ಇತ್ತೀಚೆಗಷ್ಟೇ ವಿಕ್ಕಿಪಿಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಬಿತ್ತರಗೊಂಡ ‘ನಾನು ನಂದಿನಿ, ಬೆಂಗ್ಳೂರಿಗ್ ಬಂದಿನಿ’ ಹಾಡು ಸಕ್ಕತ್ ಟ್ರೆಂಡಿಂಗ್ ನಲ್ಲಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬರುವ ಹೆಣ್ಣು ಮಕ್ಕಳ ಜೀವನವನ್ನು ಈ ಹಾಡಿನ ಮೂಲಕ ವಿವರಿಸಲಾಗಿದ್ದು, ಎಲ್ಲೆಡೆ ಈ ಹಾಡು ಸೌಂಡ್ ಮಾಡುತ್ತಿದೆ. ಸದ್ಯ, ಇದೇ ಹಾಡಿಗೆ ರೀಲ್ಸ್ ಮಾಡುವ ಟ್ರೆಂಡ್ ಆರಂಭವಾಗಿದ್ದು, ಸಿರಿಯಲ್ ನಟಿಯರು ಕೂಡ ಹಿಂದೆ ಬಿದ್ದಿಲ್ಲ. ಸಿರಿಯಲ್ ನಟಿ ಸಾರ ಅಣ್ಣಯ್ಯ ‘ನಾನು ನಂದಿನಿ’ ಹಾಡಿಗೆ ರೀಲ್ಸ್ ಮಾಡಿದ್ದು, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

https://www.instagram.com/reel/CxLDz-wNc6l/?utm_source=ig_web_copy_link
ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ವರೂಧಿನಿ ಪಾತ್ರದಲ್ಲಿ ಅಭಿನಯಿಸಿದ್ದ ಸಾರಾ ಅಣ್ಣಯ್ಯ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಬಳಿಕ ಅವರು ಲಚ್ಚಿ ಧಾರಾವಾಹಿಯಲ್ಲಿ ಅಭಿನಯಿಸಿದರು. ಸದ್ಯ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೇ ಸೀರಿಯಲ್ ಟೀಮ್ ಜೊತೆ ನಾನು ನಂದಿನಿ ರೀಲ್ಸ್ ಮಾಡಿದ್ದಾರೆ. ಜೊತೆಯಲ್ಲಿ ಸೀರಿಯನ್ನಲ್ಲಿ ಅಭನಯಿಸುತ್ತಿರುವ ಶಶಿ ಹೆಗ್ಡೆ ಹಾಗೂ ಕರಣ್ ಕೆ.ಆರ್ ಕೂಡಾ ಸಾರ ಜೊತೆಗೆ ಹೆಜ್ಜೆ ಹಾಕಿದ್ದಾರೆ.
ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ’ ಹೀಗೆ ಮುಂದುವರೆಯುವ ಹಾಡಿನ ಸಲುಗಳಿಗೆ ಸಾರ ಅಂಡ್ ಟೀಂ ಸಕ್ಕತ್ ಸ್ಟೆಪ್ ಹಾಕಿದ್ದು, ಎಲ್ಲೆಡೆ ಈ ರೀಲ್ಸ್ ವೈರಲ್ ಆಗುತ್ತಿದೆ.



