ನೆರೆ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ವೇಳೆ ಮಹಿಳೆಯೊಬ್ಬಳು ‘ಕಷ್ಟದಲ್ಲಿದ್ದಾಗ ಬರದ ನೀವು ಈಗ ಯಾವ ಪುರುಷಾರ್ಥಕ್ಕೆ ಬಂದಿದ್ದಿರಿ’ ಎಂದು ಶಾಸನ ಈಶ್ವರ್ ಸಿಂಗ್ ತರಪಾಕಿಯ ಕಪಾಳಕ್ಕೆ ಬಾರಿಸಿದ ಘಟನೆ ಇತ್ತೀಚೆಗೆ ಹರಿಯಾಣದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಧೈರ್ಯದಿಂದ ಶಾಸಕನ ಕೆನ್ನೆಗೆ ಬಾರಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಹರಿಯಾಣಾದ ಗುಹಾ ಪ್ರದೇಶದಲ್ಲಿ ಘಾಗ್ಗರ್ ನದಿ ನೆರೆ ಬಂದ ಪರಿಣಾಮ ಎಲ್ಲೆಡೆ ಜಲಾವೃತಗೊಂಡು ಜನ ಅತಂತ್ರಗೊಂಡಿದ್ದರು. ಈ ವೇಳೆ ಸಂತ್ರಸ್ತರನ್ನು ಭೇಟಿಯಾಗಲು ಜನನಾಯಕ್ ಜನತಾ ಪಕ್ಷದ ಶಾಸಕ ಈಶ್ವರ್ ಸಿಂಗ್ ತೆರಳಿದ್ದರು. ಸಾರ್ವಜನಿಕರೊಡನೆ ಶಾಸಕರು ಮಾತನಾಡುತ್ತಿರುವ ನೆರೆದಿದ್ದ ಜನ ತಾಳ್ಮೆ ಕೆಟ್ಟು ಆಕ್ರೋಶ ವ್ಯಕ್ತ ಪಡಿಸಿದರು.
ಅದೇ ಸಂತ್ರಸ್ತರ ಗುಂಪಿನಲ್ಲಿದ್ದ ಮಹಿಳೆಯೊಬ್ಬಳು ಆಕ್ರೋಶದಿಂದ ಶಾಸಕನ ಕಪಾಳಕ್ಕೆ ಬಾರಿಸಿದ್ದಾಳೆ. ಕೂಡಲೆ ಶಾಸಕರ ಅಂಗರಕ್ಷಕರು ಮಹಿಳೆಯನ್ನು ದೂರ ತಳ್ಳಿ ಇನ್ನಷ್ಟು ಗಲಾಟೆಯಾಗುವುದನ್ನು ತಪ್ಪಿಸಿದ್ದಾರೆ.ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.