ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು.. 1956 ಅಕ್ಟೋಬರ್ 14ರಂದು ಅವರು ಬೌದ್ಧಮತ ಸ್ವೀಕಾರ ಮಾಡಿದರು. ಮಹಾರಾಷ್ಟ್ರದಲ್ಲಿನ ನಾಗಪುರದಲ್ಲಿ ಲಕ್ಷಕ್ಕೂ ಅಧಿಕ ತಮ್ಮ ಬೆಂಬಲಿಗರು ಕೂಡಾ ಅಂದು ಬೌದ್ಧ ಮತ ಸ್ವೀಕಾರ ಮಾಡಿದ್ದರು.. ಇದರ ನೆನಪಿಗಾಗಿಯೇ ಪ್ರತಿ ವರ್ಷದ ವಿಜಯದಶಮಿಯ ದಿನ ನಾಗ್ಪುರದಲ್ಲಿ ಲಕ್ಷಾಂತರ ಬೌದ್ಧರು ಇಲ್ಲಿ ಸೇರಿ ಅದ್ದೂರಿ ಸಮಾರಂಭವನ್ನು ಮಾಡುತ್ತಾರೆ..
ಅಂಬೇಡ್ಕರ್ ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾದಾಗ 22 ಪ್ರತಿಜ್ಞೆಗಳನ್ನು ಮಾಡಿದ್ದರು. ಈ ಪ್ರತಿಜ್ಞೆಗಳು ಈಗಲೂ ಕೂಡಾ ಚರ್ಚೆಯ ವಿಷಯವಾಗಿಯೇ ಇವೆ.. ಕೆಲ ಸಂದರ್ಭದಲ್ಲಿ ಈ ಚರ್ಚೆ ಬಿಸಿಯೇರಿದ ಸಂದರ್ಭಗಳೂ ಇವೆ.. ಅಂದಹ ಒಂದು ಘಟನೆ 2022ರಲ್ಲಿ ಕೂಡಾ ನಡೆದಿತ್ತು.
ದೆಹಲಿಯಲ್ಲಿ 10 ಸಾವಿರ ಮಂದಿ ಮತಾಂತರ!
2022ರ ಅಕ್ಟೋಬರ್ 5ರಂದು ದೆಹಲಿಯಲ್ಲಿನ ಅಂಬೇಡ್ಕರ್ ಭವನದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಭಾರೀ ಪ್ರಮಾಣದ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.. ಇದರಲ್ಲಿ ಸುಮಾರು ಹತ್ತು ಸಾವಿರ ಮಂದಿ ಹಿಂದೂ ಧರ್ಮವನ್ನು ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು.. ಈ ವೇಳೆ ಅಂಬೇಡ್ಕರ್ ಮತಾಂತರವಾದಾಗ ಮಾಡಿದ 22 ಪ್ರತಿಜ್ಞೆಗಳನ್ನು ಬೋಧಿಸಲಾಯಿತು.. ಇದೇ ವೇಳೆ ಹಿಂದೂ ದೇವರನ್ನು ವಿಮರ್ಶೆ ಮಾಡಲಾಯಿತು ಎಂಬ ಆರೋಪಗಳು ಕೂಡಾ ಕೇಳಿ ಬಂದಿದ್ದವು.. ಈ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಕೂಡಾ ನಡೆದಿದ್ದವು.
ಹಾಗಾದರೆ ಚರ್ಚೆಗೆ ಕಾರಣವಾದ ಅಂಬೇಡ್ಕರ್ ಅವರ ಆ 22 ಪ್ರತಿಜ್ಞೆಗಳೇನು..? ನಿಜವಾಗಿಯೂ ಅವು ಹಿಂದೂ ದೇವರುಗಳನ್ನು ಅವಮಾನಿಸುವ ರೀತಿಯಲ್ಲಿವೆಯಾ..? ಈ ಬಗ್ಗೆ ತಿಳಿಯೋಣ ಬನ್ನಿ..

ಅಂಬೇಡ್ಕರ್ ಮಾಡಿದ 22 ಪ್ರತಿಜ್ಞೆಗಳೇನು..?
1956 ಅಕ್ಟೋಬರ್ 14ರಂದು ಮಹಾರಾಷ್ಟ್ರದ ನಾಗಪುರದ ದೀಕ್ಷಭೂಮಿಯಲ್ಲಿ ಬೌದ್ಧಮತವನ್ನು ಸ್ವೀಕರಿಸುತ್ತಾ ಅಂಬೇಡ್ಕರ್ ತನ್ನ ಬೆಂಬಲಿಗರ ಜೊತೆ ಸೇರಿ 22 ಪ್ರತಿಜ್ಞೆಗಳನ್ನು ಮಾಡಿದ್ದರು. ಅವುಗಳನ್ನು ನೋಡುವುದಾದರೆ..
೧. ಬ್ರಹ್ಮ, ವಿಷ್ಣು, ಮಹೇಶ್ವರರನ್ನು ನಾನು ದೇವರೆಂದು ಪೂಜೆ ಮಾಡುವುದಿಲ್ಲ
೨. ರಾಮ, ಕೃಷ್ಣರನ್ನು ದೇವರೆಂದು ನಾನು ಹೇಳುವುದಿಲ್ಲ, ಅವರನ್ನು ನಾನು ಪೂಜಿಸುವುದಿಲ್ಲ
೩. ಗೌರಿ-ಗಣಪತಿಯಂತಹ ಹಿಂದೂ ದೇವರುಗಳನ್ನು ನಾನು ಗೌರವಿಸುವುದಿಲ್ಲ
೪. ಭಗವಂತನೇ ಮಾನವನ ಅವತಾರ ಎತ್ತಿದ್ದಾನೆ ಎಂಬುದನ್ನು ನಾನು ನಂಬುವುದಿಲ್ಲ
೫. ಗೌತಮ ಬುದ್ಧನು ವಿಷ್ಣುವಿನ ಅವತಾರ ಎನ್ನುವುದು ತಪ್ಪು. ನಾನು ಅದನ್ನು ನಂಬುವುದಿಲ್ಲ, ಇದು ಸುಳ್ಳು ಪ್ರಚಾರ
೬. ಶ್ರಾದ್ಧಗಳನ್ನು ನಾನು ಮಾಡುವುದಿಲ್ಲ
೭. ಬೌದ್ಧ ಮತಕ್ಕೆ ಹೊಂದದ ಯಾವ ಕೆಲಸಗಳನ್ನೂ ನಾನು ಮಾಡುವುದಿಲ್ಲ
೮. ಬ್ರಾಹ್ಮಣರ ಕೈಯಿಂದ ನಾನು ಎಂತಹ ಕಾರ್ಯಕ್ರಮಗಳನ್ನು ನಾನು ಮಾಡಿಸುವುದಿಲ್ಲ
೯. ಮನುಷ್ಯರೆಲ್ಲರೂ ಸಮಾನರೇ ಎಂದು ನಾನು ನಂಬುತ್ತೇನೆ
೧೦. ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದಕ್ಕೆ ನಾನು ಪ್ರಯತ್ನಪಡುತ್ತೇನೆ
೧೧. ಬುದ್ಧ ಕಲಿಸಿದ ಅಷ್ಟಾಂ ಮಾರ್ಗವನ್ನು ನಾನು ಅನುಸರಿಸುತ್ತೇನೆ
೧೨. ಬುದ್ಧ ಹೇಳಿದ ಹತ್ತು ನೀತಿ ಸೂತ್ರಗಳನ್ನು ನಾನು ಪಾಲಿಸುತ್ತೇನೆ
೧೩. ಜಂತುಗಳೆಲ್ಲದರ ಬಗ್ಗೆ ನಾನು ಕರುಣೆ, ಪ್ರೀತಿಯನ್ನು ಹೊಂದಿರುತ್ತೇನೆ
೧೪. ನಾನು ಯಾವ ಕಾರಣಕ್ಕೂ ಕಳ್ಳತನ ಮಾಡೋದಿಲ್ಲ
೧೫. ವ್ಯಭಿಚಾರದಂತಹ ಕೆಲಸವನ್ನು ನಾನು ಎಂದಿಗೂ ಮಾಡೋದಿಲ್ಲ
೧೬. ನಾನು ಸುಳ್ಳನ್ನು ಯಾವ ಕಾರಣಕ್ಕೂ ಹೇಳುವುದಿಲ್ಲ
೧೭. ನಾನು ಮದ್ಯವನ್ನು ಕುಡಿಯುವುದಿಲ್ಲ
೧೮. ಬೌದ್ಧ ಧರ್ಮದ ಮೂರು ಸಿದ್ಧಾಂತಗಳಾದ ಪ್ರಜ್ಞೆ, ಸನ್ಮಾರ್ಗ, ಕರುಣೆ ಈ ಮೂರನ್ನೂ ಜೀವನ ಪರ್ಯಂತೆ ಪಾಲನೆ ಮಾಡುತ್ತೇನೆ
೧೯. ಜನ್ಮದಿಂದ ಬಂದಂತಹ ಹಿಂದೂ ಧರ್ಮವನ್ನು ನಾನು ತ್ಯಜಿಸುತ್ತಿದ್ದೇನೆ. ಅದು ಮಾವನ ಪ್ರಗತಿಗೆ ವಿರೋಧಿ. ಮನುಷ್ಯರನ್ನು ಸಮಾಜ ದೃಷ್ಟಿಯಲ್ಲಿ ನೋಡೋದಿಲ್ಲ. ಹೀಗಾಗಿಯೇ ಬೌದ್ಧ ಮತವನ್ನು ಸ್ವೀಕರಿಸಿದ್ದೇನೆ
