ಹಾವುಗಳನ್ನು ಕಂಡು ಭಯ ಪಡದವರು ಬಹುಶಃ ಯಾರೂ ಇರಲಿಕ್ಕಿಲ್ಲ. ದೂರದಲ್ಲಿ ಹಾವು ಕಂಡರೂ ಒಮ್ಮೆ ಜೀವ ಬಾಯಿಗೆ ಬಂದಂತಾಗುತ್ತದೆ. ಹೀಗಿರುವಾಗ ವ್ಯಕ್ತಿಯೊಬ್ಬ ತೊಟ್ಟಿರುವ ಶರ್ಟ್ ಒಳಗೆ ಹಾವು ನುಸುಳಿದರೆ ಆತನ ಗತಿ ಏನಾಗಬೇಡ. ಹಾಗಂತ ಇದು ಕತೆಯಲ್ಲ, ನಿಜವಾಗಿಯೂ ನಡೆದ ಘಟನೆ. ಹಾಗಾದ್ರೆ ಹಾವು ಯಾರ ಶರ್ಟ್ ಒಳಗೆ ನುಸುಳಿದ್ದು?, ಆಮೇಲೆನಾಯ್ತು? ವೈರಲ್ ವಿಡಿಯೋದಲ್ಲಿ ಏನಿದೆ? ನೋಡೋಣ.
ಈ ಘಟನೆ ನಡೆದದ್ದು ಮಹಾರಾಷ್ಟ್ರದಲ್ಲಿ. ಅಲ್ಲಿನ ಪಾರ್ಕಿನ ಮರವೊಂದರ ಕೆಳಗೆ ವ್ಯಕ್ತಿಯೊಬ್ಬ ವಿಶ್ರಾಂತಿಗಾಗಿ ಕುಳಿತಿದ್ದ. ಅದೇ ವೇಳೆಗೆ ನಾಗರ ಹಾವೊಂದು ಸೈಲೆಂಟ್ ಆಗಿ ಆತನ ಶರ್ಟಿನೊಳಗೆ ನುಸುಳಿದೆ. ಆದರೆ ಆ ವ್ಯಕ್ತಿಗೆ ಮಾತ್ರ ತನ್ನ ಶರ್ಟ್ ಒಳಗೆ ಹಾವು ನುಸುಳಿದ ಸಂಗತಿಯೇ ತಿಳಿಯಲಿಲ್ಲ. ಆದರೆ ಪಾರ್ಕಿನಲ್ಲಿದ್ದ ಕೆಲವರು ಇದನ್ನು ನೋಡಿದ್ದಾರೆ. ಆಗ ಹಾವು ನುಸುಳಿರುವುದು ತಿಳಿದ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬೇಡ ಯೋಚಿಸಿ.
ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯ ಶರ್ಟ್ ಒಳಗೆ ಹಾವು ಹೋಗಿರುವುದನ್ನು ಅಲ್ಲಿದ್ದ ಕೆಲವರು ನೋಡಿ ಆತನಿಗೆ ವಿಚಾರ ತಿಳಿಸಿದ್ದಾರೆ. ಆ ನಂತರ ನಿಧಾನವಾಗಿ ಆತನ ಶರ್ಟ್ ಬಟನ್ ಗಳನ್ನು ತೆಗೆದಿದ್ದಾರೆ. ಈ ವೇಳೆ ಹಾವು ಆತನ ಶರ್ಟಿನೊಳಗೆ ದೇಹದ ಸುತ್ತ ಹರಿದಾಡಿದೆ. ಹೀಗೆ ಒಂದೊಂದೆ ಬಟನ್ ಗಳನ್ನು ತೆಗೆದ ನಂತರ ಹಾವು ನಿಧಾನವಾಗಿ ತನ್ನ ದೇಹವನ್ನು ಹೊರ ಹಾಕಿ ಅಂತಿಮವಾಗಿ ಹಾವು ಶರ್ಟ್ ನಿಂದ ಹೊರ ಬಂದಿದೆ. ಆ ವ್ಯಕ್ತಿಯ ಅದೃಷ್ಟಕ್ಕೆ ಹಾವು ಕಚ್ಚದೆ ಮುಂದೆ ಸಾಗಿದೆ. ಸದ್ಯ, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.



