ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಹರಡಿದೆ. ನಿಶ್ಚಿತಾರ್ಥ ವಿಚಾರ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ಕೂಡ ವೈರಲ್ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ. ಇದೀಗ ವೈಷ್ಣವಿ ತಂದೆ ರವಿಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಬಗ್ಗೆ ಶಾಕ್ ಆಗಿದೆ ಎಂದು ವೈಷ್ಣವಿ ತಂದೆ ಹೇಳಿದ್ದಾರೆ.
ಮದುವೆ ಕ್ಯಾನ್ಸಲ್ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ನಮಗೂ ಶಾಕ್ ಆಗಿದೆ. ವೈಷ್ಣವಿ ರೂಂನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು.
ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳಿಗೆ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಹೇಳಿದ್ದಾರೆ. ಚಾಕೊಲೇಟ್ ಬಾಯ್ ಸಿನಿಮಾದಿಂದ ವಿದ್ಯಾಭರಣ್ ಪರಿಚಯ ಆಗಿದೆ. ಆ ಚಿತ್ರಕ್ಕೆ ವಿದ್ಯಾಭರಣ್ ಹೀರೋ, ನಮ್ಮ ಮಗಳು ವೈಷ್ಣವಿ ಹೀರೋಯಿನ್ ಆಗಿದ್ದರು.
ಆದರೆ, ಸಿನಿಮಾ ಸ್ಟಾಪ್ ಆಯ್ತು. ಅಲ್ಲಿಂದ ಅವರ ಕಾಂಟ್ಯಾಕ್ಟ್ ಮಿಸ್ ಆಗಿತ್ತು. ಬಳಿಕ ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ವಿದ್ಯಾಭರಣ್ ಕುಟುಂಬಸ್ಥರು ಬಂದಿದ್ದರು. ಅಲ್ಲಿಂದ ಎರಡು ಕುಟುಂಬದಲ್ಲಿ ಮತ್ತೆ ಸ್ನೇಹ ಸಂಬಂಧ ಶುರುವಾಯಿತು. ಎರಡು ಕುಟುಂಬಸ್ಥರು ಒಪ್ಪಿಕೊಂಡ ಮೇಲೆ ನಿಶ್ಚಿತಾರ್ಥ ಮಾಡೋಣ ಎಂದು ನಿರ್ಧರಿಸಿದ್ದೆವು. ಅಷ್ಟರಲ್ಲಿ ಈ ಘಟನೆ ನಡೆದಿದೆ ಅಂತಾ ವೈಷ್ಣವಿ ಗೌಡ ತಂದೆ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.