ಟಿಕ್ ಟಾಕ್, ರೀಲ್ಸ್ ಮೂಲಕ ಮುನ್ನೆಲೆಗೆ ಬಂದು ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ವೈರಲ್ ಹುಡುಗಿ ಸೋನು ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗಷ್ಟೇ ಮಾಲ್ಡೀವ್ಸ್ನಲ್ಲಿ ಬಿಕಿನಿ ಧರಿಸಿ ಸಖತ್ ಮಾದಕ ಲುಕ್ ನಲ್ಲಿ ಮಿಂಚಿ ಸಖತ್ ಸೌಂಡ್ ಮಾಡಿದ್ದ ಸೋನು ಇದೀಗ ಮತ್ತೆ ಮಾಲ್ಡೀವ್ಸ್ಗೆ ಹಾರಿದ್ದು, ಅಲ್ಲಿನ ಬೀಚ್ ನಲ್ಲಿ ಸಖತ್ ಬೋಲ್ಡ್ ಆಗಿ ಫೋಟೋ ಹೊಡೆಸಿಕೊಂಡಿದ್ದಾರೆ. ಈ ಬೋಲ್ಡ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸೋನು ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.


ಮಾಲ್ಡೀವ್ಸ್ನ ಬೀಚ್ ನಲ್ಲಿ ಸೋನು ಕಪ್ಪು ಬಣ್ಣದ ಧಿರಿಸಿನಲ್ಲಿ ಮಸ್ತ್ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಹಸಿಬಿಸಿ ತೊಟ್ಟು ಸೋನು ಮಾದಕ ನೋಟದಿಂದ ಜೋಕಾಲಿ ಆಡುತ್ತಿದ್ದು, ಈ ಫೋಟೋಗಳು ನೆಟ್ಟಿಗರ ಎದೆ ಬಡಿತ ಹೆಚ್ಚುವಂತೆ ಮಾಡಿದೆ. ಸೋನು ಹೊಸ ಅವತಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಇತ್ತೀಚೆಗಷ್ಟೇ ಬಿಕಿನಿ ವಿಡಿಯೋ ಶೇರ್ ಮಾಡಿದ ಮೇಲೆ ಸೋನು ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿದ್ದಾರೆ. ಇದಿಷ್ಟೇ ಅಲ್ಲದೆ ಸೋನು ಇನ್ಸ್ಟಾಗ್ರಾಂ ಖಾತೆಯಲ್ಲಿ 1 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಹಿಂದೆಲ್ಲ ನೆಗೆಟಿವ್ ಕಮೆಂಟ್ ಬಂದಾಗ ಗಳಗಳನೆ ಅಳುತ್ತಿದ್ದ ಸೋನು ಇದೀಗ ಯಾರಿಗೂ ಕೇರ್ ಮಾಡದೇ ತನಗಿಷ್ಟ ಬಂದ ಡ್ರೆಸ್ ಹಾಕಿ ಫೋಟೋಶೂಟ್ ನಡೆಸುತ್ತಿದ್ದಾಳೆ. ಇದೀಗ ಹಸಿಬಿಸಿ ಜೋಕಾಲಿಯ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿವೆ.