ರಾಪಿಡ್ ರಶ್ಮಿ, ಈ ಹೆಸರನ್ನ ನಾವು ಕೇಳಿದ್ದೇವೆ, ಈಗ ಯೂಟ್ಯೂಬ್ ಮೂಲಕ ಇವರ ಜನಪ್ರಿಯತೆ ಮೊದಲಿಗಿಂತ ಜಾಸ್ತಿ ಆಗಿದೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಶೋ ಶುರು ಮಾಡಿ, ಸೆಲೆಬ್ರಿಟಿಗಳು ಮತ್ತು ಸಾಕಷ್ಟು ಜನರನ್ನು ಶೋಗೆ ಕರೆಸಿ, ಅನೇಕ ವಿಚಾರಗಳನ್ನು ಜನರಿಗೆ ತಿಳಿಸಿಕೊಡುತ್ತಾ ಇದ್ದಾರೆ. ರಾಪಿಡ್ ರಶ್ಮಿ ಮೊದಲಿಗೆ ರೇಡಿಯೋ ಜಾಕಿ ಆಗಿದ್ದವರು, ನಂತರ ಯೂಟ್ಯೂಬ್ ಶೋ ಶುರು ಮಾಡಿದರು. ಇವರ ಜರ್ನಿ ಒಂದೆರಡು ವರ್ಷಗಳ ಜರ್ನಿ ಅಲ್ಲ. ಹಲವು ವರ್ಷಗಳಿಂದ ರಾಪಿಡ್ ರಶ್ಮಿ ಈ ಒಂದು ಫೀಲ್ಡ್ ನಲ್ಲಿದ್ದು, ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಇಂಥ ರಾಪಿಡ್ ರಶ್ಮಿ ಅವರ ಜೀವನ ನಾವಂದು ಕೊಂಡ ಹಾಗೆ ಇರಲಿಲ್ಲ, ಬಹಳಷ್ಟು ಕಷ್ಟಪಟ್ಟಿದ್ದಾರೆ. ಇತ್ತೀಚೆಗೆ ಇವರು ತಮ್ಮ ಲೈಫ್ ಬಗ್ಗೆ ಸಹ ಮಾತನಾಡಿದ್ದಾರೆ.

ರಾಪಿಡ್ ರಶ್ಮಿ ಅವರು ರೇಡಿಯೋ ಜಾಕಿ ಆಗಿ ಬಹಳ ಹೆಸರು ಮಾಡಿದವರ, ಇವರು ನಿರೂಪಣೆ ಮಾಡುತ್ತಿದ್ದ, ರೆಟ್ರೋ ಸವಾರಿ ಶೋ ಬಹಳಷ್ಟು ಜನರು ಇಷ್ಟಪಟ್ಟು ಕೇಳುತ್ತಿದ್ದ ಶೋ, ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರ ಇಂಟರ್ವ್ಯೂ ಮಾಡಿರುವ ಕೀರ್ತಿ ಸಹ ರಾಪಿಡ್ ರಶ್ಮಿ ಅವರಿಗೆ ಸೇರುತ್ತದೆ. ರಾಪಿಡ್ ರಶ್ಮಿ ಯಾವಾಗಲೂ ಅರಳು ಹುರಿದ ಹಾಗೆ ಮಾತನಾಡುವುದಕ್ಕೆ ಎಲ್ಲರಿಗೂ ಇಷ್ಟ ಆಗಿರುವವರು. ಇವರು ಮಾತನಾಡೋ ಸ್ಟೈಲ್ ಅನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ. ರಾಪಿಡ್ ರಶ್ಮಿ ಅವರು ಎಲ್ಲರ ಎದುರು ಇಷ್ಟು ಚೆನ್ನಾಗಿ ಇರಬಹುದು ಆದರೆ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಮೊದಲ ಮದುವೆಯಲ್ಲಿ ನೋವನ್ನು ಅನುಭವಿಸಿ, ಅದರಲ್ಲಿ ಕಷ್ಟಪಟ್ಟು ಬಳಿಕ ಎರಡನೇ ಮದುವೆಯಾದರು. ಈಗ ಸಂತೋಷವಾಗಿದ್ದಾರೆ, ಆದರೆ ಮೊದಲು ಬಹಳ ಕಷ್ಟಪಟ್ಟಿದ್ದಾರೆ.
ರಾಪಿಡ್ ರಶ್ಮಿ ಅವರು 2007 ರಲ್ಲಿ ಮೊದಲ ಬಾರಿ ಮದುವೆಯಾದರು, ಈ ಮದುವೆ ಬಗ್ಗೆ ಅವರಿಗೆ ಬಹಳ ನಿರೀಕ್ಷೆ ಮತ್ತು ಸಂತೋಷ ಇತ್ತು. ಆದರೆ ಈ ಮದುವೆಯಲ್ಲಿ ರಶ್ಮಿ ಅವರು ಸಂತೋಷವಾಗಿ ಇರಲಿಲ್ಲ, ಬಹಳ ನೋವು ಕಷ್ಟಪಡುವ ಹಾಗೆ ಆಯಿತು. ಎರಡೂವರೆ ವರ್ಷಗಳ ಕಾಲ ಮಾತ್ರ ರಶ್ಮಿ ಅವರು ಈ ಮದುವೆಯಲ್ಲಿ ಇದ್ದಿದ್ದು, ವಿಚ್ಛೇದನ ಪಡೆಯಬೇಕು ಎಂದು ನಿರ್ಧಾರ ಮಾಡಿದಾಗ ರಶ್ಮಿ ಅವರಿಗೆ ಯಾರ ಸಪೋರ್ಟ್ ಸಿಗಲಿಲ್ಲ. ಆ ವೇಳೆ ತುಂಬಾ ಬ್ಲ್ಯಾಂಕ್ ಆಗಿದ್ದರಂತೆ. ಎಲ್ಲರೂ ಕೆಟ್ಟದಾಗಿ ಮಾತನಾಡೋದು ರಶ್ಮಿ ಅವರಿಗೆ ಆತಂಕ ತಂದಿತ್ತಂತೆ. ಆದರೆ ಜನರು ತಮ್ಮ ಕಷ್ಟಕ್ಕೆ ಆಗೋದಿಲ್ಲ ಎನ್ನುವುದನ್ನ ಅರ್ಥ ಮಾಡಿಕೊಂಡು, ತಮ್ಮ ನಿರ್ಧಾರವನ್ನು ತಾವು ತೆಗೆದುಕೊಂಡರು. ಕಷ್ಟ ಕೊಡುತ್ತಿದ್ದ ಆ ಸಂಬಂಧದಿಂದ ರಾಪಿಡ್ ರಶ್ಮಿ ಹೊರಗಡೆ ಬಂದರು.

ಅವರಿಗೆ ಧೈರ್ಯ ನೀಡಿದ್ದು ಒಂದೇ, ಅದು ಅವರ ಕೈಯಲ್ಲಿದ್ದ ಕೆಲಸ. ರಶ್ಮಿ ಅವರು ಜೀವನ ನಡೆಸುವುದಕ್ಕೆ ಅವರು ಇನ್ಯಾರ ಮೇಲೆ ಕೂಡ ಡಿಪೆಂಡ್ ಆಗಿರಲಿಲ್ಲ. ಅವರ ಬಳಿ ಒಳ್ಳೆಯ ಕೆಲಸ ಇತ್ತು, ದುಡಿಯುವುದಕ್ಕೆ ಶಕ್ತಿ ಇತ್ತು. ಹಾಗಾಗಿ ಜನರ ಮಾತಿಗೆ ತಲೆ ಕೆಡಿಸಿಕೊಳ್ಳದೇ, ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ರಾಪಿಡ್ ರಶ್ಮಿ ಧೈರ್ಯವಾಗಿದ್ದರು. ಇನ್ನು ರಾಪಿಡ್ ರಶ್ಮಿ ಅವರ ತಾಯಿ ಕೂಡ ಸಿಂಗಲ್ ಮದರ್ ಆಗಿದ್ದು, ಅವರಿಂದ ರಶ್ಮಿ ತುಂಬಾ ಕಲಿತಿದ್ದಾರೆ. ಅಮ್ಮನಿಂದ ಧೈರ್ಯವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಬೇರೆ ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೇ, ರಾಪಿಡ್ ರಶ್ಮಿ ತಮ್ಮ ಜೀವನವನ್ನು ತಮಗೆ ಇಷ್ಟವಿದ್ದ ಹಾಗೆ ನಡೆಸುವುದಕ್ಕೆ ಶುರು ಮಾಡಿದರು. ಬಳಿಕ ಅವರಿಗೆ ಡೇವಿಸ್ ಅವರ ಪರಿಚಯ ಆಯಿತು..
ಡೇವಿಸ್ ಅವರನ್ನು ಪ್ರೀತಿಸಿ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು, ಮದುವೆಯಾಗಬೇಕು ಎಂದು ನಿರ್ಧರಿಸಿ, ರಾಪಿಡ್ ರಶ್ಮಿ ಅವರು ಮದುವೆಯಾದರು. ಇಂದು ಡೇವಿಸ್ ಅವರ ಜೊತೆಗೆ ರಶ್ಮಿ ಅವರ ಲೈಫ್ ತುಂಬಾ ಚೆನ್ನಾಗಿ ನಡೆಯುತ್ತಿದೆ. ಇಬ್ಬರು ಮದುವೆಯಾಗಿ 15 ವರ್ಷ ಕಳೆದಿದೆ, ಡೇವಿಸ್ ಮತ್ತು ರಶ್ಮಿ ಮದುವೆ ಆಗಿದ್ದು 2010ರಲ್ಲಿ. ಇವರಿಬ್ಬರು ಜೊತೆಯಾಗಿ ಟ್ರಾವೆಲ್ ಮಾಡುತ್ತಾರೆ, ಜೊತೆಗೆ ಲೈಫ್ ಅನ್ನು ಕೂಡ ಎಂಜಾಯ್ ಮಾಡುತ್ತಾರೆ. ರಶ್ಮಿ ಅವರಿಗೆ ಸಖತ್ ಸಪೋರ್ಟಿವ್ ಆಗಿದ್ದಾರೆ ಡೇವಿಸ್. ರಶ್ಮಿ ಸಹ ಗಂಡನ ಕೆಲಸಗಳಿಗೆ ಸಪೋರ್ಟ್ ಮಾಡುತ್ತಾರೆ. ಇವರಿಬ್ಬರು ಎರಡು ಮುದ್ದಾದ ಶ್ವಾನಗಳನ್ನು ದತ್ತು ಪಡೆದು, ಅವುಗಳನ್ನು ತಮ್ಮ ಸ್ವಂತ ಮಕ್ಕಳ ಹಾಗೆ ನೋಡಿಕೊಂಡು, ಜೀವನ ನಡೆಸುತ್ತಿದ್ದಾರೆ. ರಶ್ಮಿ ಅವರು ಬದುಕನ್ನು ಎದುರಿಸಿಕೊಂಡು ಬಂದಿರುವ ರೀತಿಯನ್ನು ಮೆಚ್ಚಬೇಕು.

ರೇಡಿಯೋದಲ್ಲಿ ಬಹಳಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ರಶ್ಮಿ ಅವರು. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ಆಗಾಗ ಕಲಾವಿದರ ಇಂಟರ್ವ್ಯೂ ಗಳನ್ನು ಮಾಡುತ್ತಿದ್ದರು, ಆದರೆ ಈಗ ಪೂರ್ತಿಯಾಗಿ ಸಮಯವನ್ನು ಯೂಟ್ಯೂಬ್ ಗಾಗಿ ನೀಡುತ್ತಿದ್ದಾರೆ. ರಶ್ಮಿ ಅವರು ಜಸ್ಟ್ ಕ್ಯೂರಿಯಸ್ ಶೋ ಶುರು ಮಾಡಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಸಿನಿಮಾ ಕಲಾವಿದರು, ತೆರೆ ಹಿಂದೆ ಕೆಲಸ ಮಾಡಿದವರು, ಆರೋಗ್ಯ ಕ್ಷೇತ್ರದಲ್ಲಿ ಇರುವವರು, ಶಾಸ್ತ್ರ ಸಂಪ್ರದಾಯ ಗೊತ್ತಿರುವವರು, ಜ್ಯೋತಿಷ್ಯ, ರೇಕಿ ಇದನ್ನೆಲ್ಲ ತಿಳಿದುಕೊಂಡಿರುವವರು ಇಂಥವರನ್ನೆಲ್ಲರನ್ನು ಸಹ ತಮ್ಮ ಶೋಗೆ ಕರೆಸಿ, ಪಾಡ್ ಕಾಸ್ಟ್ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಹ ಬಹಳ ಉಪಯೋಗ ಆಗುತ್ತಿದೆ. ಬರುವ ಗೆಸ್ಟ್ ಗಳ ಜೀವನದ ಬಗ್ಗೆ ಮಾತ್ರವಲ್ಲ, ಇನ್ನು ಅನೇಕ ವಿಷಯಗಳನ್ನು ತಿಳಿಸುತ್ತಾರೆ.
ಹಾಗಾಗಿ ಇವರ ಶೋ ಅನ್ನು ಜನರು ಬಹಳ ಇಷ್ಟ ಪಡುತ್ತಿದ್ದಾರೆ. ಇನ್ನು ತಮ್ಮ ಪರ್ಸನಲ್ ಲೈಫ್ ಬಗ್ಗೆ ತಿಳಿಸುವುದಕ್ಕೆ ರಾಪಿಡ್ ರಶ್ಮಿ ಅವರು ಇನ್ನೊಂದು ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿದ್ದು, ಅದರ ಮೂಲಕ ಇನ್ನಷ್ಟು ವಿಚಾರವನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ರಾಪಿಡ್ ರಶ್ಮಿ ಅವರು ಜನರಿಗೆ ಸಾಕಷ್ಟು ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಾರೆ.



