ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ದೇವರ ಮಂತ್ರ ಜಪಿಸಿ, ದೇವರ ಫೋಟೋ ನೋಡಿ ಈ ದಿನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಗ್ರಹಗತಿಗಳು ನಿಮ್ಮ ಪರವಾಗಿದ್ದರೆ ಖಂಡಿತ ದಿನ ಚೆನ್ನಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಸಮಸ್ಯೆ ಬೆನ್ನೇರುತ್ತದೆ. ಇಂದು 9 ಡಿಸೆಂಬರ್ 2024, ಸೋಮವಾರ. ಈ ದಿನ 12 ರಾಶಿಗಳಿಗೆ ದಿನ ಹೇಗಿರಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಕೌಟುಂಬಿಕ ವಿಷಯಗಳತ್ತ ಗಮನ ಹರಿಸುವ ದಿನವಾಗಿರುತ್ತದೆ. ದಿನವಿಡೀ ಕೆಲಸದ ಜೊತೆಗೆ ನಿಮ್ಮ ಕುಟುಂಬದ ಕೆಲಸಕ್ಕೂ ಗಮನ ಕೊಡಬೇಕಾಗುತ್ತದೆ. ನಿಮ್ಮ ವೈಯಕ್ತಿಕ, ವೃತ್ತಿ ಜೀವನದ ಯಾವುದೇ ವಿಚಾರವಾದರೂ ಹಿರಿಯರ ಸಲಹೆ ಪಡೆದು ಮುಂದುವರೆಯಿರಿ.ಇಲ್ಲದಿದ್ದರೆ ನೀವು ನಂತರ ವಿಷಾದಿಸುತ್ತೀರಿ. ಕುಟುಂಬದಲ್ಲಿ ಕೆಲವು ಶುಭ ಸಮಾರಂಭ ಅಥವಾ ಪೂಜೆ ಇತ್ಯಾದಿಗಳು ನಡೆಯುವ ಸಾಧ್ಯತೆ ಇದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ದಿನದ ಆರಂಭ ಸ್ವಲ್ಪ ದುರ್ಬಲವಾಗಿರುತ್ತದೆ. ನಿಮ್ಮ ಕೆಲಸದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ಅದನ್ನು ಬೇರೆಯವರಿಗೆ ಬಿಟ್ಟರೆ ನಷ್ಟವಾಗುತ್ತದೆ. ಆಸ್ತಿ ವಿತರಕರಾಗಿ ಕೆಲಸ ಮಾಡುವ ಜನರು ದೊಡ್ಡ ವ್ಯವಹಾರದ ಮಾತುಕತೆ ನಡೆಸುತ್ತಾರೆ, ಆದರೆ ಅದರಿಂದ ಅಪೇಕ್ಷಿತ ಲಾಭವನ್ನು ಪಡೆಯದ ಕಾರಣ ಸ್ವಲ್ಪ ಉದ್ವಿಗ್ನತೆ ಇರುತ್ತದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರೀತಿಯಲ್ಲಿರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು,
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಫಲಪ್ರದವಾಗಲಿದೆ. ನೀವು ಯಾರ ಮಾತಿಗೂ ಗಮನ ಕೊಡದೆ ನೀವು ವಹಿಸಿಕೊಂಡಿರುವ ಜವಾಬ್ಧಾರಿಯತ್ತ ಗಮನ ನೀಡಿ. ಇದರಿಂದ ನೀವು ಮಾಡುವ ಕೆಲಸದಲ್ಲಿ ಸಕ್ಸಸ್ ದೊರೆಯುವುದೇ ಹೊರತು ಸಮಸ್ಯೆ ಉಂಟಾಗುವುದಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಯಿಂದ ನೀವು ಸಹಾಯ ಪಡೆಯಬೇಕಾಗಬಹುದು. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಬಹುದು. ಯಾವುದೇ ಕೆಲಸದ ಬಗ್ಗೆ ಯಾರೊಂದಿಗೂ ಮಾತನಾಡಲು ನೀವು ಆತುರಪಡಬಾರದು
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಅದು ನಿಮಗೆ ಸಂತೋಷವನ್ನು ನೀಡುತ್ತದೆ, ಅದರ ಜೊತೆ ವೆಚ್ಚಗಳು ಸಹ ಹೆಚ್ಚಾಗುತ್ತವೆ, ಇದರಿಂದಾಗಿ ನಿಮ್ಮ ಸಮಸ್ಯೆಗಳು ಬಗೆಹರಿಯದೆ ಹಾಗೇ ಉಳಿಯುತ್ತದೆ. ಅನಗತ್ಯವಾಗಿ ಖರ್ಚು ಮಾಡುವುದನ್ನು ನಿಲ್ಲಿಸದಿದ್ದರೆ ಹಣಕಾಸಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ, ಆದರೆ ನಿಮ್ಮ ವಿರೋಧಿಗಳಿಂದ ಸ್ವಲ್ಪ ಅಡೆತಡೆ ಉಂಟಾಗಬಹುದು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಪ್ರಗತಿಯ ದಿನವಾಗಿರುತ್ತದೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಕುಟುಂಬ ಸದಸ್ಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಆದರೆ ಎದುರಾಳಿಯ ಮಾತುಗಳಿಂದ ಮನಸ್ತಾಪ ಉಂಟಾಗುವ ಸಾಧ್ಯತೆಯಿದೆ. ನೀವು ಯಾರೊಂದಿಗಾದರೂ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವ್ಯವಹಾರದಲ್ಲಿ ಅಪರಿಚಿತರನ್ನು ನಂಬಬೇಡಿ. ನೀವು ವಾಹನಗಳಲ್ಲಿ ದೂರ ಪ್ರಯಾಣಿಸಬೇಕಾದರೆ ಮುನ್ನೆಚರಿಕೆಯಿಂದ ಇರಬೇಕು.
ಕನ್ಯಾ ರಾಶಿ
ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ನಿಮಗೆ ಉತ್ತಮ ದಿನವಾಗಿದೆ. ನೀವು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ, ಕೆಲಸ ಹುಡುಕುತ್ತಿರುವ ಜನರು ಒಳ್ಳೆ ಸುದ್ದಿಗಳನ್ನು ಕೇಳಬಹುದು. ಹಳೆಯ ವಹಿವಾಟಿನಿಂದ ನಿಮಗೆ ತೊಂದರೆಯಾಗಬಹುದು. ಆಸ್ತಿ ವಿಚಾರದಲ್ಲಿ ಬಾಕಿ ಉಳಿದಿರುವ ಕೆಲಸವನ್ನು ಮತ್ತೆ ಆರಂಭಿಸಬಹುದು. ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶ ಸಿಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಅದು ನಿಮಗೆ ಸಂತೋಷವನ್ನು ನೀಡುತ್ತದೆ, ಆದರೆ ಕೆಲವು ವಿಷಯಗಳಲ್ಲಿ ಕುಟುಂಬ ಸದಸ್ಯರ ನಡುವೆ ಘರ್ಷಣೆ ಹೆಚ್ಚಾಗಬಹುದು, ಇದರಿಂದ ನಿಮ್ಮ ಮೂಡ್ ಹಾಳಾಗಬಹುದು. ವಾಹನಗಳನ್ನು ಎಚ್ಚರಿಕೆಯಿಂದ ಬಳಸಬೇಕು, ಇಲ್ಲದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ
ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ನೀವು ಕಲಿಯಬೇಕಾಗುತ್ತದೆ ಮತ್ತು ವಹಿವಾಟು ಸಂಬಂಧಿತ ವಿಷಯಗಳ ಬಗ್ಗೆ ಅಪರಿಚಿತರನ್ನು ನಂಬಬೇಡಿ, ಇಲ್ಲದಿದ್ದರೆ ನಿಮಗೆ ಸಮಸ್ಯೆ ಉಂಟಾಗಬಹುದು. ನಿಮ್ಮ ವ್ಯಾಪಾರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ, ಅದರಿಂದ ನೀವು ಖುಷಿಯಾಗಲಿದ್ದೀರಿ. ಪ್ರಮುಖವಾದ ಕೆಲಸಗಳಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಯಬಹುದು.
ಧನು ರಾಶಿ
ಧನು ರಾಶಿಯವರಿಗೆ ಇಂದು ಸಂತಸದ ದಿನವಾಗಲಿದೆ. ಏಕೆಂದರೆ ನೀವು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ. ನಿಮ್ಮ ಮಕ್ಕಳು ಯಾವುದೇ ಸ್ಕಾಲರ್ಶಿಪ್ ಸಂಬಂಧಿತ ಪರೀಕ್ಷೆಗೆ ಹಾಜರಾಗಿದ್ದರೆ ಅವರು ಅದರಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಮನೆಗೆ ಬರುವ ಅಪರೂಪದ ಅತಿಥಿಗಳಿಂದ ನಿಮಗೆ ಖುಷಿಯಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ದಿನದ ಆರಂಭ ಸ್ವಲ್ಪ ದುರ್ಬಲವಾಗಿರುತ್ತದೆ. ಆದರೆ ನಂತರ ಎಲ್ಲವೂ ಸರಿ ಆಗಲಿದೆ, ವ್ಯಾಪಾರದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಹೊಸ ಕೆಲಸಗಳಲ್ಲಿ ಆಸಕ್ತಿ ಉಂಟಾಗಬಹುದು. ಇದರಲ್ಲಿ ಕುಟುಂಬದ ಸದಸ್ಯರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ನಿಮ್ಮ ಸಂಗಾತಿಗೆ ನೀವು ಯಾವುದೇ ಭರವಸೆ ನೀಡಿದ್ದರೆ, ನೀವು ಅದನ್ನು ಸುಲಭವಾಗಿ ಪೂರೈಸುತ್ತೀರಿ. ನಿಮ್ಮ ಸ್ನೇಹಿತರಲ್ಲಿ ಒಬ್ಬರು ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗಲು ಬರಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲವು ಹಳೆಯ ತಪ್ಪುಗಳಿಂದ ಪಾಠ ಕಲಿಯುವಿರಿ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಅದು ನಿಮಗೆ ಸಂತೋಷ ನೀಡುತ್ತದೆ. ಆಸ್ತಿ ವಿಚಾರದಲ್ಲಿ ಅಣ್ಣ-ತಂಗಿಯರ ನಡುವೆ ಯಾವುದಾದರೂ ಜಗಳ ನಡೆಯುತ್ತಿದ್ದರೆ ಅದನ್ನೂ ಒಟ್ಟಿಗೆ ಕೂತು ಮಾತನಾಡಿ ಬಗೆಹರಿಸಿಕೊಳ್ಳಿ. ಇದರಿಂದ ರಕ್ತ ಸಂಬಂಧ ಗಟ್ಟಿಯಾಗುತ್ತದೆ.
ಮೀನ ರಾಶಿ
ಮೀನ ರಾಶಿಯವರಿಗೆ ದಿನದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ, ನಿಮ್ಮ ಆತ್ಮೀಯರು ನಿಮಗೆ ನಂಬಿಕೆ ದ್ರೋಹ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಯಾರನ್ನೇ ಆಗಲಿ ಕುರುಡಾಗಿ ನಂಬಬೇಡಿ. ನಿಮ್ಮ ಮಕ್ಕಳೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗಬಹುದು. ನಿಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯ ಕಾಡಬಹುದು. ಇದರಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಬಹುದು.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.