ನವರಸ ಎಂದೊಡನೆ ತಟ್ಟನೆ ನೆನಪಾಗುವುದು ನವರಸಗಳ ಅಧಿಪತಿಯೆಂದೇ ಹೆಸರು ಪಡೆದಿರುವ “ಜಗ್ಗೇಶ್“.ಈತ ನಟನಾಗಿ ಪರಿಚಯಿಸಿಕೊಂಡು ದಶಕಗಳೇ ಕಳೆದಿವೆ ಹೀಗಿದ್ದರೂ ಇನ್ನು ನಮ್ಮ ಚಂದನವನದಲ್ಲಿ ಇವರ ಸಿನಿಮಾಗಳಿಗೆ ಮುಂಚೆ ಇದ್ದ ಬೇಡಿಕೆ ಹಾಗಿಯೇ ಇದೆ. ಇವರ ಸಿನಿಮಾಗಳಿಗೆ ದಶಕಗಳ ಹಿಂದೆ ಹೇಗೆ ಕಾಯುತ್ತಾ ಕುಳಿತಿರುತಿದ್ದರೋ ಹಾಗೆಯೇ ಇಂದಿಗೂ ಜಗ್ಗೇಶ್ ಅವರ ಸಿನಿಮಾಗಳ ಬಿಡುಗಡೆ ದಿನಗಳನ್ನು ಕಾಯುತ್ತಾ ಕುಳಿತಿರುವ ಅಭಿಮಾನಿಗಳು ಇದ್ದಾರೆ. ಇವರಿಗೆ ಇಷ್ಟು ವಯಸ್ಸಾಗಿದ್ದರು ಇವರ ನಟನೆ ಯ ಬಗ್ಗೆ ಹಾಗೂ ಇವರ ಅಭಿಮಾನಿಗಳ ಬಗ್ಗೆ ನಂಬಿಕೆ ಇಟ್ಟು ಇಂದಿಗೂ ನಿರ್ದೇಶಕರು ಹಾಗೂ ನಿರ್ಮಾಪಕರು ಇವರಿಗಾಗಿ ಸಿನಿಮಾ ಆಫರ್ ಕೊಡುತ್ತಾರೆ ಎಂದರೆ ಈ ನಟನಾ ಕೌಶಲ್ಯವನ್ನು ನಾವೆಲ್ಲರೂ ತಿಳಿಯ ಬೇಕಿದೆ.

ಈಗ ಸದ್ಯದಲ್ಲಿ ಜಗ್ಗೇಶ್ ಹಾಗೂ “ಅದಿತಿ ಪ್ರಭುದೇವ” ಅವರ ನಟನೆಯ “ತೋತಾ ಪುರಿ” ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಪಡೆದಿತ್ತು.ಅಷ್ಟಾಗಿ ಸದ್ದು ಮಾಡದಿದ್ದರು ಬಹುಶಃ ಗೆಲುವಿನ ಹಾದಿ ಹಿಡಿಯಿತು. ಇದೀಗ ಜಗಣ್ಣ ತಮ್ಮ ರಾಜಕೀಯದಲ್ಲಿ ಹಾಗೂ ಕಿರಿತೆರೆಯಲ್ಲಿ ಬಹಳ ಬ್ಯುಸಿ ಇದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ವಿಚಾರ ಎಂದರೆ ಜಗ್ಗೇಶ್ ಅವರ ಸಂಭಾವನೆ ವಿಚಾರ ಕೂಡ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು.ಜಗ್ಗೇಶ್ ಅವರು ಇಂದಿಗೂ ನಟನಾಗಿ ಕಾಣಿಸಿಕೊಳ್ಳುತ್ತಾರೆ ಎಂದರೆ ಅವರ ನಟನೆಯ ಶಕ್ತಿ ಎಷ್ಟಿದೆ ಎಂಬುದು ಇದರಿಂದಲೇ ತಿಳಿಯುತ್ತದೆ.
