ಮೊಟ್ಟೆ ಸಸ್ಯಹಾರವೋ ಅಥವಾ ಮಾಂಸಹಾರವೋ ಎಂಬ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ಭಾಗಶಃ ಜನರು ಮೊಟ್ಟೆಯನ್ನು ಇಷ್ಟಪಡುತ್ತಾರೆ. ಎಷ್ಟೇ ಇಷ್ಟ ಪಟ್ಟರೂ ಕೂಡ ಹೆಚ್ಚೆಂದರೆ ದಿನಕ್ಕೆ 2 ರಿಂದ 3 ಮೊಟ್ಟೆ ತಿನ್ನಬಹುದು. ಆದರೆ ಏಕಕಾಲಕ್ಕೆ ಬರೊಬ್ಬರಿ 31 ಮೊಟ್ಟೆಗಳಿಂದ ಮಾಡಿದ ಆಮ್ಲೆಟ್ ತಿನ್ನಲು ಸಾಧ್ಯವೆ. ಒಂದು ವೇಳೆ ಇದು ಸಾಧ್ಯವಾದರೆ ನಿಮಗೆ 1 ಲಕ್ಷ ಬಹುಮಾನ ಸಿಗುತ್ತದೆ. ಹೌದು ಹೀಗೊಂದು ಚಾಲೆಂಜಿಂಗ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ಹಾಗೂ ಡೀಟಿಯಲ್ಸ್ ಇಲ್ಲಿದೆ ನೋಡಿ.

https://www.instagram.com/reel/CyFpbLHBlhU/?utm_source=ig_web_copy_link
ದೆಹಲಿಯ ಸ್ಟ್ರೀಟ್ ಫುಡ್ ಮೇಕರ್ ರಾಜೀವ್ ಎಂಬಾತ ಜನರಿಗೆ ಇಂತಹದ್ದೊಂದು ಜಾಲೆಂಜ್ ಹಾಗೂ ಭರ್ಜರಿ ಬಹುಮಾನದ ಆಫರ್ ನೀಡಿದ್ದಾನೆ. 31 ಮೊಟ್ಟೆಗಳಿಂದ ತಯಾರಿಸಲಾಗಿರುವ ಆಮ್ಲೆಟ್ ತಿಂದು ತೋರಿಸಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 31 ಮೊಟ್ಟೆಗಳಿಂದ ತಯಾರಿಸಿದ ಈ ಬಾಹುಬಲಿ ಆಮ್ಲೆಟ್ ಹಾಗೂ ರಾಜೀವ್ ನೀಡಿದ ಆಫರ್ ಕಂಡು ಜನ ಈ ಅಂಗಡಿಗೆ ಮುಗಿಬೀಳುತ್ತಿದ್ದಾರೆ. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಾಜೀವ್ ಒಂದು ಪಾತ್ರೆಯಲ್ಲಿ 31 ಮೊಟ್ಟೆಗಳನ್ನು ಒಂದೊಂದಾಗಿ ಒಡೆದು ಆಮ್ಲೆಟ್ ಮಾಡಲು ಆರಂಭಿಸುವುದನ್ನು ನೀವು ನೋಡಬಹುದು. ಮೊದಲು ಅವರು ಬಾಣಲೆಯಲ್ಲಿ ಬಹಳಷ್ಟು ಬೆಣ್ಣೆಯನ್ನು ಹಾಕಿದ್ದಾರೆ ಮತ್ತು ನಂತರ ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮೆಟೊಗಳನ್ನು ಹಾಕಿದ್ದಾರೆ. ನಂತರ ಅವರು ಅದಕ್ಕೆ ಒಟ್ಟು 31 ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿದ್ದಾರೆ. ಇದಲ್ಲದೇ ಆಮ್ಲೆಟ್ ನಲ್ಲಿ ಹಲವು ವಸ್ತುಗಳನ್ನು ಬೆರೆಸಿ ಯಾರು ತಿಂದರೂ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಚಾಲೆಂಜ್ ಹಾಕಿದ್ದಾರೆ.