ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂದ್ರೆ ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದು ಹೇಳುತ್ತಾರೆ. ಇವರ ಸಿನಿಮಾಗಳು ಅಂದ್ರೆ ಅಭಿಮಾನಿಗಳಿಗೆ ಬಹಳ ಇಷ್ಟ. ಒಂದು ಕಾಲದಲ್ಲಿ ಇವರು ಹೀರೋಯಿನ್ ಗಳನ್ನು ಕಲರ್ ಫುಲ್ ಆಗಿ, ಸುಂದರವಾಗಿ ತೋರಿಸುವ ಕಾರಣಕ್ಕೆ ಎಲ್ಲರಿಗೂ ಬಹಳ ಇಷ್ಟ ಆಗಿರುವವರು. ಖ್ಯಾತ ಬಾಲಿವುಡ್ ನಟಿಯರು, ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದವರು ಕ್ರೇಜಿಸ್ಟಾರ್. ಬೇರೆ ನಟಿಯರನ್ನು ಕನ್ನಡಕ್ಕೆ ಕರೆತಂದ ಇವರು, ಬಾಲಿವುಡ್ ಸ್ಟಾರ್ ಆಗಿದ್ದ ಕರ್ನಾಟಕದ ಮೂಲದವರಾದ ಐಶ್ವರ್ಯ ರೈ ಹಾಗೂ ದಕ್ಷಿಣದ ಮತ್ತೊಬ್ಬ ಖ್ಯಾತ ನಟಿ ಶ್ರೀದೇವಿ ಅವರನ್ನು ಕನ್ನಡಕ್ಕೆ ಯಾಕೆ ಕರೆತರಲು ಆಗಲಿಲ್ಲ? ಈ ಸ್ಟೋರಿ ಇಲ್ಲಿದೆ.. ಖುದ್ದು ರವಿಚಂದ್ರನ್ ಅವರೇ ಈ ವಿಚಾರವನ್ನು ತೋರಿಸಿದ್ದಾರೆ..
ರವಿಚಂದ್ರನ್ ಅವರು ಸಿನಿಮಾಗಳ ವಿಷಯ ಎಂದು ಬಂದರೆ, ಬಹಳ ಗ್ರ್ಯಾಂಡ್ ಆಗಿ ತೆರೆಮೇಲೆ ಸಿನಿಮಾವನ್ನು ತೋರಿಸುತ್ತಾರೆ. ಇವರ ಸಿನಿಮಾಗಳನ್ನು ನೋಡಿದರೆ, ಎಂಥವರಿಗೆ ಆದರೂ ಸಿನಿಮಾ ಅಂದ್ರೆ ವಾವ್ ಅನ್ನಿಸುತ್ತದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತಗಾರನಾಗಿ, ಎಡಿಟರ್ ಆಗಿ ಹೀಗೆ ಎಲ್ಲಾ ಕೆಲಸದಲ್ಲಿ ಸಹ ರವಿಚಂದ್ರನ್ ಅವರು ಸಕ್ರಿಯವಾಗಿದ್ದಾರೆ. ಹೀಗೆ ಸಿನಿಮಾಗೆ ಸಂಬಂಧಿಸಿರುವ ಎಲ್ಲಾ ವಿಭಾಗದಲ್ಲಿ ಸಹ ತೊಡಗಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಯರನ್ನು ಬಹಳ ಸುಂದರವಾಗಿ ತೆರೆಮೇಲೆ ತೋರಿಸುವ ಕಾರಣಕ್ಕೆ ಎಲ್ಲರಿಗೂ ಹೆಚ್ಚು ಇಷ್ಟ ಆಗ್ತಾರೆ. ಅವರ ಯಾವುದೇ ಸಿನಿಮಾ ಆದರೂ ಹೀರೋಯಿನ್ ಗಳನ್ನು ಬಹಳ ಸ್ಪೆಷಲ್ ಆಗಿ ತೋರಿಸುತ್ತಾರೆ..

ರವಿಚಂದ್ರನ್ ಅವರ ಸಿನಿಮಾ ಆಫರ್ ಬಂದರೆ ನಟಿಯರಿಗೂ ಕೂಡ ಇದೇ ಕಾರಣಕ್ಕೆ ಹಿಂದೆ ಮುಂದೆ ನೋಡದೇ ಡೇಟ್ಸ್ ಕೊಡಬೇಕು ಎಂದು ಅನ್ನಿಸುತ್ತದೆ. ಈ ರೀತಿಯಾಗಿ ರವಿಚಂದ್ರನ್ ಅವರು ಸಾಕಷ್ಟು ಹೊರಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಕನ್ನಡದ ನಟಿಯರನ್ನು ಸಹ ಅದೇ ರೀತಿ ಬಹಳ ಸುಂದರವಾಗಿ ತೋರಿಸಿದ್ದಾರೆ. ಹೀರೋಯಿನ್ ಗಳಿಗೆ ಇವರು ಅಂದ್ರೆ ವಿಶೇಷವಾದ ಪ್ರೀತಿ. ಜೂಹಿ ಛಾವ್ಲಾ ಅವರಾಗಲಿ, ಖುಷ್ಬೂ ಅವರಾಗಲಿ ರವಿಚಂದ್ರನ್ ಅವರ ಬಗ್ಗೆ ಎಷ್ಟು ಹೆಮ್ಮೆಯಿಂದ ಪ್ರೀತಿಯಿಂದ ಮಾತಾಡ್ತಾರೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಖುಷ್ಬೂ ಅವರ ತಾಯಿ ಆರೋಗ್ಯಕ್ಕೆ ಸಮಸ್ಯೆ ಆಗಿ, ದುಡ್ಡು ಇಲ್ಲದೇ ಇದ್ದಾಗ, ಸಹಾಯ ಮಾಡಿದ್ದು ರವಿಚಂದ್ರನ್ ಅವರು ಮತ್ತು ಅವರ ತಂದೆ. ಈ ವಿಚಾರವನ್ನು ಖುಷ್ಬೂ ಅವರೇ ತಿಳಿಸಿದ್ದರು.
ಹೀಗೆ ರವಿಚಂದ್ರನ್ ಅವರು ಅನೇಕ ವಿಚಾರಕ್ಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಇನ್ನು ರವಿಚಂದ್ರನ್ ಅವರು ಅಂದ್ರೆ ಗ್ಲಾಮರ್, ಗ್ಲಾಮರ್ ಅಂದ್ರೆ ರವಿಚಂದ್ರನ್ ಅವರು ಹೇಳಬಹುದು. ಅಷ್ಟು ಗ್ಲಾಮರಸ್ ಆಗಿ ಸುಂದರವಾಗಿ ತೋರಿಸುತ್ತಾರೆ. ಮೀನಾ, ಗೌತಮಿ, ಬಿಂದಿಯಾ, ಶಿಲ್ಪಾ ಶೆಟ್ಟಿ ಹೀಗೆ ಎಲ್ಲರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ದಕ್ಷಿಣ ಭಾರತದಲ್ಲಿ ಹುಟ್ಟಿ ಬೆಳೆದು, ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ನಟಿ ಶ್ರೀದೇವಿ ಅವರನ್ನು ಮತ್ತು ಮಂಗಳೂರಿನಲ್ಲಿ ಹುಟ್ಟಿ ಬೆಳೆದು ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಐಶ್ವರ್ಯ ರೈ ಅವರನ್ನು ಕನ್ನಡಕ್ಕೆ ಕರೆತರುವ ಪ್ಲಾನ್ ಮಾಡಿದ್ದರು. ಆದರೆ ಅದು ಸಾಧ್ಯ ಆಗಲಿಲ್ಲ. ಅದಕ್ಕೆ ಕಾರಣ ಏನು ಎಂದು ತಿಳಿಸಿದ್ದಾರೆ..

ರವಿಚಂದ್ರನ್ ಅವರು ಈಗ ಜೀಕನ್ನಡ ವಾಹಿನಿಯ ಭರ್ಜರಿ ಬ್ಯಾಚೆಲರ್ಸ್ ಶೋ ನಲ್ಲಿ ಜಡ್ಜ್ ಆಗಿ ಬಂದಿದ್ದಾರೆ. ಮೊದಲೆಲ್ಲಾ ಜೀಕನ್ನಡ ವಾಹಿನಿಯ ಡ್ರಾಮ ಜ್ಯೂನಿಯರ್ಸ್ ಶೋ ನಲ್ಲಿ ಸಹ ಜಡ್ಜ್ ಆಗಿ ಬಂದಿದ್ದರು. ಈಗ ಭರ್ಜರಿ ಬ್ಯಾಚೆಲರ್ಸ್ ಶೋನಲ್ಲಿ ಸಹ ಜಡ್ಜ್ ಆಗಿದ್ದು, ರಚಿತಾ ರಾಮ್ ಸಹ ಜಡ್ಜ್ ಆಗಿದ್ದಾರೆ. ರಚಿತಾ ರಾಮ್ ಅವರು ಈ ವಿಚಾರವನ್ನು ರವಿಚಂದ್ರನ್ ಅವರ ಬಳಿ ಕೇಳಿದ್ದು, ರವಿಚಂದ್ರನ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಮೊದಲಿಗೆ ಶ್ರೀದೇವಿ ಅವರ ಬಗ್ಗೆ ಹೇಳಿರುವ ರವಿಚಂದ್ರನ್ ಅವರು ಶ್ರೀದೇವಿ ಅವರೊಡನೆ ಒಂದು ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರಂತೆ. ಅದಕ್ಕಾಗಿ ಚೆಲುವೆ ಎನ್ನುವ ಹೆಸರಿನಲ್ಲಿ ಸಿನಿಮಾ ಶುರುವಾಗೋ ಹಂತಕ್ಕೆ ಬಂದಿತ್ತಂತೆ.
ರವಿಚಂದ್ರನ್ ಅವರು ಹೀರೋ, ಶ್ರೀದೇವಿ ಅವರು ಹೀರೋಯಿನ್ ಆಗಿ ಆಯ್ಕೆ ಆಗಿದ್ದರಂತೆ. ಆ ವೇಳೆ ರವಿಚಂದ್ರನ್ ಅವರು ಶ್ರೀದೇವಿ ಅವರನ್ನು ಕರೆದುಕೊಂಡು ಬಂದರೆ ನನಗೆ ಹಣವೇ ಬೇಡ,
ಫ್ರೀಯಾಗಿ ಸಿನಿಮಾ ಮಾಡಿ ಕೊಡ್ತೀನಿ ಎಂದಿದ್ದರಂತೆ. ಶ್ರೀದೇವಿ ಅವರು ಸಹ ಒಪ್ಪಿಗೆ ಕೊಟ್ಟಿದ್ದರಂತೆ, ಆದರೆ ಕೊನೆಯ ಹಂತದಲ್ಲಿ ನಾನಾ ಕಾರಣಕ್ಕೆ ಶ್ರೀದೇವಿ ಅವರು ಸಿನಿಮಾ ಮಾಡೋದು ಕ್ಯಾನ್ಸಲ್ ಆಯಿತು. ಕೊನೆಗೆ ಸಿನಿಮಾ ಟೈಟಲ್ ಅನ್ನು ಚೆಲುವ ಎಂದು ಮಾಡಿ, ರಿಮೇಕ್ ಸಿನಿಮಾ ಮಾಡಲಾಯಿತು ಎಂದಿದ್ದಾರೆ ಕ್ರೇಜಿಸ್ಟಾರ್. ಇನ್ನು ಐಶ್ವರ್ಯ ರೈ ಅವರ ಬಗ್ಗೆ ಸಹ ಮಾತನಾಡಿದ್ದು, ಅವರು ವಿಶ್ವಸುಂದರಿ ಪಟ್ಟ ಗೆಲ್ಲುವುದಕ್ಕೆ ಮೊದಲೇ ಐಶ್ವರ್ಯ ರೈ ಅವರ ಫೋಟೋ ನೋಡಿ, ನೀವು ಸಿನಿಮಾ ಮಾಡಿ ಎಂದು ಪತ್ರ ಬರೆದಿದ್ದರಂತೆ.

ಐಶ್ವರ್ಯ ರೈ ಅವರಿಗೆ ಸಿನಿಮಾ ಮಾಡಿ ಎಂದು ಮೊದಲಿಗೆ ಪತ್ರ ಬರೆದಿದ್ದೇ ರವಿಚಂದ್ರನ್ ಅವರು ಎಂದು ಹೇಳಿದ್ದಾರೆ. ಹಾಗೆಯೇ ಐಶ್ವರ್ಯ ರೈ ಅವರು ವಿಶ್ವಸುಂದರಿ ಆದ ನಂತರ ನಮ್ಮ ರಾಜ್ಯದಲ್ಲಿ ಮೊದಲಿಗೆ ಅವರನ್ನು ಕರೆಸಿ, ಸನ್ಮಾನ ಮಾಡಿದ್ದು ಕೂಡ ರವಿಚಂದ್ರನ್ ಅವರೇ ಅಂತೆ. ನಂತರ ಐಶ್ವರ್ಯ ರೈ ಅವರು ಹೊರ ಭಾಷೆಯಲ್ಲಿ ನಟಿಸಿ, ಹೆಸರು ಮಾಡಿದರು. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡರು. ಇವರನ್ನು ಸಹ ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯಿತು. ಆದರೆ ಅದು ಕೂಡ ಸಾಧ್ಯ ಆಗಲಿಲ್ಲ. ಈ ಕಥೆಗಳನ್ನು ರವಿಚಂದ್ರನ್ ಅವರು ತಿಳಿಸಿದ್ದಾರೆ.