ವಿಶ್ವಸುಂದರಿ ಕರ್ನಾಟಕದ ಹುಡುಗಿ ಐಶ್ವರ್ಯ ರೈ ಅವರ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಹಲವು ವಿಚಾರಗಳು, ಅನುಮಾನಗಳು, ಊಹಾಪೋಹಗಳು ಕೇಳಿಬರುತ್ತಲೇ ಇದೆ. ಅದೆಲ್ಲದಕ್ಕೂ ಇನ್ನು ಕೂಡ ಕುಟುಂಬದ ಕಡೆಯಿಂದ ಯಾವುದೇ ಸ್ಪಷ್ಟನೆ ತಿಳಿದುಬಂದಿಲ್ಲ. ಆದರೆ ಕೆಲವು ಘಟನೆಗಳು ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಖಂಡಿತ ಎನ್ನುವುದನ್ನು ತೋರಿಸುತ್ತಿದೆ. ಅದು ನಿಜವೇ ಇರಬಹುದು ಎನ್ನುವಂತೆ ಮತ್ತೊಂದು ಘಟನೆ ಸಹ ನಡೆದಿದೆ. ಈ ಘಟನೆ ನಡೆದಿರುವುದು ಐಶ್ವರ್ಯ ರೈ ಅವರ ಮಗಳ ಹುಟ್ಟುಹಬ್ಬದ ವಿಚಾರದಲ್ಲಿ. ಅಷ್ಟಕ್ಕೂ ಆಗಿರೋದೇನು ಎಂದು ತಿಳಿಯೋಣ..

ನಟಿ ಐಶ್ವರ್ಯ ರೈ ಅವರು ವಿಶ್ವಸುಂದರಿ ಆಗಿ ಕಿರೀಟ ಧರಿಸಿದ ನಂತರ ಸಿನಿಮಾಗಳಲ್ಲಿ ನಿರತರಾದರು. ಮೊದಲಿಗೆ ತಮಿಳು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ ನಂತರ ಕೆಲವು ವರ್ಷಗಳು ಸೌತ್ ಇಂಡಿಯಾ ಸಿನಿಮಾದಲ್ಲೇ ನಟಿಸುತ್ತಿದ್ದರು. ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳಲ್ಲಿ ನಟಿಸಿದರು. ಬಾಲಿವುಡ್ ಇಂದ ಹಾಲಿವುಡ್ ವರೆಗು ಸಹ ಐಶ್ವರ್ಯ ಅವರ ಅಭಿನಯ, ಅಂದ, ಚಂದ ಪಸರಿಸಿತು ಎಂದು ಹೇಳಿದರೂ ಖಂಡಿತ ತಪ್ಪಲ್ಲ. ಹಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ಸಹ ಐಶ್ವರ್ಯ ಅವರು ನಟಿಸಿದ್ದಾರೆ. ಹೀಗೆ ಎಲ್ಲಾ ರೀತಿಯಲ್ಲಿ ಸಹ ಯಶಸ್ಸು ಗಳಿಸಿದ್ದಾರೆ.
ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಐಶ್ವರ್ಯ ರೈ ಅವರು ಬಚ್ಚನ್ ಮನೆತನಕ್ಕೆ ಸೊಸೆಯಾದರು. ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಐಶ್ವರ್ಯ ರೈ ಅವರ ಮದುವೆಯಾಯಿತು. ಈ ಜೋಡಿಯ ದಾಂಪತ್ಯ ಜೀವನ ಸಹ ಬಹಳ ಚೆನ್ನಾಗಿತ್ತು. ಹಾಗೆಯೇ ಇವರಿಗೆ ಮುದ್ದಾದ ಮಗಳು ಸಹ ಜನಿಸಿದಳು, ಮಗಳಿಗೆ ಆರಾಧ್ಯ ಎಂದು ಹೆಸರನ್ನು ಇಟ್ಟರು. ಇಷ್ಟು ವರ್ಷಗಳ ಕಾಲ ಇವರಿಬ್ಬರ ಬದುಕು ಚೆನ್ನಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳಿಂದ ಐಶ್ವರ್ಯ ರೈ ಅವರು ಬಚ್ಚನ್ ಕುಟುಂಬದ ಜೊತೆಗೆ ಇಲ್ಲ. ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ, ಮಗಳು ಇವರ ಜೊತೆಗೆ ಇದ್ದಾಳೆ ಎನ್ನಲಾಗುತ್ತಿತ್ತು.

ಐಶ್ವರ್ಯ ರೈ ಅವರು ಪತಿಗೆ ವಿಚ್ಛೇದನ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಬಚ್ಚನ್ ಕುಟುಂಬ ಐಶ್ವರ್ಯ ರೈ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಅಭಿಷೇಕ್ ಬಚ್ಚನ್ ಅವರು ಬೇರೊಬ್ಬ ನಟಿಯ ಜೊತೆಗೆ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕೆ ಐಶ್ವರ್ಯ ರೈ ಅವರು ಬಚ್ಚನ್ ಕುಟುಂಬದಿಂದ ದೂರ ಉಳಿದಿದ್ದಾರೆ. ತಮ್ಮ ತಾಯಿ ಹಾಗೂ ಮಗಳ ಜೊತೆಗೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಐಶ್ವರ್ಯ ರೈ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಬಚ್ಚನ್ ಕುಟುಂಬದ ಜೊತೆಗೆ ಕಾಣಿಸಿಕೊಳ್ಳುತ್ತಿಲ್ಲ. ಇದೆಲ್ಲವೂ ನೆಟ್ಟಿಗರಲ್ಲಿ ಇರುವ ಅನುಮಾನ ಹೆಚ್ಚಾಗುವಂತೆ ಮಾಡಿದೆ..
ಇನ್ನು ನಿನ್ನೆಯಷ್ಟೇ ಆರಾಧ್ಯ ಬಚ್ಚನ್ ಅವರ ಹುಟ್ಟುಹಬ್ಬ ನಡೆದಿದೆ. ಈಗ ಆರಾಧ್ಯ ಬಚ್ಚನ್ ಗೆ 13 ವರ್ಷ, ಅಧಿಕೃತವಾಗಿ ಆರಾಧ್ಯ ಟೀನೇಜ್ ಗೆ ಎಂಟ್ರಿ ಕೊಟ್ಟಿದ್ದಾಳೆ. ಈ ವಿಶೇಷ ದಿನದಂದು ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಸಂತೋಷವಾಗಿ ಆಚರಿಸಿದ್ದಾರೆ ಐಶ್ವರ್ಯ ಬಚ್ಚನ್. ಇನ್ಸ್ಟಾಗ್ರಾಮ್ ನಲ್ಲಿ ಮಗಳ ಹುಟ್ಟುಹಬ್ಬದ ಫೋಟೋಸ್ ಗಳನ್ನು ಐಶ್ವರ್ಯ ರೈ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ನಾವು ಐಶ್ವರ್ಯ ಅವರ ತಾಯಿ ಹಾಗೂ ಬರ್ತ್ ಡೇ ಗರ್ಲ್ ಆರಾಧ್ಯ ಇಬ್ಬರನ್ನು ನೋಡಬಹುದು. ಆದರೆ ಬಚ್ಚನ್ ಕುಟುಂಬದ ಯಾರು ಕೂಡ ಆರಾಧ್ಯ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿಲ್ಲ. ಮಗಳ ಹುಟ್ಟುಹಬ್ಬಕ್ಕೆ ಅಭಿಷೇಕ್ ಬಂದಿಲ್ವಾ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ.