ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಏನು ಬೇಕಾದ್ರೂ ಆಗಬಹುದು. ಯಾರು ಯಾವ ಕ್ಷಣದಲ್ಲಿ ಬೇಕಾದ್ರೂ ಯಾವ ಪಕ್ಷಕ್ಕಾದರೂ ಹೋಗಬಹುದು ಅನ್ನೋದಕ್ಕೆ ಅನೇಕ ಉದಾಹರಣೆಗಳು ಇವೆ. ಇಂತವರು ಇದೇ ಪಕ್ಷಕ್ಕೆ ಹೋಗ್ತಾರಂತೆ ಅನ್ನೋ ಗುಮಾನಿ ಇದ್ದರೂ ಕೂಡ ಅದು ಯಾವಗ ಅನ್ನೋದು ಯಾರಿಗೂ ಗೊತ್ತಾಗಲ್ಲ. ರಾತ್ರೋ ರಾತ್ರಿ ನಾಯಕರುಗಳ ಮನೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿ ಬಿಡ್ತಾರೆ. ಸದ್ಯ ಇದಕ್ಕೊಂದು ತಾಜಾ ಉದಾಹರಣೆ ಅಂದರೆ ಸಿಪಿವೈ ಕಾಂಗ್ರೆಸ್ ಕಡೆ ಮುಖ ಮಾಡಿ ಚುನಾವಣೆಯಲ್ಲಿ ನಿಂತು ಗೆದ್ದಿದ್ದು.
ಈಗ ಮತ್ತೊಬ್ಬ ಪ್ರಬಲ ನಾಯಕ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಪಕ್ಷದಿಂದ ಅಂತರ ಕಾಯ್ದು ಕೊಂಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಸದಾ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ವಿರೋಧಿಸುತ್ತಲೇ ಬಂದರು. ಮೈತ್ರಿ ಮಾಡುವಾಗಲೂ ಅಡ್ಡಿಯಾಗಿದ್ದು ಇದೇ ಪ್ರಬಲ ನಾಯಕ. ಅಷ್ಟೆ ಯಾಕೆ ಪೆನ್ ಡ್ರೈವ್ ಹಂಚಿಕೆ ಹಿಂದೆ ಇದೇ ನಾಯಕನ ಕೈವಾಡ ಇತ್ತು ಅನ್ನೋ ಆರೋಪ ಕೂಡ ಇದೆ. ಆ ನಾಯಕ ಯಾರು ಅಂದ್ರೆ ಮಾಜಿ ಶಾಸಕ ಪ್ರೀತಂ ಗೌಡ.

ಹೌದು, ಸದ್ಯ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಲ್ಲಿ ಇದೆ. ಅದು ಕೇವಲ ಮಾತಿನಲ್ಲಿ ಅನ್ನೋದಂತೂ ಸ್ಪಷ್ಟ. ಯಾಕಂದ್ರೆ ನಾಯಕರುಗಳ ನಡುವೆ ಮೈತ್ರಿ ಮುರಿದಿದೆ ಅನ್ನೋದಕ್ಕೆ ಅನೇಕ ಉದಾಹರಣೆಗಳು ತುಂಬಾ ಇವೆ. ಅದೆಲ್ಲ ಹಾಗಿರಲಿ. ಇಲ್ಲಿ ಹೇಳೋದಕ್ಕೆ ಹೊರಟಿರೋ ವಿಚಾರ ಅಂದ್ರೆ ಈ ಮೈತ್ರಿ ವಿಚಾರವಾಗಿಯೇ ಪ್ರೀತಂ ಗೌಡ ಕಾಂಗ್ರೆಸ್ ಗೆ ಹೋಗ್ತಾರೆ ಅನ್ನೋದು ಹಾಸನ ಭಾಗ ಅಷ್ಟೆ ಅಲ್ಲ, ಬಿಜೆಪಿ ಪಡಸಾಲೆಯಲ್ಲೂ ಕೇಳಿ ಬರ್ತಾ ಇರೋ ಮಾತು.
ಹೊಸ ವಿಚಾರ ಏನಂದ್ರೆ ಹಾಸನದಲ್ಲೂ ಮೈತ್ರಿ ಮುರಿದೋಗಿದೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಪ್ರೀತಂ ಗೌಡ ಕಾಂಗ್ರೆಸ್ ಗೆ ಹೋಗ್ತಾರೆ ಅನ್ನೋ ಮೂಲವೇ ಈ ಮೈತ್ರಿ ಅಂದರೆ ನೀವು ನಂಬಲೇ ಬೇಕು. ಹಾಸನದಲ್ಲಿ ನೆಲೆಯೂರಬೇಕು ಅಂದರೆ ಪಕ್ಷ ಬದಲಾವಣೆ ಮಾಡಬೇಕು ಅನ್ನೋ ನಿರ್ಧಾರಕ್ಕೇನಾದರೂ ಪ್ರೀತಂ ಗೌಡ ಬಂದ್ರಾ ಅನ್ನೊ ಪ್ರಶ್ನೆ ಇದೀಗ ಎದ್ದಿದೆ. ಅದಕ್ಕೆ ಕಾರಣ ವಿಜಯೇಂದ್ರ ಇತ್ತೀಚೆಗೆ ಪ್ರೀತಂ ಗೌಡ ನಿವಾಸಕ್ಕೆ ಭೇಟಿ ನೀಡಿದ್ದು.
