“ಸಮಂತಾ” ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 2 ವರ್ಷಗಳಿಂದ ಕಾಯಂ ಆಗಿಬಿಟ್ಟಿದೆ.ಒಂದಲ್ಲಾ ಒಂದು ವಿಚಾರದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ.ಈ ಹಿಂದೆ ಟಾಲಿವುಡ್ ನಲ್ಲಿ ಜನಪ್ರಿಯ ಜೋಡಿಗಳ ಸಾಲಿನಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುವ ಜೋಡಿ ಎಂದರೆ ಅದು ಸಮಂತಾ ಹಾಗೂ ನಾಗ ಚೈತನ್ಯ.ಈ ಜೋಡಿ ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದವರು.ಮದುವೆಗೂ ಮುನ್ನಾ ಹಾಗೂ ಮದುವೆಯ ನಂತರವೂ ಕೊಡ ಈ ಜೋಡಿಗಳನ್ನು ನೋಡಿ ನಾವು ಕೊಡ ಈ ರೀತಿಯೇ ಬದುಕಬೇಕು ಪ್ರೀತಿಸ ಬೇಕು ಎಂಬ ಆಸೆಯನ್ನು ಹುಟ್ಟಿಹಾಕುತ್ತಿತ್ತು.
ಈ ಜೋಡಿಗಳ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಸಣ್ಣದಾಗಿ ಸುದ್ದಿ ಹಬ್ಬಲು ಆರಂಭವಾಯಿತು.ಹೀಗಿದ್ದರೂ ಕೂಡ ಈ ಜೋಡಿಯ ನಡುವೆ ವೈಮನಸ್ಯ ಮೂಡಲು ಸಾಧ್ಯವೇ ಇಲ್ಲಾ ಎಂಬ ಗಟ್ಟಿ ದ್ವನಿಗಳು ಕೇಳಿಬರುತ್ತಿತ್ತು. ಆದರೆ ಇವರ ಊಹೆ ತಪ್ಪು ಎಂದು ಇದೆ ತಿಂಗಳ ವರ್ಷದ ಹಿಂದೆ ತಮ್ಮ ವಿಚ್ಛೇದನದ ವಿಚಾರ ಬಹಿರಂಗವಾಗಿ ಹೇಳಿಕೊಂಡರು.ಆದರೆ ಇವರಿಬ್ಬರು ವಿಚ್ಛೇದನ ಪಡೆದು ಒಂದು ವರ್ಷ ಕಳೆದಿದ್ದರೂ ಇವರುಬ್ಬರನ್ನು ದೂರಗುವಂತಹ ವೈಮನಸ್ಯ ಯಾವುದು ಎಂದು ಇಂದಿನ ವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಇವರಿಬ್ಬರ ವಿಚ್ಛೇದನದ ನಂತರ ಸಮಂತಾ ಅವರ ವರ್ತನೆ ಸಂಪೂರ್ಣ ಬದಲಾಗಿರುವುದು ನಾವು ಹೊಸದಾಗಿ ಹೇಳಬೇಕಾಗೆ ಇಲ್ಲ. ತಮ್ಮ ಪ್ರತಿ ವಿಷಯದಲ್ಲೂ ಹಳೇ ಸಮಂತಾ ಅವರ ತದ್ವಿರುದ್ಧವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಅವರ ಬಟ್ಟೆ ಸಿನಿಮಾಗಳ ಆಯ್ಕೆ ಎಲ್ಲದರಲ್ಲೂ ಕೂಡ ನಾವು ಅತಿರೇಕವನ್ನು ಎನ್ನುವಷ್ಟು ಬದಲಾಗಿದ್ದಾರೆ.ಹೀಗೆ ಅನ್ನಿಸಲು ಮೊದಲ ಸಮಂತಾ ಅವರೇ ಕಾರಣ ಎಂದೇಳಬಹುದು. ಇವರ ವರ್ತನೆಯನ್ನು ನೋಡಿ ಸಮಂತಾ ಅವರ ಮೇಲೆ ಕೆಟ್ಟಾ ಆರೋಪಗಳು ಹಾಗೂ ಲೋಪ ದೋಷಗಳು ಹುಡುಕಿ ಅವರ ಹಣೆಗೆ ಕಟ್ಟಲಾಗುತ್ತಿದೆ.
ಆದರೆ ಈ ಯಾವ ವಿಚಾರಗಳಲ್ಲಿ ತಲೆ ಕೆಡಸಿಕೊಳ್ಳದ ಸಮಂತಾ ಈಗಾಗಲೇ ತೆಲಗು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುತ್ತಾ ಬರುತ್ತಿದ್ದರು.ಆದರೆ ಇವರಿಗೆ ಚರ್ಮ ರೋಗದ ಕಾರಣದಿಂದ ಅಮೆರಿಕಾಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು.ಆದರೆ ಈ ವಿಚಾರವಾಗಿ ಸಮಂತಾ ಅವರಾಗಲಿ ಅವರ ಮನೆಯವರಗಲಿ ಬಹಿರಂಗವಾಗಿ ಹೇಳಿರಲಿಲ್ಲ.ಆದರೆ ಈ ಸುದ್ದಿ ಬಹಳ ಹೈಪ್ ಪಡೆದುಕೊಂಡಿದ್ದರಿಂದ ಸಮಂತಾ ಅವರ ಮ್ಯಾನೇಜರ್ ಸಾಮಾಜಿಕ ಜಾಲತಾಣಗಳಲ್ಲಿ ಯಾವ ತೊಂದರೆಯು ಇಲ್ಲ ಎಂದು ತಿಳಿಸಿದ್ದರು.
ಸಾಕಷ್ಟು ಸಮಯದ ಬಳಿಕ ಕ್ಯಾಮರಾ ಮುಂದೆ ಬಂದ ಸಮಂತಾ ಅವರ ಮುಖ ನೋಡಿ ಬದಲಾವಣೆ ಕಾಣುತ್ತಿರುವುದು ನಿಜವಾಗಿ ಇವರಿಗೆ ಸಮಸ್ಯೆ ಇದ್ದಿದ್ದಂತೂ ನಿಜ ಎಂದು ಕಾತರಿಯಾಗಿತ್ತು.ಆದರೆ ಏನು ಯಾಕೆ ಎಂದೆಲ್ಲಾ ಕೇಳುತ್ತಿದ್ದ ಪ್ರಶ್ನೆಗಳಿಗೆ ನಟಿ ಸಮಂತಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಈ ನಟಿಗೆ ಮೈಯೋಸಿಟಿಸ್ ಹೆಸರಿನ ಅಪರೂಪದ ಕಾಯಿಲೆ ಇದೆ. ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತ ಶುರುವಾಗುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. 30-60ರ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬೇರೆಯ ಹಂತಕ್ಕೆ ಹೋಗುತ್ತದೆ. ಈಗ ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.