ಕಳೆದ ಐದಾರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಹೆಸರು ಸಮೀರ್ ಎಂ.ಡಿ. ಈ ಹುಡುಗ ಒಂದು ಪ್ರಮುಖ ಕೇ*ಸ್ ಬಗ್ಗೆ ವಿಡಿಯೋ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೇ ತಡ, ರಾತ್ರೋರಾತ್ರಿ ಆ ವಿಡಿಯೋ ವೈರಲ್ ಆಗಿದೆ. ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗನ ಧೈರ್ಯಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಆತನ ಜೀವಕ್ಕೂ ಅಪಾಯ ಶುರುವಾಗಿದೆ. ಆ ಹುಡುಗ ಮತ್ಯಾರು ಅಲ್ಲ, ಸಮೀರ್ ಎಂ.ಡಿ. ಯೂಟ್ಯೂಬ್ ನಲ್ಲಿ ಹಾಕಿದ ಒಂದು ವಿಡಿಯೋ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದ್ರೆ ಇಡೀ ಕರ್ನಾಟಕದಲ್ಲಿ ಇವನ ಬಗ್ಗೆ ಮೆಚ್ಚುಗೆ, ಬೆಂಬಲ ಶುರುವಾಗಿದೆ.
ಈತ ಮಾಡಿರುವ ವಿಡಿಯೋ ಯಾವುದೋ ಸಣ್ಣ ಕೇಸ್ ಅಲ್ಲ. 12 ವರ್ಷಗಳಿಂದ ನ್ಯಾಯ ಸಿಗದೇ, ದಿನೇ ದಿನೇ ಹೋರಾಟ ನಡೆಯುತ್ತಿರುವ ಕೇಸ್ ಬಗ್ಗೆ. ದೊಡ್ಡವರ ವಿಷಯಕ್ಕೆ ಹೋದರೆ ಅವರಿಗೆ ಇರುವ ಪವರ್ ಇಂದ ಏನು ಬೇಕಾದರೂ ಆಗಬಹುದು ಎಂದು ಆ ಹುಡುಗನಿಗೆ ಗೊತ್ತಿದ್ದರೂ ಸಹ, ಬಹಳ ಕಷ್ಟಪಟ್ಟು ರೀಸರ್ಚ್ ಮಾಡಿ, ಅದ್ಭುತವಾಗಿ ಮಾತನಾಡಿ ಒಂದು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಹಲವಾರು ಜನರು ಇವನ ಪರವಾಗಿ ನಿಂತಿದ್ದಾರೆ, ಇಂಥದ್ದೊಂದು ವಿಡಿಯೋ ಮಾಡೋಕೆ ಡಬಲ್ ಗುಂಡಿಗೆ ಬೇಕು, ಈ ಹುಡುಗ ಮಾಡಿರುವ ಕೆಲಸವನ್ನು ಮೆಚ್ಚಬೇಕು ಎನ್ನುತ್ತಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಈತನದ್ದೇ ಸುದ್ದಿ ಎಂದರೂ ತಪ್ಪಲ್ಲ.
ಎಲ್ಲಾ ಟ್ರೋಲ್ ಪೇಜ್ ಗಳು ಸಮೀರ್ ಪರವಾಗಿ ನಿಂತಿದೆ. ನಿನ್ನ ಪರವಾಗಿ ನಾವೆಲ್ಲರೂ ಇದ್ದೇವೆ ಬ್ರದರ್, ಧೈರ್ಯವಾಗಿ ಮುನ್ನುಗ್ಗಿ ಎಂದು ಸಮೀರ್ ಗೆ ಸಾಥ್ ಕೊಡುತ್ತಿದ್ದಾರೆ. ಈ ಹುಡುಗ ವಿಡಿಯೋ ಮಾಡಿ ಹಾಕಿ, ಒಂದು ವಾರಕ್ಕೆ 13 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಸಿಕ್ಕಿದೆ. ಕೆಲವು ವರ್ಷಗಳಿಂದ ಸೈಲೆಂಟ್ ಆಗಿದ್ದ ಈ ಕೇಸ್ ಗೆ ಮತ್ತೆ ಜೀವ ಬಂದಿದ್ದು, ಎಲ್ಲರ ಬಾಯಲ್ಲೂ ಇದೇ ವಿಚಾರ ಚರ್ಚೆ ಆಗುತ್ತಿದೆ. ಈ ಬೆಳವಣಿಗೆ ನೋಡಿದರೆ, ಈ ಪ್ರಕರಣಕ್ಕೆ ಈಗಲಾದರೂ ನ್ಯಾಯ ಸಿಗಲಿ, ತಪ್ಪು ಮಾಡಿರುವವರಿಗೆ ದಂಡನೆ ಸಿಗಲಿ ಎನ್ನುವುದು ಎಲ್ಲರ ಉದ್ದೇಶ. ಕೇಸ್ ವಿಚಾರ ಒಂದು ಕಡೆಯಾದರೆ ಮತ್ತೊಂದು ಕಡೆ ಸಮೀರ್ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.

