ಬಾಲಿವುಡ್ ನಲ್ಲಿ ಒಳ್ಳೆಯ ಸಿನಿಮಾಗಳು, ಸಾಮಾಜಿಕ ಕಳಕಳಿ ಇರುವಂಥ ಸಿನಿಮಾಗಳು ಬರುವುದು ಅಪರೂಪ. ಅಂಥ ಕಥೆಗಳಲ್ಲಿ ಎಲ್ಲಾ ಕಲಾವಿದರು ಕೂಡ ನಟಿಸುವುದಿಲ್ಲ. ಕೆಲವೇ ಕೆಲವು ಒಳ್ಳೆಯ ಕಲಾವಿದರು ಮಾತ್ರ ಅಂಥ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥ ಕಲಾವಿದರಲ್ಲಿ ನಟ ವಿಕ್ರಾಂತ್ ಮೆಸ್ಸಿ ಅವರು ಕೂಡ ಒಬ್ಬರು. ಇತ್ತೀಚೆಗೆ ಇವರು ನಟಿಸಿದ ಸಾಬರ್ಮತಿ ಎಕ್ಸ್ಪ್ರೆಸ್ ಸಿನಿಮಾ ಬಿಡುಗಡೆ ಆಗಿ, ಸೂಪರ್ ಹಿಟ್ ಆಗಿದೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಹೆಚ್ಚು ಜನರು ಈ ಕಥೆಗೆ ಕನೆಕ್ಟ್ ಆದರು. ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಇದೀಗ ವಿಕ್ರಾಂತ್ ಅವರು ಇನ್ನುಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
ಇನ್ನು 2 ಸಿನಿಮಾಗಳು ಉಳಿದಿದ್ದು, ಆ ಎರಡು ಸಿನಿಮಾಗಳು ಮುಂದಿನ ವರ್ಷ ತೆರೆಕಾಣಲಿದೆ, ಅದಾದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ ವಿಕ್ರಾಂತ್. ಇಂದು ವಿಕ್ರಾಂತ್ ಅವರು ಸೋಶಿಯಲ್ ಮೀಡಿಯಾ ಮೂಲಕ ಈ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಬಹಿರಂಗ ಪತ್ರ ಬರೆದು, ಈ ವಿಷಯವನ್ನು ತಿಳಿಸಿದ್ದಾರೆ ನಟ ವಿಕ್ರಾಂತ್. ಜೀವನದಲ್ಲಿ ಇನ್ನು ಮುಖ್ಯ ಆಗಿರುವ ಎಲ್ಲಾ ಜವಾಬ್ದಾರಿಗಳನ್ನು ಪೂರಿಸಬೇಕಿರುವ ಕಾರಣ, ಚಿತ್ರರಂಗದಿಂದ ಹೊರಗಡೆ ಬರುವುದಾಗಿ ವಿಕ್ರಾಂತ್ ತಿಳಿಸಿದ್ದಾರೆ. ಇದೊಂದು ಕಠಿಣ ನಿರ್ಧಾರ ಆಗಿದೆ.

ನಮಸ್ಕಾರ, ಕಳೆದ ಕೆಲವು ವರ್ಷಗಳು ಹಾಗೂ ಅದನ್ನು ಮೀರಿದ ಸಮಯ ಅಸಾಧಾರಣವಾಗಿವೆ. ನಿಮ್ಮ ಅಳಿಸಲಾಗದ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳು
ಆದರೆ ನಾನು ಮುಂದಕ್ಕೆ ಹೋದಂತೆ, ಮರುಮಾಪನ ಮಾಡಲು ಮತ್ತು ಮನೆಗೆ ಹಿಂತಿರುಗಲು ಇದು ಮಹತ್ವದ ಸಮಯ ಎಂದು ನಾನು ಅರಿತುಕೊಂಡೆ, ಈ ಸಮಯದ ಮುಂದಿನ ಹಂತಕ್ಕೆ ಹೋಗಲು ಪತಿಯಾಗಿ, ತಂದೆ ಮತ್ತು ಮಗನಾಗಿ ಮತ್ತು ನಟನಾಗಿಯೂ ಸಹ ನಾನು ನನ್ನ ಮನೆಗೆ ಮರಳಿ ಹೋಗಬೇಕಿದೆ.. ಆದ್ದರಿಂದ 2025 ರಲ್ಲಿ, ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗೋಣ.. ಸಮಯ ಸರಿ ಎಂದು ಭಾವಿಸುವವರೆಗೆ ಸಿಗೋಣ.. ಇನ್ನು 2 ಚಲನಚಿತ್ರಗಳು ಉಳಿದಿವೆ ಅದರ ಜೊತೆಗೆ ಹಲವು ವರ್ಷಗಳ ನೆನಪುಗಳು ಸೇರಿದೆ..ಮತ್ತೊಮ್ಮೆ ಧನ್ಯವಾದಗಳು. ಎಲ್ಲದಕ್ಕೂ ಮತ್ತು ನಮ್ಮ ನಡುವೆ ಇರುವ ಎಲ್ಲದಕ್ಕೂ. ಸದಾ ಋಣಿಯಾಗಿರುವೆ..”
ಎಂದು ಬರೆದುಕೊಂಡಿದ್ದಾರೆ ನಟ ವಿಕ್ರಾಂತ್. ಈ ಸಾಲುಗಳು ಬಹಳ ಭಾವನಾತ್ಮಕವಾಗಿದೆ. ಇನ್ನು ಇರುವುದು 2 ಸಿನಿಮಾಗಳು ಮಾತ್ರ ಎನ್ನುವುದನ್ನು ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ವಿಕ್ರಾಂತ್ ಅವರಿಗೆ ಹೆಚ್ಚು ವಯಸ್ಸು ಕೂಡ ಆಗಿಲ್ಲ. ಈಗ ಅವರಿಗೆ 37 ವರ್ಷ. ಕಷ್ಟಪಟ್ಟು ಬೆಳೆದು ಬಂದಿರುವ ಪ್ರತಿಭೆ ವಿಕ್ರಾಂತ್ ಅವರು. ಕಮರ್ಷಿಯಲ್, ಮಸಾಲ ಸಿನಿಮಾಗಳಿಗಿಂತ ಒಳ್ಳೆಯ ಕಂಟೆಂಟ್ ಅನ್ನು ಜನರಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದ ಇವರು. ಇಂಥ ವಿಕ್ರಾಂತ್ ಅವರು ಸಿನಿಮಾ ಇಂದ ಹೊರ ಹೋಗುತ್ತಿರುವುದು ಬೇಸರವೇ.

ಆದರೂ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಾಳಜಿ ವಹಿಸಿ, ಕುಟುಂಬಕ್ಕೆ ಸಮಯ ಕೊಡಬೇಕು, ಇನ್ನು ಏನನ್ನಾದರೂ ಸಾಧಿಸಬೇಕು ಎನ್ನುವ ಮನಸ್ಥಿತಿಯಲ್ಲಿ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಒಂದು ರೀತಿಯಲ್ಲಿ ಸಂತೋಷದ ವಿಷಯವು ಹೌದು. ಬಣ್ಣದ ಪ್ರಪಂಚ ನೋಡಿದವರಿಗೆ ಹೊರಗಿನ ಪ್ರಪಂಚ ಇಷ್ಟ ಆಗುವುದಿಲ್ಲ. ಆದರೆ ವಿಕ್ರಾಂತ್ ಅವರು ಇದಕ್ಕೆ ಭಿನ್ನವಾಗಿದ್ದಾರೆ. ವೈಯಕ್ತಿಕ ಜೀವನಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಕಲಾವಿದರು ಹೀಗೂ ಯೋಚಿಸಬಹುದು, ಹೀಗೂ ಇರಬಹುದು ಎಂದು ಅರ್ಥ ಮಾಡಿಸುತ್ತಿದ್ದಾರೆ ವಿಕ್ರಾಂತ್