ಕನ್ನಡ ಚಿತ್ರರಂಗದ ಖ್ಯಾತ ಹಿರಿಯನಟ ಸುಧೀರ್ ಅವರ ಮಗ ತರುಣ್ ಸುಧೀರ್ ಅವರು ಮೊದಲಿಗೆ ಚಿತ್ರರಂಗಕ್ಕೆ ಪರಿಚಯ ಆಗಿದ್ದು ನಟನಾಗಿ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಆದರೆ ನಟನೆಯಲ್ಲಿ ಇವರಿಗೆ ಅಂದುಕೊಂಡ ಹಾಗೆ ಅದೃಷ್ಟ ಒಲಿದು ಬರಲಿಲ್ಲ. ಹಾಗಾಗಿ ತರುಣ್ ಅವರು ನಿರ್ದೇಶನ ಶುರು ಮಾಡಿದರು, ಇವರು ನಿರ್ದೇಶಿಸಿದ ಮೊದಲ ಸಿನಿಮಾ ಚೌಕ ಎಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ನಂತರ ತರುಣ್ ಅವರು ರಾಬರ್ಟ್ ಹಾಗೂ ಕಾಟೇರ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿಮಾಗಳು ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತು. ದರ್ಶನ್ ಅವರ ಕೆರಿಯರ್ ಗೆ ಎರಡು ಬ್ಲಾಕ್ ಬಸ್ಟರ್ ಗಳನ್ನು ನೀಡಿತು.
ತರುಣ್ ಸುಧೀರ್ ಅವರು ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಥಾನ ಗಳಿಸುವುದಕ್ಕೆ ಸಾಧ್ಯ ಆಯಿತು ಎಂದರೆ ತಪ್ಪಲ್ಲ. ಕಾಟೇರ ಸಿನಿಮಾದ ಯಶಸ್ಸು ಇವರಿಗೆ ದೊಡ್ಡ ಹೆಸರನ್ನೇ ತಂದುಕೊಟ್ಟಿತು. ಇನ್ನು ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸಿದ್ದ ಸೋನಲ್ ಅವರನ್ನು ಪ್ರೀತಿಸಿ ಕಳೆದ ವರ್ಷ ಮದುವೆಯಾದರು ತರುಣ್ ಇವರಿಬ್ಬರು ಬಹಳ ಕ್ಯೂಟ್ ಆದ ಜೋಡಿ. ಇಬ್ಬರದ್ದು ಲವ್ ಮ್ಯಾರೇಜ್ ಎನ್ನುವುದು ಮತ್ತೊಂದು ಸಂತೋಷದ ವಿಷಯ ಆಗಿದೆ. ತರುಣ್ ಸುಧೀರ್ ಅವರು ಸೋನಲ್ ಅವರನ್ನು ಕೆಲ ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ಆಗಸ್ಟ್ 11ರಂದು ಮದುವೆಯಾದರು. ಈ ಜೋಡಿ ಅನ್ಯೋನ್ಯವಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

ತರುಣ್ ಸುಧೀರ್ ಅವರು ಪತ್ನಿಯನ್ನು ತುಂಬಾ ಪ್ರೀತಿಸುತ್ತಾರೆ, ಸೋನಲ್ ಅವರು ಸಹ ಅದೇ ರೀತಿ ಎಂದು ನಮಗೆಲ್ಲ ಗೊತ್ತೇ ಇದೆ. ಸೋನಲ್ ಅವರು ಸಹ ಗಂಡನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಜೋಡಿ ಲವ್ಲಿ ಜೋಡಿ, ಇವರಿಬ್ಬರು ಸಂತೋಷವಾಗಿ ಇದ್ದಾರೆ, ಆದರೆ ಇಬ್ಬರು ಗುಡ್ ನ್ಯೂಸ್ ಕೊಡೋದು ಯಾವಾಗ ಅನ್ನೋ ಕುತೂಹಲ ಜನರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಇದೆ. ತರುಣ್ ಅವರಿಗೆ ಹಾಗೂ ಸೋನಲ್ ಅವರಿಗೆ ಈ ಬಗ್ಗೆ ಕೆಲವು ಸ್ಟೇಜ್ ಗಳಲ್ಲಿ ಕೇಳಿದಾಗ, ಇಬ್ಬರೂ ನಕ್ಕಿದ್ದಾರೆ ಆದರೆ ಹೆಚ್ಚಾಗಿ ಏನನ್ನು ಹೇಳಲಿಲ್ಲ. ಆದರೆ ತರುಣ್ ಅವರ ತಾಯಿ ಮಾಲತಿ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಉತ್ತರ ಕೊಟ್ಟಿದ್ದಾರೆ. ಮಗ ಸೊಸೆ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ ಮಾಲತಿ ಅವರು.
ಮಾಲತಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಕುಟುಂಬದ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಸೋನಲ್ ಅವರ ಬಗ್ಗೆ ಮಾತನಾಡಿ, ಸೋನಲ್ ನಾನು ತುಂಬಾ ಚೆನ್ನಾಗಿದ್ದೀವಿ. ನನ್ನ ಮಗನಿಗೆ ನಾನು ಮುದ್ದಿನ ತಾಯಿ, ಸೋನಲ್ ಗೆ ನಾನು ಮುದ್ದಿನ ಅತ್ತೆ ಎಂದು ತಿಳಿಸಿದ್ದಾರೆ. ಇನ್ನು ಮನೆಯಲ್ಲಿ ಇಬ್ಬರು ಸೊಸೆಯರು ಇದ್ದು, ಮೊದಲನೇ ಸೊಸೆ ಕೂಡ ಅಷ್ಟೇ ಒಳ್ಳೆಯವಳು, ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲ, ಹೆಣ್ಣುಮಕ್ಕಳು ಇಲ್ಲ ಅನ್ನೋ ಕೊರಗನ್ನ ಇಬ್ಬರು ಸೊಸೆಯರು ನೀಗಿಸಿದ್ದಾರೆ. ಒಬ್ಬರೂ ಅಷ್ಟು ಒಳ್ಳೆಯವರು ಎನ್ನುತ್ತಾರೆ ಮಾಲತಿ ಸುಧೀರ್ ಅವರು.. ಮಗ ಸೊಸೆ ಬಗ್ಗೆ ಇನ್ನಷ್ಟು ವಿಚಾರಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ. ಅವರಿಬ್ಬರು ಹೇಗಿದ್ದಾರೆ ಅನ್ನೋದನ್ನ ಸಹ ತಿಳಿಸಿದ್ದಾರೆ..

ಮಾಲತಿ ಅವರು ಹೇಳುವುದು ಏನು ಎಂದರೆ, ಪ್ರಸ್ತುತ ತರುಣ್ ಅವರು ತುಂಬಾ ಬ್ಯುಸಿ ಆಗಿದ್ದಾರೆ, ಮೂರ್ನಾಲ್ಕು ಸಿನಿಮಾಗಳನ್ನು ಮಾಡುತ್ತಿದ್ದು, ಆ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇನ್ನು ಸೋನಲ್ ಅವರು ಸಹ ಮೂರು ಸಿನಿಮಾಗಳನ್ನು ಮಾಡುತ್ತಿದ್ದು ಅವರು ಸಹ ಬ್ಯುಸಿ ಇದ್ದಾರೆ. ಇಬ್ಬರು ಪ್ರತಿದಿನ ಕೆಲಸಕ್ಕೆ ಹೋಗಿ ಬರುತ್ತಾರೆ, ಇಬ್ಬರಿಗೂ ಫ್ರೀ ಆಗಿ ಸಿಗುವುದು ಭಾನುವಾರ ಮಾತ್ರ. ಈ ಒಂದು ದಿವಸ ಜೊತೆಯಾಗಿ ಸಮಯ ಕಳೆಯುತ್ತಾರೆ. ಭಾನುವಾರ ತರುಣ್ ಗೆ ಒಳ್ಳೆಯ ಮೂಡ್ ಇದ್ದರೆ ಇಬ್ಬರೂ ಹೊರಗಡೆ ಹೋಗಿ ಬರುತ್ತಾರೆ ಎಂದು ಹೇಳಿದ್ದಾರೆ ಮಾಲತಿ ಅವರು. ಇನ್ನು ಮನೆಯಲ್ಲಿ ಸೋನಲ್ ಅಡುಗೆ ಮಾಡ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಮನೆಯಲ್ಲಿ ಅಡುಗೆಯವರು ಇದ್ದಾರೆ, ಅವರು ಅಡುಗೆ ಮಾಡ್ತಾರೆ ನಾನು ಸಹಾಯ ಮಾಡ್ತೀನಿ ಎಂದಿದ್ದಾರೆ.
