ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ತಮ್ಮ ಅತ್ಯುತ್ತಮ ನಟನೆಯ ಮೂಲಕ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಚಾಕೊಲೇಟ್ ಬಾಯ್ ಪಾತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಣಬೀರ್ ಇಲ್ಲಿಯವರೆಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇತ್ತೀಚೆಗೆ ʼಅನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರ ಆಕ್ಷನ್ ಅವತಾರ ಕಂಡು ಸಿನಿ ಪ್ರಿಯರು ಫಿದಾ ಆದರು.

ರಣಬೀರ್ ಕಪೂರ್ ಬಹಳ ಖಾಸಗಿಯಾಗಿ ಬದುಕುವ ವ್ಯಕ್ತಿ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಮಾಹಿತಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ರಾಮಾಯಣ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಆದರೆ, ಈಗ ಅವರು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ಹೌದು, ರಣಬೀರ್ ಕಪೂರ್ ಗೋವಾದಲ್ಲಿ ನಡೆದ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡರು. ಇಲ್ಲಿ ಅವರು ತಮ್ಮ ಚಿತ್ರಗಳು, ಅವರ ಪತ್ನಿ ಆಲಿಯಾ ಮತ್ತು ಮಗಳು ರಾಹಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಭವಿಷ್ಯದ ಪ್ರಾಜೆಕ್ಟ್ ಕುರಿತು ಮಾತನಾಡುತ್ತಿರುವುದು ಕಂಡುಬಂದಿದೆ. ಇದರಲ್ಲಿ ಅವರು ತಮ್ಮ ಅಜ್ಜ ರಾಜ್ ಕಪೂರ್ ಅವರ ಬಗ್ಗೆಯೂ ಮಾತನಾಡಿದ್ದಾರೆ.

ರಾಜ್ ಕಪೂರ್ ಚಿತ್ರದ ಸೀಕ್ವೆಲ್
ರಣಬೀರ್ ಕಪೂರ್ ಬಾಲಿವುಡ್ ಅನ್ನು ಆಳುತ್ತಿರುವ ಸ್ಟಾರ್ಗಳಲ್ಲಿ ಒಬ್ಬರು. ಕಪೂರ್ ಕುಟುಂಬದಿಂದ ಇಂಡಸ್ಟ್ರಿಯನ್ನು ಆಳಿದ ಏಕೈಕ ಸ್ಟಾರ್ ಅವರಲ್ಲ. ಅವರ ಹಿಂದಿನ ತಲೆಮಾರುಗಳೂ ತಮ್ಮ ನಟನ ಕೌಶಲದಿಂದ ಜನರ ಹೃದಯ ಗೆದ್ದಿದ್ದಾರೆ. ಇವರಲ್ಲಿ ಒಂದು ಹೆಸರು ರಣಬೀರ್ ಅವರ ಅಜ್ಜ ರಾಜ್ ಕಪೂರ್ ಅವರದ್ದು. ಇತ್ತೀಚೆಗೆ ರಣಬೀರ್ ತನ್ನ ತಾತನ ಚಿತ್ರ ರಿಮೇಕ್ ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಚಿತ್ರವೂ ಅತ್ಯುತ್ತಮ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದು ಸಹ ಹೇಳಿದರು. ಅವರ ಚಿತ್ರಗಳನ್ನು ರಿಮೇಕ್ ಮಾಡಲು ಇಷ್ಟಪಡುತ್ತೇನೆ, ಟೀಕೆ ಮಾಡುತ್ತಿಲ್ಲ ಎಂದ ರಣಬೀರ್, ತಮ್ಮ ನೆಚ್ಚಿನ ಚಿತ್ರವಾದ ಶ್ರೀ 420 ಅನ್ನು ರೀಮೇಕ್ ಮಾಡಲು ಬಯಸುತ್ತೇನೆ ಎಂದು ಹೇಳಿದರು. ಇದಲ್ಲದೆ, ಸಂಗಮ್ ಕೂಡ ಒಂದು ಅದ್ಭುತ ಚಿತ್ರವಾಗಿದ್ದು ಅದನ್ನು ಅವರು ರಿಮೇಕ್ ಮಾಡಲು ಬಯಸುತ್ತಾರಂತೆ.
ಈ ವೇಳೆ ರಣಬೀರ್ ಕಪೂರ್ ತನ್ನ ಅಜ್ಜನನ್ನು ಹೊಗಳಿದ್ದು ಕಂಡುಬಂತು. ರಾಜ್ ಕಪೂರ್ ಅವರಿಗೆ 24 ವರ್ಷವಾದಾಗ ಅವರು ಚಲನಚಿತ್ರಗಳ ನಿರ್ದೇಶನ, ನಿರ್ಮಾಣ, ಸಂಕಲನ ಮತ್ತು ಬರವಣಿಗೆಯನ್ನು ಪ್ರಾರಂಭಿಸಿದರು ಎಂದು ಹೇಳಿದರು. ಆದರೆ ತನಗೆ 42 ವರ್ಷ. ಆದರೆ ಅಂತಹ ಆತ್ಮವಿಶ್ವಾಸ ಇನ್ನೂ ಬಂದಿಲ್ಲ. ಜಾಸೂಸ್ ಚಿತ್ರವನ್ನು ನಿರ್ಮಿಸಿದ್ದೇನೆ. ಆದರೆ ಅದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ಕಾಣಲಿಲ್ಲ ಎಂದು ತಿಳಿಸಿದರು. ಆದರೆ ಈಗ ಅವರು ಒಳ್ಳೆಯ ಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರಲಿದ್ದು, ಈ ಚಿತ್ರವನ್ನು ವೀಕ್ಷಕರು ಖಂಡಿತ ಇಷ್ಟಪಡುವುದರಲ್ಲಿ ಯಾವುದೇ ಸಂಶಯವಿಲ್ಲವಂತೆ.



