ಮಂಗಳ ಗೌರಿ ಮದುವೆ ಧಾರವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಬಿಗ್ ಬಾಸ್ ಸೀಸನ್ 9ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.ಇತ್ತೀಚೆಗೆ ಕಾವ್ಯಶ್ರೀ ತಮ್ಮ ಲವ್ ಸೀಕ್ರೇಟ್ ರಿವೀಲ್ ಮಾಡಿದ್ದಾರೆ. ಕಾವ್ಯಶ್ರೀ ತಮ್ಮ ಇಬ್ಬರು ಕ್ರಶ್ ಗಳ ಬಗ್ಗೆ ಮಾತನಾಡಿ ಕ್ರಶ್ ಆದ ರೋಚಕ ಘಟನೆ ವಿವರಿಸಿದ್ದಾರೆ. ಮೊದಲ ಕ್ರಶ್ ಆಗಿದ್ದು ಅಜ್ಜಿ ಊರಿಗೆ ಜಾತ್ರೆಗೆ ಹೋದಾಗ ಎಂದಿದ್ದಾರೆ. ಅಜ್ಜಿ ಊರಿಗೆ ಜಾತ್ರೆಗೆಂದು ಹೋಗಿದ್ದಾಗ ಅಲ್ಲೊಂದು ಗುಂಪಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಹುಡುಗ ನೋಡೋಕೆ ಅಚ್ಚ ಯಶ್ ತರಹವೇ ಇದ್ದ. ಹಾಗಾಗಿ ಅವನ ಮೇಲೆ ಮೊದಲ ಬಾರಿಗೆ ಕ್ರಶ್ ಆಯಿತು. ಆ ಹುಡುಗರ ಗುಂಪು ನನ್ನನ್ನೇ ಫಾಲೋ ಮಾಡುತ್ತಿತ್ತು. ತೀರಾ ಹತ್ತಿರ ಬರೋಕೆ ಶುರುವಾಯಿತು. ನನಗೆ ಭಯವಾಗಿತ್ತು.. ಯಶ್ ರೀತಿಯಲ್ಲೇ ಕಾಣುತ್ತಿದ್ದ ಆ ಹುಡುಗ ತೀರಾ ಸಮೀಪಕ್ಕೆ ಬಂದು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತನ್ನ ಫೋನ್ ನಂಬರ್ ಇರುವ ಚೀಟಿ ಹಾಕಿದ್ದ ಎಂದು ಕಾವ್ಯಶ್ರೀ ಹೇಳಿಕೊಂಡಿದ್ದಾರೆ.

ಮತ್ತೊಮ್ಮೆ ಕ್ರಶ್ ಆಗಿದ್ದು ತಿರುಪತಿಯಲ್ಲಿ. ತಿರುಪತಿ ಬೆಟ್ಟ ಹತ್ತುವಾಗ ತಮ್ಮನ್ನ ಫಾಲೋ ಮಾಡುತ್ತಿದ್ದ ಹುಡುಗನ ಮೇಲೆ ಕ್ರಶ್ ಆಗಿತ್ತು. ಬೆಟ್ಟ ಹತ್ತುವಾಗ ನಮಗಿಂತ ಮುಂಚೆ ಇರುತ್ತಿದ್ದ, ನಂತರ ಮತ್ತೆ ಹಿಂದುಳಿಯುತ್ತಿದ್ದ. ಅವನು ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುವ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಅವನು ಲಡ್ಡು ಇಟ್ಟುಬಿಟ್ಟಿದ್ದ. ಜೊತೆಗೆ ಫೋನ್ ನಂಬರ್ ಇರುವ ಚೀಟಿನೂ ಇತ್ತು ಎಂದು ತಮ್ಮ ಕ್ರಶ್ ಗಳ ಬಗ್ಗೆ ಹೇಳಿಕೊಂಡಿದ್ದಾರೆ.
ತಿರುಪತಿಯಲ್ಲಿ ಬಳೆ ಶಾಪಿಂಗ್ ಮಾಡುವಾಗ ಅವನು ಅವನ ಸ್ನೇಹಿತರು ಬಂದು ನನ್ನ ಮೊಬೈಲ್ಗೆ ನಂಬರ್ ಕೊಟ್ಟು ಹೋದ. ನನ್ನ ಕೈಯಲ್ಲಿ ಆಂಟಿ ಬ್ಯಾಗ್ ಇದೆ ಅವನು ಅದಕ್ಕೆ ನಂಬರ್ ಹಾಕಿ ಹೋಗಿದ್ದಾನೆ. ಆಂಟಿ ಬಂದು ಬ್ಯಾಗ್ ಕೇಳಿದ್ದರು. ಅವನ ಕಡೆ ಹೋಗಬೇಕಾ ಆಂಟಿನ ಬ್ಯಾಗ್ ಕೇಳಬೇಕಾ ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ಕಾವ್ಯಾ.