒಬ್ಬ ವ್ಯಕ್ತಿಯ ಜೊತೆಗೆ 6 ವರ್ಷಗಳ ಕಾಲ ರಿಲೇಶನ್ಷಿಪ್ ನಲ್ಲಿ ಇದ್ದರು, ಆದರೆ ಆ ರಿಲೇಶನ್ಷಿಪ್ ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ. ಅನುಪಮಾ ಅವರು ಅಕ್ಕ ಧಾರಾವಾಹಿ ಮಾಡುವಾಗ, ನೆಗಟಿವ್ ಕ್ಯಾರೆಕ್ಟರ್ ಅವರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎಂದರೆ, ಕೆಲವೊಮ್ಮೆ ಆ ಕ್ಯಾರೆಕ್ಟರ್ ರೀತಿಯಲ್ಲೇ ಬಿಹೇವ್ ಮಾಡುತ್ತಿದ್ದರಂತೆ. ಮನೆಯ ಟೆನ್ಷನ್, ಹಣಕಾಸಿನ ವಿಚಾರದ ಟೆನ್ಷನ್, ಇದೆಲ್ಲವನ್ನು ಆ ವ್ಯಕ್ತಿಯ ಮೇಲೆ ಹೇರುತ್ತಿದ್ದರಂತೆ.
ಆ ಸಮಯದಲ್ಲಿ ಏನಾಗ್ತಿದೆ, ಇದೆಲ್ಲಾ ಹೇಗೆ ಮುರಿದು ಹೋಯ್ತು ಎಂದು ಅರ್ಥ ಆಗುವ ವೇಳೆಯಲ್ಲೇ ಎಲ್ಲವು ಮುಗಿದು ಹೋಗಿತ್ತಂತೆ. ಆ ವ್ಯಕ್ತಿಯ ಜೊತೆಗೆ ಬ್ರೇಕಪ್ ಮಾಡಿಕೊಂಡ ನಂತರ ಅನುಪಮಾ ಅವರಿಗೆ ಅವರನ್ನು ಹೇಟ್ ಮಾಡುವುದಕ್ಕೆ ಕೂಡ ಆಗಲಿಲ್ಲವಂತೆ, ಅಷ್ಟು ಚೆನ್ನಾಗಿ ಕೇರ್ ಮಾಡುತ್ತಿದ್ದರಂತೆ ಆ ವ್ಯಕ್ತಿ. 6 ವರ್ಷಗಳ ಕಾಲ ಮನೆ, ಶೂಟಿಂಗ್ ಬಿಟ್ಟರೆ ಆ ವ್ಯಕ್ತಿ ಅಷ್ಟೇ ಆಗಿತ್ತಂತೆ ಅನುಪಮಾ ಅವರ ಲೈಫ್. ಆದರೆ ಬ್ರೇಕಪ್ ಆದಾಗ ಅನುಪಮಾ ಅವರಿಗೆ ತುಂಬಾ ಡಿಪ್ರೆಸ್ ಆಗಿ, ಅವರಿಲ್ಲದೇ ಲೈಫ್ ಬೇಡ ಎಂದು ಡಿಸೈಡ್ ಮಾಡಿ, ಮೆಂಟಲ್ ರೀತಿ ಆಗಿದ್ದರಂತೆ. ಆ ರಿಲೇಶನ್ಷಿಪ್ ವಿಚಾರದಲ್ಲಿ ಆದ ನೋವಿನಿಂದ ಹೊರಗಡೆ ಬರುವುದಕ್ಕೆ 4 ವರ್ಷ ತೆಗೆದುಕೊಂಡರಂತೆ. ಈಗ ಆ ನೋವಿನಿಂದ ಹೊರಬಂದಿದ್ದಾರೆ ಅನುಪಮಾ ಗೌಡ.

ಅನುಪಮಾ ಅವರು ಈ ವಿಚಾರವನ್ನು ಹೇಳಿದಾಗ, ಎಲ್ಲಾ ಹೆಣ್ಣುಮಕ್ಕಳು ಎಷ್ಟು ಸೆನ್ಸಿಟಿವ್ ಎಂದು ಗೊತ್ತಾಗುತ್ತದೆ. ಆ ನೋವಿನಿಂದ ಹೊರಬಂದು ತಪ್ಪುಗಳನ್ನ ತಿದ್ದಿಕೊಂಡ ಮೇಲೆ ಬದುಕು ಬಂಗಾರ ಆಗುತ್ತದೆ. ಅನುಪಮಾ ಅವರು ಈಗ ಸ್ವಂತ ದುಡಿಮೆ ಇಂದ ಸುಂದರವಾದ ಮನೆ ಕಟ್ಟಿ, ಸಂತೋಷದ ಜೀವನ ನಡೆಸುತ್ತಿದ್ದಾರೆ. ಟ್ರಾವೆಲ್ಲಿಂಗ್ ಹೋಗುತ್ತಾ, ದೇಶ ಸುತ್ತುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಹೊಸ ಅನುಪಮಾ ಆಗಿ ಹೊಸ ಜೀವನವನ್ನು ಕಟ್ಟಿಕೊಂಡಿದ್ದಾರೆ. ಹೆಣ್ಣುಮಕ್ಕಳು ಈ ರೀತಿ ಇಂಡಿಪೆಂಡೆಂಟ್ ಆಗಿ ಜೀವನ ನಡೆಸಿದರೆ, ಅದಕ್ಕಿಂತ ಸಂತೋಷ ಇನ್ನೇನಿದೆ ಹೇಳಿ.. ಟ್ಯಾಲೆಂಟ್ ಇರುವ ಅನುಪಮಾ ಗೌಡ ಅವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗಲಿ..