ಆನ್ಲೈನ್ ಗೇಮಿಂಗ್, ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಈಗ ಎಲ್ಲೆಡೆ ಮಿತಿಮೀರುತ್ತಿದೆ.. ಇದು ಜೂಜೇ ಆಗಿದ್ದರೂ ಇದೊಂದು ಸ್ಕಿಲ್ ಗೇಮ್ ಎಂದು ಹೇಳಿಕೊಂಡು ಯುವ ಸಮುದಾಯವನ್ನು ತಪ್ಪುದಾರಿಗೆಳೆಯಲಾಗುತ್ತಿದೆ.. ಈ ಆನ್ಲೈನ್ ಜೂಜಿಗೆ ದಾಸರಾಗಿ ಮನೆ ಮಠ ಕಳೆದುಕೊಂಡವರಿಗೆ ಲೆಕ್ಕವೇ ಇಲ್ಲ.. ದಿನವೂ ಬೆಟ್ಟಿಂಗ್ನಿಂದ ಹಣ ಕಳೆದುಕೊಂಡು ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ.. ಹೀಗಿದ್ದರೂ ಕೂಡಾ ಈ ದಂಧೆಗೆ ಕಡಿವಾಣ ಹಾಕಬೇಕಾದ ಸರ್ಕಾರಗಳು ಸುಮ್ಮನೆ ಕುಳಿತಿವೆ. ಇನ್ನೊಂದೆಡೆ ಈ ಅನ್ಲೈನ್ ಜೂಜು ಆಡಿಸುವವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಮೂಲಕ ಪ್ರಚಾರ ಮಾಡಿಸಿ ಕೋಟಿ ಕೋಟಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ.. ಸಿನಿಮಾ ತಾರೆಯರು ಕೂಡಾ ಕೋಟಿ ಕೋಟಿ ಪಡೆದು ಈ ಆನ್ಲೈನ್ ಜೂಜನ್ನು ಪ್ರಮೋಟ್ ಮಾಡುತ್ತಿದ್ದಾರೆ.. ಹೀಗಿರುವಾಗಲೇ ತೆಲಂಗಾಣದಲ್ಲಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.. ಹೀಗೆ, ಆನ್ಲೈನ್ ಜೂಜನ್ನು ಪ್ರಚಾರ ಮಾಡುವವರ ವಿರುದ್ಧ ಕೇಸ್ಗಳನ್ನು ದಾಖಲಿಸಲಾಗುತ್ತಿದೆ..

ಬೆಟ್ಟಿಂಗ್ ಆಪ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆಂಬ ಕಾರಣಕ್ಕೆ ತೆಲಂಗಾಣದಲ್ಲಿ ಇದುವರೆಗೆ 11 ಮಂದಿ ಸಿನಿಮಾ ತಾರೆಯರು ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಮೇಲೆ ಕೇಸ್ ಹಾಕಲಾಗಿದೆ.. ವಿನಯ್ ಎಂಬ ವ್ಯಕ್ತಿ ಬೆಟ್ಟಿಂಗ್ ಆಪ್ಸ್ ಪ್ರಮೋಟ್ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೈದರಾಬಾದ್ನ ಪಂಜಾಗುಟ್ಟ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದರು.. ಇದರ ನಂತರ ಎಚ್ಚೆತ್ತುಕೊಂಡಿರುವ ಪೊಲೀಸರು, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ತೆಲುಗಿನ ಪ್ರಮುಖ ಯೂಟ್ಯೂಬರ್ಗಳು ಹಾಗೂ ಸಿನಿಮಾ ತಾರೆಯರಾದ ಇಮ್ರಾನ್ ಖಾನ್, ಹರ್ಷ ಸಾಯಿ, ಅಜಯ್, ವಿಷ್ಣುಪ್ರಿಯಾ, ಶ್ಯಾಮಲಾ, ಟೇಸ್ಟಿ ತೇಜಾ, ರೀತೂ ಚೌದರಿ, ಬಂಡಾರು ಶೇಷಯಾನಿ ಸುಪ್ರೀತಾ, ಕಾನಿಸ್ಟೇಬಲ್ ಕಿರಣ್ ಗೌಡ್, ಟ್ರಾವೆಲರ್ ಸನ್ನಿಯಾದವ್, ಅನಲಿಸ್ಟ್ ಸುಧೀರ್ ಮುಂತಾದವರ ವಿರುದ್ಧ ಕೇಸ್ ದಾಖಲಿಸಲಾಗಿದೆ.. ಇದೀಗ ಇದರಲ್ಲಿ ಬಹುತೇಕರು ತಲೆಮರೆಸಿಕೊಂಡಿದ್ದಾರೆ.
ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಇನ್ನು ಮುಂದೆ ಇಂತಹ ಪ್ರಮೋಷನ್ಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ..
ಮತ್ತೊಂದು ಕನ್ನಡಿಗ ಐಪಿಎಸ್ ಅಧಿಕಾರಿ ವೀಸಿ ಸಜ್ಜನಾರ್ ಅವರು ಮತ್ತೊಮ್ಮೆ ತೆಲಂಗಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು.. ಈ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ಸಜ್ಜನಾರ್ ಎನ್ಕೌಂಟರ್ ಮಾಡಿದ್ದರು.. ಉತ್ತರ ಕರ್ನಾಟಕ ಮೂಲದವರಾದ ಸಜ್ಜನಾರ್ ಅಂದು ಇಡೀ ದೇಶಕ್ಕೆ ಹೀರೋ ರೀತಿಯಲ್ಲಿ ಕಂಡಿದ್ದರು.. ಇದೀಗ ಇದೇ ಸಜ್ಜನಾರ್ ಆನ್ಲೈನ್ ಗೇಮಿಂಗ್ ವಿರುದ್ಧ ಧ್ವನಿ ಎತ್ತಿದ್ದಾರೆ.. #SayNoToBettingApps ಎಂಬ ಹ್ಯಾಷ್ಟ್ಯಾಗ್ ಬಳಸಿ ಆನ್ಲೈನ್ ಗೇಮಿಂಗ್ ವಿರುದ್ಧ ಧ್ವನಿ ಎತ್ತುವಂತೆ ಸಜ್ಜನಾರ್ ಜನಕ್ಕೆ ಕರೆಕೊಟ್ಟಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಟ್ರೆಂಡಿಂಗ್ ಆಗುತ್ತಿದೆ..

ಬೆಟ್ಟಿಂ2ಗ್ಸ್ ಆಪ್ಸ್ ಅಂದ್ರೆ ಏನು..?
ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ಟೆನ್ನಿಸ್, ರಮ್ಮೀ, ಕ್ಯಾಸಿನೋ, ಪೋಕರ್ ನಂತರ ಗೇಮ್ಗಳನ್ನು ಹಣ ಪಣಕ್ಕಿಟ್ಟು ಆನ್ಲೈನ್ನಲ್ಲಿ ಆಟ ಆಡುತ್ತಾರೆ.. ಇದಕ್ಕಾಗಿ ನೂರಾರು ಆಪ್ಗಳು ಚಾಲ್ತಿಯಲ್ಲಿದೆ.. ಮೊದಲಿಗೆ ಎಪಿಎಲ್ ಸಮಯದಲ್ಲಿ ಅಕ್ರಮವಾಗಿ ಈ ಕ್ರಿಕೆಟ್ ಬೆಟ್ಟಿಂಗ್ ಆಪ್ಗಳನ್ನು ಪರಿಚಯಿಸಲಾಗಿತ್ತು. ಅನಂತರ ರಮ್ಮಿ ಆಡುವ ಆಪ್ಗಳು ಬಂದವು. ಇದಾದ ಮೇಲೆ ಹಲವಾರು ರೀತಿಯ ಗೇಮಿಂಗ್ ಆಪ್ಗಳು ಬಂದಿವೆ.. ಹಣದ ಆಸೆಗಾಗಿ ಈ ಆಪ್ಗಳ ಮೂಲಕ ಗೇಮ್ ಆಡಲು ಹೋಗಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಇನ್ನು ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಈ ಆಪ್ಗಳು ಹೇಗೆ ಕೆಲಸ ಮಾಡುತ್ತವೆ..?
ಈ ಬೆಟ್ಟಿಂಗ್ ಆಪ್ಗಳು ವಿವಿಧ ರೂಪಗಳಲ್ಲಿ ಕೆಲಸ ಮಾಡುತ್ತವೆ.. ಕೆಲವು ಆಪ್ಗಳು ಕ್ರಿಕೆಟ್ ಸೇರಿ ಹಲವು ಟೂರ್ನಿಗಳು ನಡೆಯುತ್ತಿರುವಾಗ ಅದರ ಮೇಲೆ ಬೆಟ್ಟಿಂಗ್ ಆಡಿಸುತ್ತವೆ.. ಇನ್ನು ಕೆಲವು ಆಪ್ಗಳಲ್ಲಿ ರಮ್ಮಿ, ಕ್ಯಾಸಿನೋ ಸೇರಿದಂತೆ ಹಲವು ಗೇಮ್ಗಳನ್ನು ಆಡಿಸುತ್ತಾರೆ.. ಇದಕ್ಕಾಗಿ ಹಣ ಪಣಕ್ಕಿಡಲಾಗುತ್ತದೆ..

ಫೇಕ್ ಗೇಮ್ಸ್ ಹಾವಳಿ ಹೆಚ್ಚು..!;
ಬಹುತೇಕ ಇಂತಹ ಎಲ್ಲಾ ಬೆಟ್ಟಿಂಗ್ ಆಪ್ಗಳು ಫೇಕ್ ಆಗಿರುತ್ತವೆ.. ಜನಕ್ಕೆ ಮೋಸ ಮಾಡಲೆಂದೇ ಹುಟ್ಟಿಕೊಂಡಿವೆ.. ಈ ಮೊಬೈಲ್ ಅಪ್ಲಿಕೇಷನ್ನಲ್ಲಿ ಮೊದಲೇ ಆಟವನ್ನು ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ.. ಆಡುವವರಿಗೆ ನಂಬಿಕೆ ಬರುವುದಕ್ಕೆ ಮೊದಲಿಗೆ ಸಣ್ಣ ಮೊತ್ತದಲ್ಲಿ ಲಾಭ ಬರುವಂತೆ ನೋಡಿಕೊಳ್ಳಲಾಗುತ್ತದೆ.. ಅನಂತರ ಇದನ್ನು ನಂಬಿದ ಜನ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಆಟ ಆಡಲು ಶುರು ಮಾಡುತ್ತಾರೆ.. ಲಕ್ಷ , ಕೋಟಿಗಳಲ್ಲೂ ಆಡುವವರೂ ಇದ್ದಾರೆ.. ಹಾಗೆ ದೊಡ್ಡ ಮೊತ್ತ ಹೂಡಿಕೆ ಮಾಡಿದಾಗ ಎಲ್ಲವನ್ನೂ ಕಳೆದುಕೊಳ್ಳುವಂತೆ ಮೊಬೈಲ್ ಆಪ್ನಲ್ಲಿ ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ..

ಬೋನಸ್ ಆಸೆ ತೋರಿಸಿ ಭಾರೀ ಮೋಸ;
ಬೆಟ್ಟಿಂಗ್ ಆಪ್ಗಳೆಂದರೆ ಮೋಸ ಅನ್ನೋದು ಎಲ್ಲರಿಗೂ ಗೊತ್ತಿರುತ್ತದೆ.. ಆದ್ರೆ ಸೋಷಿಯಲ್ ಮೀಡಿಯಾ ಪ್ರಮೋಷನ್ ಮೂಲಕ ಜನರನ್ನು ಸೆಳೆಯಲಾಗುತ್ತದೆ.. ಮೊದಲಿಗೆ ಹಣವನ್ನು ಹೂಡಿಕೆ ಮಾಡುವುದೇ ಬೇಡ.. ನಾವೇ ಇಷ್ಟು ಸಾವಿರ ಅಂತ ಬೋನಸ್ ಕೊಡುತ್ತೇವೆ.. ಅದರಲ್ಲೇ ಆಟ ಆಡಿ ಗೆಲ್ಲಬಹುದು ಎಂದು ಜನರ ಗಮನ ಸೆಳೆಯಲಾಗುತ್ತದೆ.. ಅದನ್ನು ನಂಬಿ ಆಪ್ ಡೌನ್ಲೋಡ್ ಮಾಡಿಕೊಂಡವರಿಗೆ ಬೋನಸ್ ರೂಪದಲ್ಲಿ ಇಂತಿಷ್ಟು ಹಣ ಅಂತ ನೀಡಲಾಗುತ್ತದೆ.. ಅದರಿಂದ ಲಾಭ ಬರುವಂತೆಯೂ ನೋಡಿಕೊಳ್ಳುತ್ತಾರೆ.. ಅನಂತರ ಮತ್ತಷ್ಟು ಹಣವನ್ನು ಡೆಪಾಸಿಟ್ ಮಾಡಿಸುತ್ತಾರೆ. ಅನಂತರ ಜನ ಮಾಡಿದ ಡೆಪಾಸಿಟ್ ಹಣ ಕಳೆದುಕೊಳ್ಳುವಂತೆ ನೋಡಿಕೊಳ್ಳುತ್ತಾರೆ.. ಹಣ ಕಳೆದವರು ಹೋದ ಹಣವನ್ನಾದರೂ ವಾಪಸ್ ತೆಗೆದುಕೊಳ್ಳೋಣ ಅಂತ ಮತ್ತಷ್ಟು ಮಗದಷ್ಟು ಹಣವನ್ನು ತಂದು ಸುರಿದು ಎಲ್ಲವನ್ನೂ ಕಳೆದುಕೊಳ್ಳುತ್ತಾರೆ..

ಫೇಕ್ ಪ್ರಮೋಷನ್ಗಳಿಂದ ಮೋಸ;
ಸಿನಿಮಾ ಹಾಗೂ ಕಿರುತೆರೆ ತಾರೆಯರು, ಫೇಮಸ್ ಯೂಟ್ಯೂಬರ್ಗಳಿಗೆ ಕೋಟಿ ಕೋಟಿ ಹಣ ನೀಡಿ ಈ ಬೆಟ್ಟಿಂಗ್ ಆಪ್ಗಳನ್ನು ಪ್ರಮೋಟ್ ಮಾಡಲಾಗುತ್ತದೆ.. ಇದರಲ್ಲಿ ಅವರು ಕೋಟಿ ಕೋಟಿ ಹಣವನ್ನು ಸುಲಭವಾಗಿ ದುಡಿಯಬಹುದು ಅಂತ ಸುಳ್ಳು ಹೇಳುತ್ತಾರೆ.. ಇದನ್ನು ನಂಬಿದ ನಿರುದ್ಯೋಗಿಗಳು, ಸುಲಭವಾಗಿ ಹಣ ಮಾಡಬೇಕೆಂದು ಬಯಸುವವರು ಅಟ್ರ್ಯಾಕ್ಟ್ ಆಗುತ್ತಾರೆ.. ನಂತರ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುತ್ತಾರೆ..
ಇಂತಹ ಫೇಕ್ ಗೇಮ್ಗಳ ವಿರುದ್ಧ ತೆಲಂಗಾಣ ಪೊಲೀಸರು ಯುದ್ಧ ಶುರು ಮಾಡಿದ್ದಾರೆ.. ಇದರಿಂದಾಗಿ ಪ್ರಮೋಟರ್ಗಳಿಗೆ ಬಿಸಿ ಮುಟ್ಟಿದೆ.. ಇದರ ಜೊತೆಜೊತೆಗೆ ಇದರ ವಿರುದ್ಧ ಜನ ಜಾಗೃತಿಗಳೂ ಹೆಚ್ಚಾಗುತ್ತಿವೆ.. ಈ ಕೆಲಸ ಕರ್ನಾಟಕದಲ್ಲೂ ಆಗಬೇಕಿದೆ.. ಕರ್ನಾಟಕದಲ್ಲೂ ಹಲವಾರು ತಾರೆಯರು ಈ ಬೆಟ್ಟಿಂಗ್ ಆಪ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.. ಅವುಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ.. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ..