ಕೆಲವೊಮ್ಮೆ ಜೀವನದಲ್ಲಿ ಆಕಸ್ಮಿಕಗಳು, ಅಚ್ಚರಿಗಳು ಸಂಭವಿಸುತ್ತವೆ. ಅಂತಹದ್ದೊಂದು ಅಚ್ಚರಿಯ ಕತೆ ಇಲ್ಲಿದೆ ನೋಡಿ. ಯುವತಿಯೊಬ್ಬಳು ಒಂದೊಮ್ಮೆ ರಸ್ತೆ ಬದಿಯಲ್ಲಿ ಸಿಕ್ಕ ಬೆಕ್ಕಿನ ಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಾರೆ. ಕಪ್ಪು ಬಣ್ಣದ ಚಿಕ್ಕ ಮರಿ ಎಂದು ತಿಳಿದುಕೊಂಡು ಮನೆಯಲ್ಲಿಯೇ ಅದರ ಪಾಲನೆ, ಪೋಷಣೆ ಮಾಡುತ್ತಾರೆ. ಆದರೆ ದಿನ ಕಳೆಯುತ್ತಾ ಹೋದಂತೆ ಅದು ಬೆಕ್ಕಿನ ಮರಿಯಲ್ಲ ಎಂಬುದು ಆಕೆಗೆ ತಿಳಿಯುತ್ತದೆ. ಹಾಗಿದ್ದರೆ ಅದು ಮತ್ಯಾವ ಪ್ರಾಣಿಯಾಗಿತ್ತು?. ಈ ವಿಡಿಯೋ ನೋಡಿ.

https://www.instagram.com/reel/Cxa1_O2tdea/?utm_source=ig_web_copy_link
ಯುವತಿ ಕಪ್ಪು ಬಣ್ಣದ ಬೆಕ್ಕಿನ ಮರಿಯೆಂದು ಸಾಕಿದವಳಿಗೆ ಅದರ ಬೆಳವಣಿಗೆ ಕಂಡತೆ ಅದು ಕರಿ ಚಿರತೆ ಎಂಬುದು ಧೃಡವಾಗಿದೆ. ಆದರೆ ಅದು ಪ್ಯಾಂಥರ್ ಎಂದು ಗೊತ್ತಾದ ಮೇಲೂ ಯುವತಿ ಅದನ್ನು ದೂರ ಮಾಡಲಿಲ್ಲ. ಬದಲಾಗಿ ಮನೆಯಲ್ಲೇ ಸಾಕಿದ್ದಾಳೆ. ಸದ್ಯ, ಆ ಬ್ಲಾಲ್ ಪ್ಯಾಂಥರ್ ಬೆಕ್ಕಿಗಿಂತಲೂ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿದೆ. ಯುವತಿಯೊಂದಿಗೆ ಪ್ಯಾಂಥರ್ ಆಟವಾಡುವ, ಓಡಾಡುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ರಷ್ಯಾದಲ್ಲಿ ಬೆಳಕಿಗೆ ಬಂದ ಘಟನೆ. ಇದೀಗ ಇನ್ಸ್ಟಾಗ್ರಾಂನಲ್ಲಿ ಪ್ಯಾಂಥರ್ ವಿಡಿಯೋ ವೈರಲ್ ಆಗಿದೆ. ಕಣ್ಣು ಬಿಡದ ಪ್ಯಾಂಥರ್ ಮರಿ ಆಕಸ್ಮಿಕವಾಗಿ ಸಿಕ್ಕಿದಲ್ಲಿಂದ ಅದರ ಬೆಳವಣಿಗೆ, ಮನೆಯ ಶ್ವಾನದೊಂದಿಗೆ ಆಟ, ಹೀಗೆ ಪ್ಯಾಂಥರ್ ವಿಡಿಯೋವನ್ನು ಫಾಕ್ಟ್ ಮೇಯರ್ ಎಂಬ ಇನ್ಸ್ಟಾ ಖಾತೆ ಹಂಚಿಕೊಂಡಿದೆ. 72 ಲಕ್ಷಕ್ಕೂ ಅಧಿಕ ಜನರು ವಿಡಿಯೋವನ್ನು ಇಷ್ಟಪಟ್ಟು ಲೈಕ್ ಮಾಡಿದ್ದಾರೆ.