ಜೀಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಅಮೃತಧಾರೆ ಕೂಡ ಒಂದು. ಹಿಂದಿಯ ಬಡೇ ಅಚ್ಛೆ ಲಗ್ತೆ ಹೇ ಧಾರಾವಾಹಿಯ ರಿಮೇಕ್ ಆಗಿದ್ದರು ಸಹ ಅಮೃತಧಾರೆಗೆ ಕನ್ನಡದಲ್ಲಿ ಇನ್ನಿಲ್ಲದ ಕ್ರೇಜ್. ಮಿಡ್ಲ್ ಏಜ್ ಲವ್ ಸ್ಟೋರಿ ವಿಚಾರದಲ್ಲಿ ಈ ಧಾರಾವಾಹಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರೆ ತಪ್ಪಲ್ಲ. 45 ವರ್ಷದ ಸಿಂಗಲ್, ಯಶಸ್ವಿ ಬ್ಯುಸಿನೆಸ್ ಮ್ಯಾನ್, 35 ವರ್ಷದ ಮಿಡ್ಲ್ ಕ್ಲಾಸ್ ಟೀಚರ್ ಭೂಮಿಕಾ ಕಥೆ ಇದು. ಶುರುವಿನಿಂದಲು ಈ ಎರಡು ಪಾತ್ರಗಳು ಜನರಿಗೆ ಬಹಳ ಇಷ್ಟವಾಗಿದೆ. ಗೌತಮ್ ಧಿವಾನ್ ಆಗಿ ನಟ ರಾಜೇಶ್ ನಟರಂಗ ಅವರು, ಭೂಮಿಕಾ ಆಗಿ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಛಾಯಾ ಸಿಂಗ್ ಅವರು ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿ ಜನರಿಗೆ ಹತ್ತಿರ ಆಗುವುದಕ್ಕೆ ಕಾರಣ ಈ ಎರಡು ಪಾತ್ರಗಳ ಅದ್ಭುತ ಅಭಿನಯ ಎಂದರೆ ತಪ್ಪಲ್ಲ. ಇಬ್ಬರು ಕಲಾವಿದರು ಅಷ್ಟು ಅಚ್ಚುಕಟ್ಟಾಗಿ ನಟಿಸುತ್ತಿದ್ದಾರೆ.

ಬಹಳ ವರ್ಷಗಳ ನಂತರ ಛಾಯಾ ಸಿಂಗ್ ಅವರು ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದು ಇದೇ ಧಾರಾವಾಹಿಯ ಮೂಲಕ. ಈ ಮೊದಲು ಹಲವು ವರ್ಷಗಳ ಹಿಂದೆ ರಾಜೇಶ್ ಅವರು ಮತ್ತು ಛಾಯಾ ಅವರು ಬೇರೊಂದು ಧಾರಾವಾಹಿಯಲ್ಲಿ ನಟಿಸಿದ್ದರಂತೆ. ಬಳಿಕ ಛಾಯಾ ಸಿಂಗ್ ಅವರು ಸಿನಿಮಾಗಳಲ್ಲಿ ಬ್ಯುಸಿ ಆದರು, ತೆಲುಗು ತಮಿಳು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲ ನಟಿಸಿ, ತಮಿಳು ಕಿರುತೆರೆಯಲ್ಲಿ ಕೂಡ ಕೆಲಸ ಮಾಡುತ್ತಿದ್ದರು. ನಂತರ ಮದುವೆಯಾಗಿ ಚೆನ್ನೈನಲ್ಲೇ ಸೆಟ್ಲ್ ಆಗಿದ್ದರು ಛಾಯಾ ಸಿಂಗ್. ಕನ್ನಡದಲ್ಲಿ ಶಿವಣ್ಣ ಅವರ Mufti ಸಿನಿಮಾ ಮೂಲಕ ಅವರ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿದ್ದರು. ಇದಾದ ಒಂದೆರಡು ವರ್ಷಗಳ ನಂತರ ಇವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದು ಅಮೃತಧಾರೆ ಮೂಲಕ.
ಇನ್ನು ರಾಜೇಶ್ ಅವರು ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿ ಇದ್ದವರು. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ, ಜೊತೆಗೆ ಆಗಾಗ ಕಿರುತೆರೆಯಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದರು. ಕನ್ನಡ ಕಿರುತೆರೆ ಲೋಕದ ಅದ್ಭುತ ಕಲಾವಿದರಲ್ಲಿ ರಾಜೇಶ್ ಅವರು ಕೂಡ ಒಬ್ಬರು. ಇಂಥ ಇಬ್ಬರು ಅದ್ಭುತ ಕಲಾವಿದರು ಜೊತೆಯಾಗಿ ನಟಿಸುತ್ತಿರುವ ಧಾರಾವಾಹಿ ಅಮೃತಧಾರೆ. ಈ ಧಾರಾವಾಹಿಯಲ್ಲಿ ವನಿತಾ ವಾಸು ಅವರು, ಸಿಹಿ ಕಹಿ ಚಂದ್ರು ಅವರು, ಚಿತ್ರ ಶಣೈ ಅವರು, ಚಿತ್ಕಲಾ ಬಿರಾದರ್ ಅವರು, ಕರಣ್ ಅವರು ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕಥೆಯ ವಿಚಾರಕ್ಕೆ ಬಂದರೆ ಅತ್ಯುತ್ತಮವಾಗಿ ಸಾಗುತ್ತಿದೆ ಎಂದರೆ ತಪ್ಪಲ್ಲ. ಭೂಮಿ ಗೌತಮ್ ನಡುವಿನ ಪ್ರೀತಿ, ಅವರಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುವ ಪರಿ ವೀಕ್ಷಕರಿಗೆ ಅಚ್ಚುಮೆಚ್ಚು.

ಕಿರುತೆರೆ ವೀಕ್ಷಕರ ಮೆಚ್ಚಿನ ಜೋಡಿ ಇವರಿಬ್ಬರು ಎಂದು ಹೇಳಿದರು ಕೂಡ ತಪ್ಪಲ್ಲ. ಈ ಜೋಡಿ ಮಾಡಿದ ಮೋಡಿ ಹೇಗಿದೆ ಅಂದ್ರೆ ಗಂಡ ಹೆಂಡತಿ ಅಂದರೆ ಭೂಮಿ ಗೌತಮ್ ಥರ ಇರಬೇಕು ಎಂದು ಅನ್ನಿಸುವ ಹಾಗಿದೆ. ಅವರಿಬ್ಬರ ಕೆಮಿಸ್ಟ್ರಿ, ಆ ದೃಶ್ಯಗಳು ಅದೆಲ್ಲವೂ ಕೂಡ ಇವರಿಬ್ಬರು ಪಾತ್ರಗಳಲ್ಲಿ ನಟಿಸುತ್ತಿಲ್ಲ, ಜೀವಿಸುತ್ತಿದ್ದಾರೆ ಎಂದು ಅನ್ನಿಸುವ ಹಾಗೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಗೌತಮ್ ಭೂಮಿಕಾ ಫ್ಯಾನ್ ಪೇಜ್ ಗಳು ಸಿಕ್ಕಾಪಟ್ಟೆ ಕಂಡುಬಂದಿದೆ..ಜೀಕುಟುಂಬ ಅವಾರ್ಡ್ಸ್ ನಲ್ಲಿ ಕೂಡ ಅತ್ಯುತ್ತಮ ಜೋಡಿ ಅವಾರ್ಡ್ ಸಿಕ್ಕಿದ್ದು ಇವರಿಗೆ. ಜನರಿಗೆ ಅಷ್ಟರ ಮಟ್ಟಕ್ಕೆ ಇವರಿಬ್ಬರ ಜೋಡಿ ಇಷ್ಟವಾಗಿದೆ. ಇದು ಧಾರಾವಾಹಿಯ ಹೊರಗೆ ಜನರಿಗೆ ಇಷ್ಟ ಆಗಿರುವ ವಿಚಾರಗಳು. ಇನ್ನು ಧಾರಾವಾಹಿಯ ಕಥೆ ಬೇರೆ ರೀತಿಯಲ್ಲೇ ಸಾಗುತ್ತಿದೆ.
ಕೆಲ ದಿನಗಳ ಹಿಂದೆ ಭೂಮಿ ವಾಂತಿ ಮಾಡಿದ್ದು ನೋಡಿ ಆಕೆ ಗರ್ಭಿಣಿ ಇರಬಹು ಎಂದು ಊಹೆ ಶುರುವಾಯಿತು. ಭೂಮಿಗೂ ಅದೇ ರೀತಿ ಅನ್ನಿಸಿತು. ಆದರೆ ಶಕುಂತಲಾ ಮಾಡಿದ ಕುತಂತ್ರದಿಂದ ವೈದ್ಯರು ಭೂಮಿಗೆ ಗರ್ಭಕೋಶದಲ್ಲಿ ಸಮಸ್ಯೆ ಇದೆ, ಅವಳಿಗೆ ಮಕ್ಕಳಾಗುವುದಿಲ್ಲ ಎಂದುಬಿಟ್ಟರು. ಈ ವಿಚಾರ ಮನೆಯವರಿಗೆ ಗೊತ್ತಾಗಬಾರದು ಎಂದು ತನಗೆ ಸಮಸ್ಯೆ ಇದೆ ಎಂದು ಗೌತಮ್ ಹೇಳುತ್ತಾನೆ. ಆದರೆ ಶಕುಂತಲಾ ಈ ವಿಷಯವನ್ನು ಭೂಮಿಕಾಗೆ ಗೊತ್ತಾಗುವ ಹಾಗೆ ಮಾಡಿ. ಮಗು ಆಗಬೇಕಿರುವ ಕಾರಣಕ್ಕೆ ಭೂಮಿಕಾ ನಿಂತು ಗೌತಮ್ ಗೆ ಇನ್ನೊಂದು ಮದುವೆ ಮಾಡಬೇಕು ಎಂದು ಹೇಳಿ, ಈಗಾಗಲೇ ತಾನು ಗೌತಮ್ ಗೆ ಒಂದು ಹುಡುಗಿಯನ್ನು ಹುಡುಕಿರುವುದಾಗಿ ಹೇಳಿದಳು ಶಕುಂತಲಾ. ಭೂಮಿಕಾ ಮೊದಲಿಗೆ ತಾನು ಆಕೆಯನ್ನು ಭೇಟಿ ಮಾಡಿ, ನಂತರ ಗೌತಮ್ ನನ್ನು ಒಪ್ಪಿಸುವುದಾಗಿ ಹೇಳುತ್ತಾಳೆ.
ಅದೇ ರೀತಿ ಅತ್ತೆ ನೋಡಿದ ಹುಡುಗಿ ಮಧುರಾಳನ್ನು ಭೇಟಿ ಮಾಡುತ್ತಾಳೆ ಭೂಮಿಕಾ. ಮಧುರಾ ಒಳ್ಳೆಯ ಹುಡುಗಿ ಆಗಿರುವ ಕಾರಣ ಭೂಮಿಗೆ ಇಷ್ಟವಾಗುತ್ತಾಳೆ. ಮಧುರಾ ತನ್ನ ಬೆಸ್ಟ್ ಫ್ರೆಂಡ್ ಎಂದು ಗೌತಮ್ ಗೆ ಹೇಳುವ ಭೂಮಿ, ಗೌತಮ್ಮ್ ಆಕೆಯನ್ನು ಮೀಟ್ ಮಾಡಲೇಬೇಕು ಎನ್ನುತ್ತಾಳೆ. ಭೂಮಿ ಫೋರ್ಸ್ ಮಾಡೋದಕ್ಕೆ ಮಧುರಾಳನ್ನು ಗೌತಮ್ ಮೀಟ್ ಮಾಡುತ್ತಾನೆ. ಆಕೆಯ ನಗು ತುಂಬಾ ಚೆನ್ನಾಗಿದೆ ಎಂದು ಕೂಡ ಹೇಳುತ್ತಾನೆ. ಗೌತಮ್ ಎದುರಲ್ಲಿ ಮಧುರಾ ತನ್ನ ಮದುವೆ ಗೌತಮ್ ಜೊತೆಗೆ ಆಗಲಿದೆ ಎಂದು ಹೇಳಿದ್ದನ್ನು ಕೇಳಿ ಗೌತಮ್ ಶಾಕ್ ಆಗುತ್ತಾನೆ. ಆದರೆ ಮದುವೆಗೂ ಒಪ್ಪಿಕೊಳ್ಳುತ್ತಾನೆ. ಗೌತಮ್ ಇನ್ನೊಂದು ಮದುವೆಯಾದ್ರೆ ಏನಪ್ಪಾ ಗತಿ ಎಂದುಕೊಂಡಿದ್ದ ವೀಕ್ಷಕ ವಲಯಕ್ಕೆ ಇಯ ಬಿಗ್ ಶಾಕ್ ಸಿಕ್ಕಿದೆ.

ಮದುವೆ ದಿವಸ ಎಲ್ಲವೂ ಸಿದ್ಧತೆಯಾಗಿದೆ, ಗೌತಮ್ ಮನೆಯಲ್ಲೇ ಮದುವೆ ನಡೆಯುತ್ತಿದೆ. ಗೌತಮ್ ಮಧುರ ಹಾರ ಬದಲಾಯಿಸಿಕೊಳ್ಳುತ್ತಾರೆ. ಆದರೆ ಗೌತಮ್ ಮಧುರಾಗೆ ತಾಳಿ ಕಟ್ಟುವುದಿಲ್ಲ. ಭೂಮಿಕಾ ತಾಳಿ ಕಟ್ಟಿ, ಭೂಮಿಕಾ ಮಾತ್ರ ತನ್ನ ಹೆಂಡತಿ ಎಲ್ಲಾ ಜನ್ಮದಲ್ಲೂ ಎಂದು ಹೇಳುತ್ತಾನೆ. ಈ ಪ್ರೊಮೋವನ್ನ ಜೀಕನ್ನಡ ವಾಹಿನಿ ಶೇರ್ ಮಾಡಿದ್ದು, ಕೇವಲ. 36 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಧಾರಾವಾಹಿ ವೀಕ್ಷಕರಿಗೆ ತುಂಬಾ ಇಷ್ಟ ಆಗುವಂಥ ಸನ್ನಿವೇಶಗಳನ್ನೇ ಕಥೆಯ ರೂಪದಲ್ಲಿ ತರುತ್ತಿರುವ ತಂಡ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಡ ಹೆಂಡತಿ ನಡುವೆ ಇರುವ ಪ್ರೀತಿ ಇವರಿಬ್ಬರ ಹಾಗೆ ಇರಬೇಕು, ಕಥೆ ಅಂದರೆ ಈ ರೀತಿ ಬರಬೇಕು ಎನ್ನುತ್ತಿದ್ದಾರೆ ಗೌತಮ್ ಭೂಮಿಕಾ ಹಾಗು ಕನ್ನಡ ಕಿರುತೆರೆಯ ಫ್ಯಾನ್ಸ್.