ಮೋಕ್ಷಿತಾ ಪೈ ಈಗ ಎಲ್ಲಾ ಹುಡುಗರ ಕನಸಿನ ಕನ್ಯೆ ಆಗಿರೋದಂತೂ ನಿಜ. ಬಿಗ್ ಬಾಸ್ ಮನೆಯ ಒಳಗೆ ತಮ್ಮ ವ್ಯಕ್ತಿತ್ವವನ್ನು ಯಾವುದೇ ಕಾರಣಕ್ಕೂ, ಏನೇ ನಡೆದರೂ ಬಿಟ್ಟುಕೊಡದೇ, ಸ್ವಾಭಿಮಾನ ಎನ್ನುವುದನ್ನು ಎತ್ತಿ ಹಿಡಿದು, ಕಾಪಾಡಿಕೊಂಡು ಬಂದ ಹುಡುಗಿ ಮೋಕ್ಷಿತಾ. ಇದೇ ಕಾರಣಕ್ಕೆ ಇವರು ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಈ ಬಿಬಿಕೆ11 ನಲ್ಲಿ ಮೋಕ್ಷಿತಾ ಅವರು ಗೆದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎನ್ನುವುದು ಎಲ್ಲರ ಅಭಿಪ್ರಾಯ ಆಗಿತ್ತು. ಗೆಲ್ಲುವುದಕ್ಕೆ ಸಾಧ್ಯ ಆಗದೇ ಹೋದರು, ಫಿನಾಲೆ ತಲುಪಿ 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಎಲಿಮಿನೇಟ್ ಆದರು, ಹೊರಗಡೆ ಜನರ ಪ್ರೀತಿ ಪಡೆದುಕೊಂಡಿದ್ದಾರ. ಇದಕ್ಕಿಂತ ದೊಡ್ಡ ಯಶಸ್ಸು ಸಿಗುವುದಕ್ಕೆ ಸಾಧ್ಯವಿಲ್ಲ. ಬಿಗ್ ಬಾಸ್ ಇಂದ ಹೊರಬಂದ ಬಳಿಕ ಸಂದರ್ಶನಗಳಲ್ಲಿ ಬ್ಯುಸಿ ಇರುವ ಮೋಕ್ಷಿತಾ, ಇದೀಗ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ತಿಳಿಸಿದ್ದಾರೆ.

ಬಿಗ್ ಬಾಸ್ ಗಿಂತ ಮೊದಲು ಮೋಕ್ಷಿತಾ ಅವರಿಗೆ ಹೆಸರು ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಪಾರು ಧಾರಾವಾಹಿ. ಈ ಪಾತ್ರ ಎಷ್ಟು ಅದ್ಭುತವಾಗಿ ಮೂಡಿಬಂದಿತ್ತು ಎಂದರೆ ಜನ ಇವರನ್ನು ಪಾರು ಎಂದೇ ಕರೆಯುತ್ತಿದ್ದರು. ಪಾರು ಆಗಿ ಎಲ್ಲರ ಮನಸ್ಸು ಕದ್ದಿದ್ದ ಮೋಕ್ಷಿತಾ, ಬಿಗ್ ಬಾಸ್ ಕಾರ್ಯಕ್ರಮದಿಂದ ಮೋಕ್ಷಿತಾ ಆಗಿ ಅವರ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಇಷ್ಟವಾದರು. ಮೋಕ್ಷಿತಾ ಅವರ ನೇರ ನುಡಿ, ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಸ್ವಭಾವ, ಬೇರೆಯವರ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಮಾಡಿದ ತಪ್ಪುಗಳನ್ನು ಅರ್ಥ ಮಾಡಿಕೊಂಡು, ತಿದ್ದುಕೊಂಡು, ತಮ್ಮ ಪಾಡಿಗೆ ತಾವಿದ್ದು, ಯಾರ ಜೊತೆಗೂ ಗಾಸಿಪ್ ಗೆ ಸಿಲುಕಿಕೊಳ್ಳದೇ ಬಿಗ್ ಬಾಸ್ ಮನೆಯೊಳಗೆ ಜೀವಿಸಿದ ಮೋಕ್ಷಿತಾ, ವ್ಯಕ್ತಿತ್ವದಿಂದ ಹೊರಗಿನ ಜನರ ಮನಸ್ಸು ಗೆದ್ದಿದ್ದಾರೆ.