ಸೋನಲ್ ಅವರು ಮಂಗಳೂರಿನ ಕಡೆಯವರು ಅವರಿಗೆ ಮೀನಿನ ಅಡುಗೆಗಳು ಇಷ್ಟ, ನಮ್ಮ ಮನೆಯಲ್ಲಿ ಮೀನು ಅಷ್ಟೇನು ಇಷ್ಟವಿಲ್ಲ, ಬೇರೆ ನಾನ್ ವೆಜ್ ಇಷ್ಟ, ಹಾಗಾಗಿ ತರುಣ್ ಗೆ ಇಷ್ಟ ಆಗುವಂಥ ಅಡುಗೆಗಳನ್ನ ನಾನೇ ನಿಂತು ಮಾಡಿಸ್ತೀನಿ, ಅದನ್ನ ಸೋನಲ್ ಕೂಡ ನೋಡಿಕೊಳ್ತಾಳೆ ಎಂದಿದ್ದಾರೆ. ಗಂಡನಿಗೋಸ್ಕರ ಪ್ರತಿದಿನ ಸೋನಲ್ ಜ್ಯುಸ್ ಮಾಡಿ ಕೊಡುತ್ತಾಳೆ ಎಂದು ಹೇಳಿದ್ದಾರೆ ಮಾಲತಿ ಅವರು. ಇನ್ನು ಮಗ ಸೊಸೆ ಗುಡ್ ನ್ಯೂಸ್ ಕೊಡೋದು ಯಾವಾಗ ಅನ್ನೋ ಪ್ರಶ್ನೆಗೆ ಸಹ ಮಾಲತಿ ಅವರು ಉತ್ತರ ಕೊಟ್ಟಿದ್ದಾರೆ, ಎಲ್ಲದಕ್ಕೂ ದೇವರು ಕಣ್ಣು ಬಿಡಬೇಕು ಎಂದು ಹೇಳಿದ್ದಾರೆ. ಮಗ ಸೊಸೆಯ ಮಗುವನ್ನ ನೋಡಬೇಕು, ಅಜ್ಜಿ ಆಗಬೇಕು ಅಂತ ನನಗೂ ಆಸೆ ಇದೆ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು.

ತಕ್ಷಣ ಮಗು ಆಗೋದಿಲ್ಲ, ಎಲ್ಲದಕ್ಕೂ 12 ತಿಂಗಳು ಕಾಯಬೇಕಲ್ಲ ಎಂದು ಹೇಳಿದ್ದಾರೆ ಮಾಲತಿ ಅವರು. ತರುಣ್ ಅವರ ತಾಯಿಗೆ ಕೂಡ ಮೊಮ್ಮಗುವನ್ನು ಬೇಗ ನೋಡಬೇಕು ಎನ್ನುವ ಆಸೆ ಇದೆ. ಇದನ್ನು ಅರಿತು, ಈ ಜೋಡಿ ತಾಯಿಗೋಸ್ಕರ ಗುಡ್ ನ್ಯೂಸ್ ಕೊಡುತ್ತಾರಾ ಎಂದು ನೋಡಬೇಕಿದೆ. ಇನ್ನು ದರ್ಶನ್ ಅವರ ಬಗ್ಗೆ ಕೂಡ ಮಾತನಾಡಿ, ಅವನು ಆಗಲೂ ನನ್ನ ಮಗ, ಈಗಲೂ ನನ್ನ ಮಗ, ಮುಂದೆಯೂ ನನ್ನ ಮಗ ಎಂದಿದ್ದು, ಅವನ ಆರೋಗ್ಯ ಬೇಗ ಸುಧಾರಿಸಲಿ ಬೇಗ ಹುಷಾರಾಗಲಿ ಎಂದು ಹೇಳಿದ್ದಾರೆ ಮಾಲತಿ ಸುಧೀರ್ ಅವರು.