ಹೌದು, ಜನಾಕ್ರೋಶ ಯಾತ್ರೆ ಮಾಡ್ತಾ ಇರುವ ಬಿಜೆಪಿ ನಾಯಕರು ಹಾಸನ ಭಾಗದಲ್ಲಿ ಈ ಯಾತ್ರೆ ಕೈಗೊಂಡಿದ್ದಾರೆ. ಈ ವೇಳೆ ಬೆಳಗಿನ ಉಪಹಾರಕ್ಕೆ ಪ್ರೀತಂ ಗೌಡ ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿದ್ದಾರೆ. ಸಹಜವಾಗಿ ಇದೇನು ಬೇರೆ ಅರ್ಥ ಕಲ್ಪಿಸಲು ಸಾಧ್ಯವಿಲ್ಲ ಅಂದರೂ ಪ್ರೀತಂ ಕಾಂಗ್ರೆಸ್ ಗೆ ಹೋಗ್ತಾರೆ ಅನ್ನೋ ಗುಮನಿ ನಡುವೆ ಅವರ ನಿವಾಸಕ್ಕೆ ಹೋಗಿದ್ದು ಒಂದಿಷ್ಟು ಚರ್ಚೆಗೆ ಕಾರಣವಾಗಿದೆ. ಈ ವೇಳೆ ಅವರ ದೇವರ ಮನೆಯಲ್ಲಿ ಪೂಜೆ ಸಲ್ಲಿಸಿ ಬಳಿಕ ಉಪಹಾರ ಸೇವನೆ ಮಾಡಿದ್ದಾರೆ.

ಹಾಗಾದ್ರೆ ಪ್ರೀತಂ ಗೌಡ ಮನವೊಲಿಸೋದಕ್ಕೆ ಅವರ ನಿವಾಸಕ್ಕೆ ವಿಜಯೇಂದ್ರ ಹೋದರ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ರಾಜ್ಯದಲ್ಲಿ ಮೈತ್ರಿ ಇರೋದ್ರಿಂದ ಮುಂದೆ ನನಗೆ ಈ ಕ್ಷೇತ್ರದಲ್ಲಿ ಟಿಕೆಟ್ ಸಿಗೋದಿಲ್ಲ. ಈಗಾಗಲೇ ಸ್ವರೂಪ್ ಪ್ರಕಾಶ ಶಾಸಕರಾಗಿರೋದ್ರಿಂ ಜೆಡಿಎಸ್ ನೆಲೆ ಅಲ್ಲಿ ಇದೆ. ಮುಂದೆಯೂ ಮೈತ್ರಿ ಇದ್ರೆ ನನಗೆ ಟಿಕೆಟ್ ಸಿಗೋದು ಕಷ್ಟ ಆಗಬಹುದು. ಹಾಗಾಗಿ ಈಗಿನಿಂದಲೇ ಒಂದಿಷ್ಟು ವೇದಿಕೆ ಕಲ್ಪಿಸಿಕೊಂಡರೆ ಉತ್ತಮ ಅನ್ನೋ ಲೆಕ್ಕಾಚಾರ ಪ್ರೀತಂ ಗೌಡ ಮಾಡಿದ್ರಾ ಅನ್ನೋದೆ ಚರ್ಚೆ.
ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಲ್ಲಿ ಇಲ್ಲ ಅನ್ನೋದಂತೂ ಸ್ಪಷ್ಟ. ಅದರ ಉದಾಹರಣೆ ಎಂಬಂತೆ ಇತ್ತೀಚೆಗೆ ಬಿಜೆಪಿ ನಡೆಸಿದ ಅಹೋರಾತ್ರಿ ಧರಣಿಗೆ ಜೆಡಿಎಸ್ ನಾಯಕರಿಗೆ ಆಹ್ವಾನ ಕೊಡದೇ ಇದಿದ್ದು. ಸದ್ಯ ಈ ವಿಚಾರವಾಗಿ ಬಹಿರಂಗವಾಗಿಯೇ ಜೆಡಿಎಸ್ ನಾಯಕರು ಅಸಮಾಧಾನ ಹೊರ ಹಾಕಿದ್ದೂ ಇದೆ. ಇದು ಕೇವಲ ಒಂದು ಪ್ರತಿಭಟನೆಗೆ ಅಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಇದೇ ಆಗಿದೆ. ಆದರೆ ಹಾಸನದಲ್ಲಿ ಮೈತ್ರಿ ವಿಚಾರವಾಗಿ ವಾತಾವರಣ ಬೇರೆ ಇದೆ. ಹೀಗಾಗಿ ಇಲ್ಲಿ ಮೈತ್ರಿ ಆದರೆ ಕಷ್ಟ ಅನ್ನೋದು ಪ್ರೀತಂ ಗೌಡದ್ದು ಲೆಕ್ಕಾಚಾರ ಇರಬಹುದು.