ಈತನ ಧರ್ಮದ ವಿಚಾರ ಇಟ್ಟುಕೊಂಡು, ಬೇಕೆಂದೇ ಬೇರೆ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎನ್ನುವ ಮಾತು ಚರ್ಚೆಗಳು ಸಹ ಕೇಳಿಬರುತ್ತಿದೆ. ಕೆಲವು ಟ್ರೋಲ್ ಪೇಜ್ ಗಳು ಈ ವಿಷಯವಾಗಿ ಕೂಡ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಇನ್ನಷ್ಟು ಜನರು ಆ ಎಲ್ಲಾ ಅಂಶಗಳನ್ನು ಬದಿಗಿಟ್ಟು ಆತ ಒಬ್ಬ ಹೆಣ್ಣುಮಗಳ ಪರವಾಗಿ ನಿಂತಿದ್ದಾನೆ ಅನ್ನೋದಕ್ಕೆ ಗೌರವ ಕೊಡಬೇಕು ಎಂದು ಹೇಳುತ್ತಿದ್ದಾರೆ. ಸಮೀರ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಿರುವುದು ಒಂದು ಕಡೆಯಾದರೆ, ಆತ ಮಾಡಿರುವ ಒಂದು ವಿಡಿಯೋ ವೈರಲ್ ಆದ ನಂತರ ವೈಯಕ್ತಿಕವಾಗಿ ಆತನ ಪರಿಸ್ಥಿತಿ ಬೇರೆ ರೀತಿಯೇ ಆಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಕೆಲವರು ಸಮೀರ್ ನ ಅಡ್ರೆಸ್ ಮತ್ತು ಫೋನ್ ನಂಬರ್ ಹಾಗೂ ಪರ್ಸನಲ್ ಡೀಟೇಲ್ಸ್ ಗಳನ್ನು ಲೀಕ್ ಮಾಡಿದ್ದಾರೆ.
ಇದರಿಂದ ಆ ಹುಡುಗನಿಗೆ ನೂರಾರು ಜನರಿಂದ ಬೆದರಿಕೆ ಕರೆಗಳು ಬರುವುದಕ್ಕೆ ಶುರುವಾಗಿದೆ. ಒಮ್ಮಿಂದೊಮ್ಮೆಗೆ ಈ ರೀತಿ ಆಗಿದ್ದು, ತನ್ನ ಜೀವದ ಕಥೆ ಏನು? ಏನಾಗುತ್ತದೆಯೋ ಏನೋ ಎನ್ನುವ ಭಯ ಆತನಿಗೆ ಶುರುವಾಗಿ, ಏನು ಮಾಡಬೇಕು ಎಂದು ಗೊತ್ತಾಗದೇ ಈ ಕೇಸ್ ನಲ್ಲಿ ಹೋರಾಟ ಮಾಡುತ್ತಿರುವ ಗಿರೀಶ್ ಮಟ್ಟಣ್ಣವರ್ ಅವರನ್ನು ಕಾಂಟ್ಯಾಕ್ ಮಾಡಿ, ಅವರು ಸಮೀರ್ ಪರವಾಗಿ ನಿಂತಿದ್ದಾರೆ. ಸಮೀರ್ ಗೆ ಈ ರೀತಿ ಆಗ್ತಿದೆ ಎಂದು ಗೊತ್ತಾದ ಬಳಿಕ, ಆತನ ಮನೆಗೆ ಮಟ್ಟಣ್ಣವರ್ ಅವರು ಹೋಗಿದ್ದು, ಅವರು ಹೋದ ಸ್ವಲ್ಪ ಹೊತ್ತಿಗೆ ಸಮೀರ್ ಮನೆಗೆ ಪೊಲೀಸರು ಬಂದು ನೋಟಿಸ್ ಕೊಟ್ಟಿದ್ದಾರೆ. ಅರೆಸ್ಟ್ ವಾರೆಂಟ್ ಅನ್ನು ನೀಡಿದ್ದಾರೆ. ಕೂಡಲೇ ಮಟ್ಟಣ್ಣವರ್ ಅವರೇ ಸಮೀರ್ ಗೆ ಒಂದು ಲಾಯರ್ ಅನ್ನು ಅರೇಂಜ್ ಮಾಡಿದ್ದಾರೆ..
ಲಾಯರ್ ಆಫೀಸ್ ಗೆ ಹೋಗಿ, ನಡೆದಿದ್ದನ್ನು ಅಲ್ಲಿಂದಲೇ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ತಮ್ಮ ಬಳಿ ದಾಖಲೆ, ಸಾಕ್ಷಿ ಎಲ್ಲವೂ ಇದೆ ಯಾವ ಭಯವೂ ಇಲ್ಲ ಎಂದು ಗಿರೀಶ್ ಅವರು ಸಮೀರ್ ಪರವಾಗಿ ಮಾತನಾಡಿದರು. ಒಂದು ಘಟನೆ, ಒಂದು ವಿಡಿಯೋ ಯಾವ ಹಂತಕ್ಕೆ ಸುದ್ದಿ ಮಾಡಿದೆ, ಅದರಿಂದ ಆ ಹುಡುಗನ ಜೀವಕ್ಕೆ ಎಷ್ಟು ಅಪಾಯ ತಂದಿದೆ ಅಂದ್ರೆ ಆ ಘಟನೆಯ ತೀವ್ರತೆ ಎಷ್ಟರ ಮಟ್ಟಿಗೆ ಇರಬಹುದು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೋರ್ಟ್ ನಲ್ಲಿ ಇಂದು ವಾದ ಪ್ರತಿವಾದ ನಡೆದಿದ್ದು ಗಿರೀಶ್ ಮಟ್ಟಣ್ಣವರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡಿದ್ದಾರೆ. ಸಮೀರ್ ಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ನೆಟ್ಟಿಗರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ, ಹೋರಾಟ ಮಾಡುವವರಿಗೆ ಹುಮ್ಮಸ್ಸು ಸಿಕ್ಕಿದೆ ಎಂದು ಹೇಳಿದರೂ ಕೂಡ ತಪ್ಪಲ್ಲ..
“ಸಮೀರ್ ಗೆ big ರಿಲೀಫ್. Arrest ಮಾಡುವ ಹಾಗಿಲ್ಲ. ಪೊಲೀಸ್ ಠಾಣೆಗೂ ಕರೆಯುವ ಹಾಗಿಲ್ಲ. ಕಾನೂನು ಉಲ್ಲಂಘಸಿ ಪೋಲೀಸರು ನೋಟೀಸ್ ಕೊಟ್ಟಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ನಮ್ಮ ರಾಜ್ಯದಲ್ಲಿ ಕಾನೂನಿನ ವ್ಯವಸ್ಥೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಕೋರ್ಟ್ ನಲ್ಲಿ ಜಡ್ಜ್ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ವಿಚಾರವನ್ನು ಸಹ ನಾವಿಲ್ಲಿ ಮೆಚ್ಚಿಕೊಳ್ಳಲೇಬೇಕು. ಒಟ್ಟಿನಲ್ಲಿ ಇದು ಒಳ್ಳೆಯ ಬೆಳವಣಿಗೆ ಮುಂದೆ ಇದೇ ರೀತಿ ಸಾಗಿ, ಆ ಹೆಣ್ಣುಮಗುವಿಗೆ ನ್ಯಾಯ ಸಿಗುವಂತಾಗಲಿ.