ಇವರ ಫ್ಯಾಮಿಲಿ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಮೋಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರಿಗೆ ಅಪ್ಪ ಅಮ್ಮ ಹಾಗೂ ತಮ್ಮ ಇದ್ದಾರೆ. ಮೋಕ್ಷಿತಾ ಅವರ ತಮ್ಮ ಮಂಜುನಾಥ್ ಅವರು ಸ್ಪೆಷಲ್ ಚೈಲ್ಡ್ ಆಗಿರುವ ಕಾರಣ ತಮ್ಮನನ್ನು ಸ್ವಂತ ಮಗನ ಹಾಗೆ ನೋಡಿಕೊಳ್ಳುತ್ತಾರೆ ಮೋಕ್ಷಿತಾ. ತಮ್ಮ ಅಂದರೆ ಮೋಕ್ಷಿತಾ ಅವರಿಗೆ ಅಷ್ಟು ಪ್ರೀತಿ, ಅವರ ಪ್ರತಿ ಕೆಲಸವನ್ನು ಮಾಡುತ್ತಾ, ತಮ್ಮನ ಸೇವೆ ಮಾಡುತ್ತಿದ್ದಾರೆ. ಇಂಥ ಅಕ್ಕನನ್ನ ಪಡೆಯೋಕೆ ಆ ಮಗು ಪುಣ್ಯ ಮಾಡಿದ್ದನು ಎಂದು ಹೇಳೋರೆ ಎಲ್ಲರೂ. ಬಿಗ್ ಬಾಸ್ ಮನೆಗೆ ಫ್ಯಾಮಿಲಿ ವೀಕ್ ನಲ್ಲಿ ತಮ್ಮ ಹಾಗೂ ಅಪ್ಪ ಅಮ್ಮ ಬಂದಾಗ ಭಾವುಕರಾಗಿದ್ದರು, ಅಕ್ಕ ತಮ್ಮನ ಬಾಂಧವ್ಯ ನೋಡಿ ಜನರು ಸಹ ಕಣ್ಣಲ್ಲಿ ನೀರು ಹಾಕಿದ್ದರು.
ಪಕ್ಕಾ ಫ್ಯಾಮಿಲಿ ಹುಡುಗಿ ಸಿಂಪಲ್ ಹುಡುಗಿ ಮೋಕ್ಷಿತಾ ಇನ್ನು ಕೂಡ ಸಿಂಗಲ್ ಆಗಿಯೇ ಇದ್ದಾರೆ. ಮೋಕ್ಷಿತಾ ಅವರ ತಾಯಿಗೆ ತಮ್ಮ ಮಗಳು ಮದುವೆ ಆಗಬೇಕು ಎಂದು ಆಸೆ. ಆದರೆ ಮೋಕ್ಷಿತಾ ಅವರಿಗೆ ಮದುವೆ ಬಗ್ಗೆ ಆಸಕ್ತಿ ಇಲ್ಲ. ಬಿಗ್ ಬಾಸ್ ಮನೆಯ ಒಳಗೆ ಸಹ ಮದುವೆ ವಿಚಾರ ಬಂದಾಗ ತಮಗೆ ಆಸಕ್ತಿ ಇಲ್ಲ ಎಂದೇ ಹೇಳಿದ್ದರು. ಮೋಕ್ಷಿತಾ ಅವರನ್ನು ಮದುವೆಗೆ ಪ್ರಯತ್ನ ನಡೆದರು ಸಹ ಆಕೆ ಒಪ್ಪಿಕೊಳ್ಳಲಿಲ್ಲ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಹ ಈ ವಿಚಾರ ಚರ್ಚೆ ಆಗುತ್ತಿದೆ, ಇಂಟರ್ವ್ಯೂ ಗಳಲ್ಲಿ ಸಹ ಮೋಕ್ಷಿತಾ ಅವರಿಗೆ ಮದುವೆ ಬಗ್ಗೆ, ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಮೋಕ್ಷಿತಾ ಅವರಿಗೆ ಪ್ರಶ್ನೆ ಕೇಳಿದ್ದು, ಕೊನೆಗೂ ಮೋಕ್ಷಿತಾ ಅವರು ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಹಾಗೂ ಇಷ್ಟು ದಿನ ಮದುವೆಗೆ ಯಾಕೆ ಒಪ್ಪಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

ಮೊದಲಿಗೆ ಮೋಕ್ಷಿತಾ ಅವರು ಮದುವೆ ಆಗೋ ಹುಡುಗ ಹೇಗಿರಬೇಕು ಎಂದು ತಿಳಿಸಿದ್ದು.. “ಹುಡುಗ ತುಂಬಾ ಸಿಂಪಲ್ ಆಗಿರಬೇಕು. ತುಂಬಾ ಸಿಂಪಲ್ ಆಗಿರಬೇಕು. ನನ್ನ ಫ್ಯಾಮಿಲಿಗೆ ಗೌರವ ಕೊಡಬೇಕು. ನನ್ನನ್ನ ನನ್ನ ಫ್ಯಾಮಿಲಿ ಇಂದ ದೂರ ಮಾಡಬಾರದು. ನನ್ನ ಕೆಲಸಕ್ಕೆ ಸಪೋರ್ಟ್ ಮಾಡಬೇಕು. ನನ್ನ ಪ್ರೊಫೆಷನ್ ಗೆ ಸಪೋರ್ಟ್ ಮಾಡಬೇಕು..” ಎಂದಿದ್ದಾರೆ. ಬಹಳ ಸಿಂಪಲ್ ಹುಡುಗಿ ಆಗಿರುವ ಮೋಕ್ಷಿತಾ ಅವರ ಆಸೆಗಳು, ಕನಸುಗಳು ಸಹ ಅವರಷ್ಟೇ ಸಿಂಪಲ್ ಆಗಿದೆ. ಹುಡುಗನಲ್ಲಿ ಏನೆಲ್ಲಾ ಅರ್ಹತೆಗಳು ಇರಬೇಕು ಎಂದು ಹುಡುಗಿಯರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಮೋಕ್ಷಿತಾ ಅವರು ಸಿಂಪಲ್ ಆಗಿರುವ ಹುಡುಗ ಬೇಕು ಎನ್ನುತ್ತಿದ್ದಾರೆ. ಮೋಕ್ಷಿತಾ ಅವರ ಗುಣ ನಿಜಕ್ಕೂ ಮೆಚ್ಚುವಂಥದ್ದು. ಇನ್ನು ಇಷ್ಟು ದಿವಸ ಮದುವೆಗೆ ಆಸಕ್ತಿ ತೋರದೇ ಇದ್ದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಸಹ ಉತ್ತರ ಕೊಟ್ಟಿದ್ದಾರೆ..
ಅಮ್ಮ ಅಪ್ಪನಿಗೆ ಮೋಕ್ಷಿತಾ ನೋಡಬೇಕು ಎಂದು ಆಸೆ ಇದ್ದರು ಸಹ ಮೋಕ್ಷಿತಾ ಮದುವೆಗೆ ಒಪ್ಪಿರಲಿಲ್ಲ. ಅದಕ್ಕೆ ಸಹ ಮುಖ್ಯವಾದ ಕಾರಣ ಇದೆ. ತಮ್ಮ ಸ್ಪೆಷಲ್ ಚೈಲ್ಡ್ ಆಗಿರುವ ಕಾರಣ ಮೋಕ್ಷಿತಾ ಅವರು ಮನೆಗೆ ಮಗ, ಮಗಳು ಎರಡು ಸಹ ಹೌದು. ಮನೆಯ ಜವಾಬ್ದಾರಿ ಅವರ ಮೇಲಿದೆ, ಅಮ್ಮ ಅಪ್ಪ ಮತ್ತು ತಮ್ಮ ಮೂವರನ್ನು ಕೂಡ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಶಯ ಮೋಕ್ಷಿತಾ ಅವರದ್ದು. ಮದುವೆಯಾಗಿ ಬೇರೆ ಮನೆಗೆ ಹೊರಟು ಹೋದರೆ ಅಪ್ಪ ಅಮ್ಮನನ್ನ ನೋಡಿಕೊಳ್ಳೋರು ಯಾರು ಎನ್ನುವ ಭಯ ಅವರಲ್ಲಿ ಇದೆಯಂತೆ. ಮುಖ್ಯವಾಗಿ ಇದೇ ಕಾರಣಕ್ಕೆ ಮೋಕ್ಷಿತಾ ಅವರು ಇಷ್ಟು ದಿವಸ ಮದುವೆ ಕಡೆಗೆ ಮನಸ್ಸು ಮಾಡಿರಲಿಲ್ಲ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಹೀಗೆ ಮನೆಯ ಜವಾಬ್ದಾರಿ ತೆಗೆದುಕೊಂಡಿರೋ ಬಹಳಷ್ಟು ಹುಡುಗಿಯರು ಇದ್ದಾರೆ, ಅವರಿಗೆಲ್ಲಾ ಅರ್ಥ ಮಾಡಿಕೊಳ್ಳುವಂಥ ಒಳ್ಳೇ ಹುಡುಗ ಸಿಕ್ಕರೆ, ಒಳ್ಳೆಯದು..

ಇನ್ನು ಮೋಕ್ಷಿತಾ ಅವರು ತಮ್ಮನಿಗೆ ಟ್ರೀಟ್ಮೆಂಟ್ ಕೊಡಿಸುವ ಜವಾಬ್ದಾರಿ ಸಹ ಹೊಂದಿದ್ದಾರೆ. ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಒಳ್ಳೇ ಟ್ರೀಟ್ಮೆಂಟ್ ಕೊಡಿಸಬೇಕು ಎನ್ನುವುದೇ ಅವರ ಗುರಿ. ಹಾಗಾಗಿ ಕೆಲಸ ಮಾಡಬೇಕು, ಹೊಸ ಪ್ರಾಜೆಕ್ಟ್ ಗಳು ಬಂದರೆ ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಮೋಕ್ಷಿತಾ. ಹಾಗೆಯೇ ಸಿನಿಮಾಗಳಲ್ಲಿ ಒಳ್ಳೆಯ ಅವಕಾಷ ಸಿಕ್ಕರೆ ಅಭಿನಯಿಸಬೇಕು ಎನ್ನುವ ಆಸೆ ಹೊಂದಿದ್ದಾರೆ. ಇನ್ನು ಅಭಿಮಾನಿಗಳ ಪ್ರೀತಿ ಸಹ ಇವರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಸಿಕ್ಕಿದೆ. ಮೋಕ್ಷಿತಾ ಅವರ ಹೊಸ ಪ್ರಾಜೆಕ್ಟ್ ಗಳಿಗೆ ಒಳ್ಳೆಯದಾಗಲಿ. ಹಾಗೆ ಇವರ ತಾಯಿಯ ಆಸೆಯಂತೆ ಬೇಗ ಮದುವೆ ಕೂಡ ಆಗಲಿ ಎಂದು ಹಾರೈಸೋಣ.