೨೦. ಬೌದ್ಧ ಧರ್ಮವೇ ನಿಜವಾದ ಧರ್ಮವೆಂದು ನಾನು ನಂಬುತ್ತಿದ್ದೇನೆ
೨೧. ನನಗೆ ಇಂದು ಪುನರ್ಜನ್ಮ ಎತ್ತಿದ್ದೇನೆ ಎನಿಸುತ್ತಿದೆ
೨೨. ಬುದ್ಧನ ಬೋಧನೆಗಳನ್ನು ನಾನು ಜೀವನಪರ್ಯಂತ ಅನುಸರಿಸುತೇನೆಂದು ಪ್ರಮಾಣ ಮಾಡುತ್ತೇನೆ.
ಅಂಬೇಡ್ಕರ್ ಈ ಪ್ರತಿಜ್ಞೆಗಳನ್ನು ಯಾಕೆ ಮಾಡಿದರು..?
ಅಂಬೇಡ್ಕರ್ ಮಾಡಿದ ಈ ಪ್ರತಿಜ್ಞೆಗಳಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಾವಿರಾರು ಹಿಂದೂಗಳು ಆರೋಪಗಳನ್ನು ಮಾಡಿದ್ದರು. ಆದ್ರೆ ಅಂಬೇಡ್ಕರ್ ಮಾಡಿದ ಈ ಪ್ರತಿಜ್ಞೆಗಳನ್ನು ಯಾವ ಭಾವನೆಗಳಿಗೂ ಧಕ್ಕೆ ತರುವಂತಹುದಲ್ಲ ಎಂದು ಅವರ ಅನುಯಾಯಿಗಳು ಹೇಳುತ್ತಾರೆ.. ವಿಗ್ರಹಾರಾಧನೆ, ಮೂಢನಂಬಿಕೆಗಳನ್ನು ಅನುಸರಿಸುವ ಸಮಾಜದಿಂದ ದೂರ ಹೋಗಬೇಕೆಂದು ಅವರು ಅಂದುಕೊಂಡರು.. ಜನರಿಗೆ ಮತ್ತಷ್ಟು ಸ್ವತಂತ್ರ ಜೀವನ ಬೇಕೆಂದು ಅಂಬೇಡ್ಕರ್ ಬಯಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ..
ಬೌದ್ಧ ಪುಸ್ತಕಗಳನ್ನು ಓದುವುದು, ಅವುಗಳಲ್ಲಿರುವ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಸಾಧ್ಯವಾಗದ ಕೆಲಸ ಎಂದು ಅಂಬೇಡ್ಕರ್ಗೆ ಗೊತ್ತು.. ಹೀಗಾಗಿ ಬೌದ್ಧ ಮತವನ್ನು ಹೇಗೆ ಅನುಸರಿಸಬೇಕೆಂದು ಸರಳವಾದ ವಿಧಾನದಲ್ಲಿ ಹೇಳುವುದಕ್ಕೆ ಅವು ತಮ್ಮ ಬೆಂಬಲಿಗರಿಗಾಗಿ ಅವರು ಈ ಪ್ರತಿಜ್ಞೆಗಳನ್ನು ಮಾಡುತ್ತಾರೆ.
ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಜನರು ಮತ್ತೆ ಹಿಂದಿನ ನಂಬಿಕೆಗಳನ್ನು ಅನುಸರಿಸುವುದು ಅಂಬೇಡ್ಕರ್ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿಯೇ ಅವರು ಈ ಪ್ರತಿಜ್ಞೆಗಳನ್ನು ಮಾಡಿದರು. ಭಿನ್ನವಾದ ಜೀವನ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಜನರಿಗೆ ತಿಳಿಯಪಡಿಸಬೇಕು ಎಂದು ಅವರು ಅಂದುಕೊಂಡರು..