ಇತ್ತೀಚಿನ ದಿನಗಳಲ್ಲಿ ಪ್ರೀತಿ ಅಥವಾ ಆ ಭಾವನೆಗೆ ಬೆಲೆಯೇ ಇಲ್ಲದಂತಾಗಿದೆ. ಪ್ರೀತಿಯ ಹುಚ್ಚಾಟದಿಂದ ಹದಿಹರೆಯದ ಯುವಕ ಯುವತಿಯರೇ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಇದೀಗ ನಡೆದಿರುವ ಘಟನೆಯೊಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಸುವ ಹುಚ್ಚಾಟಕ್ಕೆ ಜೀವಂತ ಸಾಕ್ಷಿಯಾಗಿದೆ. ನಿಹಾರಿಕ ಎನ್ನುವ ಹುಡುಗಿಯೊಬ್ಬಳು ಇಬ್ಬರು ಯುವಕರನ್ನು ಒಂದೇ ಸಮಯಕ್ಕೆ ಪ್ರೀತಿಸುವ ನಾಟಕವಾಡಿ ಮೋಸ ಮಾಡಿದ್ದಾಳೆ. ಆದರೆ ಕೊನೆಗೆ ಅದೇ ನಿಹಾರಿಕ ದು’ರಂತ ಅಂತ್ಯ ಕಂಡಿದ್ದಾಳೆ.

ಹೌದು, ನಿಹಾರಿಕಾ ಮೂಲತಃ ಆಂಧ್ರಪ್ರದೇಶದವಳು. ಈಕೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾಗ ಆಂಧ್ರ ಮೂಲದ ಕ್ಲಾಸ್ ಮೇಟ್ ಚವ್ವ ವಂಶಿಧರ್ ಎಂಬಾತನನ್ನು ಲವ್ ಮಾಡುತ್ತಾ ಊರೆಲ್ಲ ತಿರುಗಾಡುತ್ತಿದ್ದಳು. ಇದೇ ಸಮಯ ಈಕೆಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಅಜಯ್ ಎಂಬ ಯುವಕನ ಪರಿಚಯವಾಗಿ ಆತನನ್ನೂ ಪ್ರೀತಿಸುತ್ತಿರುವಂತೆ ನಾಟಕವಾಡಿದ್ದಳು. ಆದರೆ ಈಕೆಯ ನಾಟಕದ ಪ್ರೀತಿಯ ವಿಚಾರ ಆ ಇಬ್ಬರು ಯುವಕರಿಗೂ ಅರಿವಾಗಿದೆ. ಇದರಿಂದ ಕುಪಿತಗೊಂಡ ಭಗ್ನ ಪ್ರೇಮಿಳಿಬ್ಬರೂ ಆಕೆಗೆ ಪ್ರತಿದಿನ ಮಾನಸೀಕ ಹಿಂಸೆ ನೀಡಲು ಆರಂಭಿಸಿದರು.
ಪ್ರೀತಿಯ ನಾಟಕ ತಿಳಿದ ಯುವಕರಿಬ್ಬರ ಕಿರುಕುಳ ತಾಳಲಾರದೇ 22ವರ್ಷದ ನಿಹಾರಿಕಾ ಮನೆಗೆ ಕರೆ ಮಾಡಿ ನಾನು ಬರುತ್ತಿದ್ದೇನೆ ಎಂದು ತಿಳಿಸಿದ್ದಳು. ಆದರೆ ಈ ಹೋಗುವ ಮಾರ್ಗ ಮಧ್ಯೆ ಭಾಗೇಪಲ್ಲಿ ಎಂಬಲ್ಲಿ ಬಸ್ಸಿನಿಂದ ಇಳಿದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 3-4 ದಿನ ಕಳೆದರೂ ಮಗಳು ಮನೆಗೆ ಬಾರದನ್ನು ಕಂಡ ಆಕೆಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಮಗಳು ನಿಹಾರಿಕಾ ಚಿತ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಒಟ್ಟಿನಲ್ಲಿ ಕಲಿತು, ಉದ್ಯೋಗಕ್ಕೆ ಸೇರಿ ಸುಂದರ ಜೀವನ ಕಟ್ಟಿಕೊಳ್ಳಬೇಕಾದ ಯುವತಿಯೊಬ್ಬಳು ಇಬ್ಬರು ಯುವಕರ ಜೀವನದಲ್ಲಿ ಚೆಲ್ಲಾಟವಾಡಿ ಕೊನೆಗೆ ತಾನೇ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಇಂತಹ ಘಟನೆಗಳು ಸುತ್ತಮುತ್ತ ನಡೆಯುವುದನ್ನು ಗಮನಿಸಿಯಾದರು ಇಂದಿನ ಯುವ ಜನರು ಎಚ್ಚೆತ್ತುಕೊಳ್ಳದಿದ್ದರೆ ಇಂತಹ ಘಟನೆಗಳಿಗೆ ಕೊನೆಯೇ ಇಲ್ಲದಂತಾಗುತ್ತದೆ.