ವಿಜಯ್ ದೇವರಕೊಂಡ ಅವರನ್ನು ಭೇಟಿ ಮಾಡಲು ಅಭಿಮಾನಿಗಳು ಹೊರಗೆ ಕಾಯುತ್ತಿದ್ದರು. ಎಲ್ಲರೂ ತಮ್ಮ ನೆಚ್ಚಿನ ನಟನನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲು ವಿಡಿಯೋ ಮಾಡುತ್ತಿದ್ದರು. ಅಷ್ಟರಲ್ಲಿ ಮೆಟ್ಟಿಲುಗಳ ಮೇಲಿಂದ ಇಳಿದು ಕೆಳಗೆ ಬರುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಈ ವಿಡಿಯೋವನ್ನು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ವಿಜಯ್ ದೇವರಕೊಂಡ ಕ್ಯಾಮರಾ ಮುಂದೆ ಮುಜುಗರ ಎದುರಿಸಬೇಕಾಯಿತು.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. “ಒರ್ವ ವ್ಯಕ್ತಿ ಕೆಳಗೆ ಬೀಳುವುದು ಹೇಗೆ ಸುದ್ದಿಯಾಗುತ್ತದೆ ಎಂದು ಕೇಳುತ್ತಿದ್ದಾರೆ?. ಪ್ರತಿದಿನ ಸಾವಿರಾರು ಜನ ಹೀಗೆ ಬೀಳುತ್ತಾರೆ, ಎಲ್ಲರ ಸುದ್ದಿ ಮಾಡ್ತೀರಾ” ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ಬಳಕೆದಾರರು “ಈ ರೀತಿಯ ವಿಡಿಯೋಗಳನ್ನು ಮಾಡುವುದು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದು ಕೆಟ್ಟ ಕೆಲಸ” ಎಂದು ತಿಳಿಸಿದ್ದಾರೆ.
ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ ತಲೆಗೆ ಕ್ಯಾಪ್ ಧರಿಸಿರುವುದನ್ನು ನೀವು ನೋಡಬಹುದು. ಅವರು ಹೊರಬರಲು ಮೆಟ್ಟಿಲುಗಳ ಮೂಲಕ ಬರುತ್ತಿದ್ದರು. ಮೆಟ್ಟಿಲು ಇಳಿದು ಕೆಳಗೆ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಲು ಜಾರಿ ಬೀಳುತ್ತಾರೆ. ಅವರ ತಂಡದ ಸದಸ್ಯರು ತಕ್ಷಣ ಅವರನ್ನು ಎಬ್ಬಿಸುತ್ತಾರೆ. ಅದೃಷ್ಟವಶಾತ್ ಅವರು ಬಿದ್ದಾಗ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ.
ವಿಜಯ್ ದೇವರಕೊಂಡ ಪ್ರಸ್ತುತ ಗೌತಮ್ ತಿನ್ನನೂರಿ ಅವರ ಮುಂದಿನ ಚಿತ್ರದ ಚಿತ್ರೀಕರಣದ ಸಮಯದಲ್ಲಿಯಾದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಇಡಲಾಗಿಲ್ಲ, ಆದ್ದರಿಂದ ಇದನ್ನು ವಿಡಿ 12 ಎಂದು ಕರೆಯಲಾಗುತ್ತಿದೆ. ಗಾಯದ ಹೊರತಾಗಿಯೂ, ವಿಜಯ್ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ವಿಳಂಬ ಮಾಡಲಿಲ್ಲ. ಏಕೆಂದರೆ ಅವರ ತಂಡಕ್ಕೆ ಸಮಯವಿರಲಿಲ್ಲ. ವಾಸ್ತವವಾಗಿ, ಈ ಚಿತ್ರದ ದೃಶ್ಯವನ್ನು ಚಿತ್ರೀಕರಿಸುವಾಗ ಅವರ ಭುಜದ ಮೇಲೆ ಗಾಯವಾಯಿತು. ಇದರಿಂದಾಗಿ ಅವರು ಇನ್ನೂ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಹೊರತಾಗಿಯೂ, ವಿಜಯ್ ದೇವರಕೊಂಡ ಚಿತ್ರದ ಶೂಟಿಂಗ್ಗೆ ತೊಂದರೆಯಾಗಲು ಬಿಡಲಿಲ್ಲ. ಅವರು ನಿರಂತರವಾಗಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ವಿಜಯ್ ಅಭಿಮಾನಿಗಳು ವಿಜಯ್ ಅವರ ಇತ್ತೀಚಿನ ಗಾಯಗಳನ್ನು ಗಮನಿಸಿ ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ವಿಜಯ್ ಅವರು ಫಿಸಿಯೋ ಮತ್ತು ರಿಹ್ಯಾಬ್ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಏಕೆಂದರೆ ಅವರು ಚಿತ್ರೀಕರಣದ ಸಮಯದಲ್ಲಿ ಹೊಡೆದಾಟದ ದೃಶ್ಯದಲ್ಲಿ ಗಾಯಗೊಂಡ ನಂತರ ಅವರ ಭುಜವು ನೋಯುತ್ತಿದೆ. ಆದರೆ ಅವರು ಇನ್ನೂ ತಮ್ಮ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಅವರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಗಾಯವನ್ನು ಮತ್ತಷ್ಟು ಹೆಚ್ಚಾಗದಂತೆ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಅವರ ವೇಳಾಪಟ್ಟಿಯಲ್ಲಿ ಈಗ ವಿರಾಮಕ್ಕೆ ಸಮಯವಿಲ್ಲ ಎನ್ನಲಾಗಿದೆ.