ನಟ ಜಗ್ಗೇಶ್ ಅವರು ಹಿರಿತೆರೆಯಲ್ಲಿ ಮತ್ತು ಕಿರುತೆರೆಯಲ್ಲಿ ಸದಾ ಸಕ್ರಿಯರಾಗಿರುತ್ತಾರೆ.ಇವರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲು ಬರೋಬ್ಬರಿ ಎರಡು ಕೋಟಿ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಮೂರು ಕೋಟಿಯನ್ನು ಸಂಭಾವನೆ ಪಡೆದುಕೊಳ್ಳುತ್ತಾರೆ.ಈ ಸಂಭಾವನೆ ತನ್ನ ಸಂಸಾರವನ್ನು ತೂಡಗಿಸಿಕೊಂಡು ಹೋಗಲು ಸಾಕು.ನನಗೇನು ಡಜನ್ ಡಜನ್ ಹೆಂಡತಿಯರು ಹಾಗೂ ಮಕ್ಕಳು ಇಲ್ಲ. ನನಗಿರುವುದು ಒಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳು ಹಾಗಾಗಿ ಈ ಹಣ ನನ್ನ ಸಂಸಾರವನ್ನು ಸುಖವಾಗಿ ಇಟ್ಟಿದೆ. ನಾವೆಲ್ಲರೂ ಖುಷಿಯಿಂದ ಇದ್ದೇವೆ ಎಂದು ಬಹಳ ಗರ್ವದಿಂದ ತನ್ನ ಸಂಭಾವನೆಯನ್ನು ವ್ಯಕ್ತಪಡಿಸಿದ್ದರು.
ಜಗ್ಗೇಶ್ ಅವರು ತಿಳಿಸಿರುವ ಹಾಗೆ ಸಿನಿಮಾಗಾಗಿ ಹತ್ತು ಲಕ್ಷ ಹಾಗೂ ಕಿರುತೆರೆಯಲ್ಲಿ ಒಂದು ದಿನದ ಕಾರ್ಯಕರಾಮಗಳಿಗೆ 2ಲಕ್ಷ ಸಂಭಾವನೆ ಪಡೆಯುತ್ತಾರೆ ಎಂದು ಅವರೇ ತಿಳಿಸಿದ್ದಾರೆ.ಇದೀಗ ಜಗ್ಗೇಶ್ ಮಗನ ವಿಚಾರವಾಗಿ ಬಹಳ ಸದ್ದು ಮಾಡುತ್ತಿದ್ದಾರೆ.ಕರೋನ ಸಂಧರ್ಭದಲ್ಲಿ ಜಗ್ಗೇಶ್ ಅವರ ಕಿರಿಯ ಪುತ್ರ ನ ಅಪಘಾತವಾಗಿತ್ತು.ಆ ವಿಚಾರದ ಬಗ್ಗೆ ಜಗ್ಗೇಶ್ ಅವರು ಈಗ ಮಾತನಾಡಿದ್ದಾರೆ.ನನ್ನ ಮಗನಿಗೆ ಬುಧಭುಕ್ತಿ ಇತ್ತು. ಹಾಗಾಗಿ ಹುಷಾರಿಂದ ಇರುವಂತೆ ಅವನಿಗೆ ಹೇಳಿದ್ದೆ. ಕೋವಿಡ್ ಸಂದರ್ಭಲ್ಲಿ ಯತೀಶ್ ಎಲ್ಲಿಯೂ ಹೋಗುತ್ತಿರಲಿಲ್ಲ.ಹಾಗಾಗಿ ಅವನು ನಾನಾ ಆಪಾದನೆಗಳಿಗೂ ಹಾಗೂ ತಿಂದರೆಗಳಿಗೂ ಸಿಲುಕುತ್ತಿದ್ದಾನೆ ಎಂದರು.
ಆ ನಂತರ ತನ್ನ ತಮ್ಮ ಹಾಗೂ ಸ್ಯಾಂಡಲ್ವುಡ್ ನ ಬೆಸ್ಟ್ ಕಾಮಿಡಿಯನ್ ಹಾಗೂ ಹೀರೊ ಆಗಿ ಗುರುತಿಸಿಕೊಂಡಿರುವ ಕೋಮಲ್ ಅವರು ಮತೋಮ್ಮೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.ಕೋಮಲ್ ಅವರಿಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದು ಅಸಾಧ್ಯ ಎಂದು ನನಗೆ ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಸೂಚಿಸಿದ್ದೆ. ಇದೀಗ ಕೇತುದೆಸೆ ಅವನಿಗೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಕಾಣುತ್ತದೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಮಾತನಾಡಿದರು ಜಗ್ಗೇಶ್.



