ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರ ಉಳಿದ ನಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಟಿಯ ಸೀಮಂತ ನಡೆದಿದ್ದು, ಸೀಮಂತದ ಸುಂದರ ಫೋಟೋಗಳು ವೈರಲ್ ಆಗುತ್ತಿವೆ.

ನಟಿ ಆಶಿತಾ ಚಂದ್ರಪ್ಪ 2021ರಲ್ಲಿ ಆಶಿತಾ ಉದ್ಯಮಿ ರೋಹನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ನಟಿ ಆಶಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೀಮಂತದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಲೈಟ್ ಗ್ರೀನ್ ಸೀರೆಗೆ ಬ್ಲೂ ಬಾರ್ಡರ್ ಇರುವ ಸೀರೆಯಲ್ಲಿ ನಟಿ ಆಶಿತಾ ಮಿರ ಮಿರ ಮಿಂಚಿದ್ದಾರೆ.
ತಮ್ಮ ನೆಚ್ಚಿನ ನಟಿಯ ಸೀಮಂತದ ಫೋಟೋಗಳನ್ನು ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 5ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕಲರ್ಸ್ ಕನ್ನಡ ಜನಪ್ರಿಯ ಸೀರಿಯಲ್ ರಾಧಾ ರಮಣದಲ್ಲಿ ಆಶಿತಾ ನಟಿಸಿದ್ದಾರೆ. ಇದೀಗ ಮಗುವಿನ ನಿರೀಕ್ಷೆಯಲ್ಲಿರುವ ಆಶಿತಾ ಚಂದ್ರಪ್ಪ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ.