ಇತ್ತೀಚೆಗಷ್ಟೇ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆ ಲೂಟಿ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ‘ಕಾವಾಲಯ್ಯ’ ಹಾಡಿಗೆ ದೇಹ ಕುಣಿಸಿ ದೇಶದಾದ್ಯಂತ ಸಂಚಲನ ಸೃಷ್ಟಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ಮತ್ತೆ ಟ್ರೆಂಡಿಂಗ್ ನಲ್ಲಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ತಮನ್ನಾ ಬೋಲ್ಡ್ ಫೋಟೋಶೂಟ್ ನಡೆಸಿದ್ದು, ಅಭಿಮಾನಿಗಳು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.

ನಟಿ ತಮನ್ನಾ ಭಾಟಿಯಾ ಸಿಂಪಲ್ ಲುಕ್ನಲ್ಲಿ ಸಖತ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಫೋಟೋಗಳ ಕೆಳಗೆ ‘ಜೈಲರ್ ಸಕ್ಸಸ್ ಪಾರ್ಟಿ ಲುಕ್’ ಎಂದು ನಟಿ ತಮನ್ನಾ ಭಾಟಿಯಾ ಬರೆದುಕೊಂಡಿದ್ದಾರೆ. ಬಾಡಿ ಫಿಟ್ ಬ್ಲ್ಯಾಕ್ ಡ್ರೆಸ್ ತೊಟ್ಟಿರುವ ನಟಿ ಕಿವಿಗೆ ಗೋಲ್ಡ್ ಕಲರ್ ಇಯರಿಂಗ್ ತೊಟ್ಟಿದ್ದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿರುವ ಅಭಿಮಾನಿಗಳು ತಮನ್ನಾ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.
ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿರುವ ತಮನ್ನಾ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ. ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಇದೀಗ, ಜೈಲರ್ ಸಕ್ಸಸ್ ಪಾರ್ಟಿಗಾಗಿ ತಮನ್ನಾ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ.



